SK Home Ad
Home ಸುದ್ದಿ ದೇಶ ಹೈಡ್ರೋಜನ್ ರೈಲು ಯಶಸ್ಸು: 3,200 ಲೀಟರ್ ಡೀಸೆಲ್ ಉಳಿತಾಯ

ಹೈಡ್ರೋಜನ್ ರೈಲು ಯಶಸ್ಸು: 3,200 ಲೀಟರ್ ಡೀಸೆಲ್ ಉಳಿತಾಯ

0
58

ಭಾರತದ ಮೊದಲ ಹೈಡ್ರೋಜನ್ ರೈಲು ಯಶಸ್ವಿ ಪರೀಕ್ಷೆ; ಡೀಸೆಲ್‌ಗೆ ಪರ್ಯಾಯವಾಗಿ ಹಸಿರು ಸಾರಿಗೆಗೆ ಹೊಸ ಅಧ್ಯಾಯ

ನವದೆಹಲಿ : ಪರಿಸರ ಸ್ನೇಹಿ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಭಾರತೀಯ ರೈಲ್ವೆ ಹೈಡ್ರೋಜನ್ ಚಾಲಿತ ರೈಲು ಯೋಜನೆಯಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. 10 ಬೋಗಿಗಳನ್ನು ಹೊಂದಿರುವ ಹೈಡ್ರೋಜನ್ ರೈಲು, ಹರಿಯಾಣದ ಜಿಂದ್–ಸೋನಿಪತ್ ನಡುವಿನ 89 ಕಿಲೋಮೀಟರ್ ಮಾರ್ಗದಲ್ಲಿ ಪೈಲಟ್ ಯೋಜನೆಯಡಿ ಸಂಚರಿಸುತ್ತಿದ್ದು, ಡೀಸೆಲ್ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ.

ಈ ಯೋಜನೆ ಸಂಪೂರ್ಣವಾಗಿ ಭಾರತೀಯ ರೈಲ್ವೆಯ ಸ್ಥಳೀಯ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಸಾಮರ್ಥ್ಯದ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದ್ದು, ದೇಶದ ಹಸಿರು ಸಾರಿಗೆ ಕನಸಿಗೆ ಹೊಸ ಬಲ ನೀಡಿದೆ.

ಇದನ್ನೂ ಓದಿ: ಚುನಾವಣೆಗೆ ಸಿದ್ದರಾಮಯ್ಯ ಗುಡ್‌ ಬೈ: ಜನ ನಾಯಕನಾಗಿ ಜೈ!

ಹೈಡ್ರೋಜನ್ ಇಂಧನ ಕೋಶದಿಂದ ಸಂಚರಿಸುವ ರೈಲು : ಈ ರೈಲು ಸಾಮಾನ್ಯ ಡೀಸೆಲ್ ಎಂಜಿನ್‌ನ ಬದಲು ಹೈಡ್ರೋಜನ್ ಫ್ಯೂಯೆಲ್ ಸೆಲ್ (Hydrogen Fuel Cell) ತಂತ್ರಜ್ಞಾನವನ್ನು ಬಳಸುತ್ತದೆ. ಹೈಡ್ರೋಜನ್ ಮತ್ತು ಆಮ್ಲಜನಕದ ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಆ ವಿದ್ಯುತ್ ಮೂಲಕ ರೈಲು ಚಲಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೊರಬರುವ ಪ್ರಮುಖ ಉಪ ಉತ್ಪನ್ನ ನೀರು ಮಾತ್ರವಾಗಿರುವುದರಿಂದ ಕಾರ್ಬನ್ ಉತ್ಸರ್ಜನೆ ಬಹುತೇಕ ಇಲ್ಲದಂತಾಗುತ್ತದೆ.

ಪ್ರಮುಖ ವೈಶಿಷ್ಟ್ಯಗಳು : 10 ಬೋಗಿಗಳ ರೈಲು, ಗಂಟೆಗೆ 75 ಕಿ.ಮೀ ಗರಿಷ್ಠ ವೇಗ ಹೊಂದಿದ್ದು ಸುಮಾರು 2,600 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಜಿಂದ್–ಸೋನಿಪತ್ 89 ಕಿ.ಮೀ ಮಾರ್ಗದಲ್ಲಿ ಪೈಲಟ್ ಸೇವೆಯಲ್ಲಿ ಹೈಡ್ರೋಜನ್ ಫ್ಯೂಯೆಲ್ ಸೆಲ್ ಆಧಾರಿತ ಶುದ್ಧ ವಿದ್ಯುತ್ ಚಾಲನೆ 3,200 ಲೀಟರ್‌ಗಿಂತ ಹೆಚ್ಚು ಡೀಸೆಲ್ ಉಳಿತಾಯ ಮೂಲಕ ಪೈಲಟ್ ಯೋಜನೆಯಡಿ ರೈಲು ನಿಯಮಿತವಾಗಿ ಸಂಚರಿಸಿದ ಪರಿಣಾಮ 3,200 ಲೀಟರ್‌ಗಿಂತ ಹೆಚ್ಚು ಡೀಸೆಲ್ ಉಳಿತಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಪ್ರಲ್ಹಾದ್ ಜೋಶಿ

ಈ ಮೂಲಕ ಪರಿಸರ ಸಂರಕ್ಷಣೆ ಮಾತ್ರವಲ್ಲದೆ ಇಂಧನ ವೆಚ್ಚ ತಗ್ಗಿಸುವ ದಿಕ್ಕಿನಲ್ಲಿಯೂ ಯೋಜನೆ ಮಹತ್ವದ ಹೆಜ್ಜೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಮಾರ್ಗಗಳಿಗೆ ವಿಸ್ತರಣೆ ಸಾಧ್ಯತೆ : ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದೆಹಲಿ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಿಗೆ ಹೈಡ್ರೋಜನ್ ರೈಲು ಸೇವೆಯನ್ನು ವಿಸ್ತರಿಸುವ ಯೋಜನೆ ಇದೆ. ರೈಲಿನ ಸುರಕ್ಷತಾ ವ್ಯವಸ್ಥೆ, ಕಾರ್ಯಕ್ಷಮತೆ ಮತ್ತು ನಿರ್ವಹಣಾ ಸಾಮರ್ಥ್ಯದ ಕುರಿತು ಅಧಿಕಾರಿಗಳು ನಿರಂತರವಾಗಿ ಮೌಲ್ಯಮಾಪನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಏಷ್ಯನ್ ಜೂನಿಯರ್ ಪಿಕಲ್ಬಾಲ್‌ಗೆ ಭರ್ಜರಿ ಸಿದ್ಧತೆ: ಜೆರ್ಸಿ ಅನಾವರಣ

ಡೀಸೆಲ್ ಉಳಿತಾಯ ಲೆಕ್ಕಾಚಾರದ ಬಗ್ಗೆ ಪ್ರಶ್ನೆಗಳು : ಆದಾಗ್ಯೂ, ಈ ಯೋಜನೆಯ ಕುರಿತು ಕೆಲವು ತಜ್ಞರು ಡೀಸೆಲ್ ಉಳಿತಾಯದ ಲೆಕ್ಕಾಚಾರ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಹೈಡ್ರೋಜನ್ ರೈಲು ಕಾರ್ಯಾಚರಣೆಯ ನಿಖರ ಕಾರ್ಯಕ್ಷಮತೆ, ಉತ್ಪಾದನಾ ವೆಚ್ಚ ಹಾಗೂ ಇಂಧನ ಪರಿವರ್ತನೆಯ ಪರಿಣಾಮಗಳ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯತ್ತ ಭಾರತ ಕೈಗೊಂಡಿರುವ ಈ ಪ್ರಯತ್ನವನ್ನು ಹೆಚ್ಚಿನ ವಲಯಗಳು ಸ್ವಾಗತಿಸಿವೆ.

ಹಸಿರು ಸಾರಿಗೆಗೆ ಭಾರತದಿಂದ ಮಹತ್ವದ ಹೆಜ್ಜೆ : ಕಾರ್ಬನ್ ಉತ್ಸರ್ಜನೆ ಕಡಿಮೆ ಮಾಡಿ, ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಹೈಡ್ರೋಜನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ದೇಶದ ಹಸಿರು ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿದೆ. ಯೋಜನೆಯ ಯಶಸ್ಸು ಮುಂದಿನ ದಿನಗಳಲ್ಲಿ ಇನ್ನಷ್ಟು ಹೈಡ್ರೋಜನ್ ರೈಲುಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪರಿಚಯಿಸಲು ದಾರಿ ಮಾಡಿಕೊಡುವ ನಿರೀಕ್ಷೆಯಿದೆ.