SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಫಿಫಾ ಕ್ರೇಜ್: ಬೆಂಗಳೂರಲ್ಲಿ  ತಡರಾತ್ರಿಯೂ ಹೋಟೆಲ್ ಓಪನ್!

ಫಿಫಾ ಕ್ರೇಜ್: ಬೆಂಗಳೂರಲ್ಲಿ  ತಡರಾತ್ರಿಯೂ ಹೋಟೆಲ್ ಓಪನ್!

0
46

ಫುಟ್‌ಬಾಲ್ ಪ್ರೇಮಿಗಳಿಗಾಗಿ ಜುಲೈ 14, 15 ಮತ್ತು 19ರಂದು ಹೋಟೆಲ್‌, ರೆಸ್ಟೋರೆಂಟ್‌ಗಳು ಬೆಳಗಿನ ಜಾವದವರೆಗೆ ತೆರೆದಿರಲು ಅನುಮತಿ

ಬೆಂಗಳೂರು: ಫುಟ್‌ಬಾಲ್ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಫಿಫಾ ವಿಶ್ವಕಪ್ ಪಂದ್ಯಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಧ್ಯರಾತ್ರಿ ನಂತರವೂ ಆಹಾರ ಸೇವೆ ಮುಂದುವರಿಸಲು ವಿಶೇಷ ಅನುಮತಿ ನೀಡಿದೆ.

ವಿಶ್ವಕಪ್‌ನ ಪ್ರಮುಖ ಪಂದ್ಯಗಳನ್ನು ವೀಕ್ಷಿಸುವ ಅಭಿಮಾನಿಗಳ ಅನುಕೂಲಕ್ಕಾಗಿ ಜುಲೈ 14, 15 ಹಾಗೂ 19ರಂದು ಬೆಳಗಿನ ಜಾವ 3.30ರವರೆಗೆ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ವಾಂಗ್‌ಚುಕ್ ಬೆಂಬಲಕ್ಕೆ ನಿಂತ ‘3 Idiots’ ಚತುರ್: Video ವೈರಲ್!

ರೆಸ್ಟೋರೆಂಟ್ ಸಂಸ್ಥೆಯ ಮನವಿಗೆ ಸರ್ಕಾರ ಸ್ಪಂದನೆ : ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ (National Restaurant Association of India – NRAI) ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವಿಶ್ವಕಪ್ ಪಂದ್ಯಗಳು ತಡರಾತ್ರಿ ಹಾಗೂ ಮುಂಜಾನೆ ವೇಳೆಗೆ ನಡೆಯಲಿರುವ ಹಿನ್ನೆಲೆಯಲ್ಲಿ, ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಫುಟ್‌ಬಾಲ್ ಅಭಿಮಾನಿಗಳಿಗೆ ಸಂಭ್ರಮ : ಬೆಂಗಳೂರು ದೇಶದ ಪ್ರಮುಖ ಕ್ರೀಡಾ ನಗರಗಳಲ್ಲಿ ಒಂದಾಗಿದ್ದು, ಇಲ್ಲಿ ಫುಟ್‌ಬಾಲ್ ಅಭಿಮಾನಿಗಳ ಸಂಖ್ಯೆಯೂ ಗಣನೀಯವಾಗಿದೆ. ವಿಶ್ವಕಪ್‌ನ ಪ್ರಮುಖ ಪಂದ್ಯಗಳನ್ನು ಸಾರ್ವಜನಿಕ ವೀಕ್ಷಣಾ ಕೇಂದ್ರಗಳು, ಕಫೆಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ವೀಕ್ಷಿಸುವ ಸಂಪ್ರದಾಯವಿದ್ದು, ಸರ್ಕಾರದ ಈ ತೀರ್ಮಾನದಿಂದ ಫುಟ್‌ಬಾಲ್ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: TET ಪರೀಕ್ಷೆಯ ಹೊಸ ದಿನಾಂಕ ಘೋಷಣೆಗೆ ರಾಹುಲ್ ಆಗ್ರಹ

ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಕ್ಕೂ ಉತ್ತೇಜನ: ತಡರಾತ್ರಿ ಆಹಾರ ಸೇವೆಗೆ ಅನುಮತಿ ನೀಡಿರುವುದರಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಕ್ಕೂ ಇದು ನೆರವಾಗಲಿದೆ. ವಿಶ್ವಕಪ್ ಪಂದ್ಯಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುವ ನಿರೀಕ್ಷೆಯಿದ್ದು, ಉದ್ಯಮ ವಲಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.

ಸರ್ಕಾರದ ಈ ವಿಶೇಷ ಅನುಮತಿ ಕೇವಲ ಜುಲೈ 14, 15 ಮತ್ತು 19ರಂದು ಮಾತ್ರ ಅನ್ವಯವಾಗಲಿದ್ದು, ಉಳಿದ ದಿನಗಳಲ್ಲಿ ಸಾಮಾನ್ಯ ನಿಯಮಗಳೇ ಜಾರಿಯಲ್ಲಿರಲಿವೆ.