SK Home Ad
Home ನಮ್ಮ ಜಿಲ್ಲೆ ಹಾವೇರಿ ಅಣಬೆ ಸಾರು ಸೇವಿಸಿ ಒಂದೇ ಕುಟುಂಬದ 9 ಜನರು ಅಸ್ವಸ್ಥ

ಅಣಬೆ ಸಾರು ಸೇವಿಸಿ ಒಂದೇ ಕುಟುಂಬದ 9 ಜನರು ಅಸ್ವಸ್ಥ

0
9

ಹಾವೇರಿ: ಅಣಬೆ ಸಾರು ಸೇವನೆಯಿಂದ ವಾಂತಿ ಭೇದಿ ಕಾಣಿಸಿಕೊಂಡು ಒಂಭತ್ತು ಜನರು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಬ್ಯಾಡಗಿಯ ತಾಲೂಕಿನ ಬಿಸಲಹಳ್ಳಿ ಗ್ರಾಮದ ಬಂಗೇರ ಎನ್ನುವ ಒಂದೇ ಕುಟುಂಬದ ಒಂಭತ್ತು ಜನರು ಊಟದಲ್ಲಿ ಅಣಬೆ ಸಾರು ಸೇವಿಸಿದ ಪರಿಣಾಮ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವಾಂತಿ ಭೇದಿ ತೀವ್ರವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಂಗೇರ ರೈತಾಪಿ ಮನೆತನದಲ್ಲಿ 20ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಹೊಲದ ಬದುವಿನಲ್ಲಿ ಬೆಳೆದಿದ್ದ ಅಣಬೆ ತಂದು ಸಾಂಬಾರು ಮಾಡಿಕೊಂಡು ಊಟ ಮಾಡಿದ್ದರು. ನಂತರ ಎಲ್ಲರಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

ಮನೆಯಲ್ಲಿ ಇನ್ನುಳಿದ ಏಳೆಂಟು ಜನರು ಹಿರೇಕಾಯಿ ಪಲ್ಲೆ ಹಾಗೂ ಬೇರೆ ಸಾಂಬಾರು ಬಳಸಿದ್ದು ಅವರಿಗ್ಯಾರಿಗೂ ಏನೂ ಆಗಿರುವುದಿಲ್ಲ. ಒಂಭತ್ತು ಜನರಲ್ಲಿ ಈಗ ಇಬ್ಬರಿಗೆ ತೀವ್ರ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಹಾವೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲರೂ ಆರೋಗ್ಯವಾಗಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.