SK Home Ad
Home ಸುದ್ದಿ ದೇಶ 4 ವರ್ಷದ ಮಗಳನ್ನು ನೆಲಕ್ಕೆ ಎಸೆದು ಹಲ್ಲೆ ಮಾಡಿದ ತಂದೆ

4 ವರ್ಷದ ಮಗಳನ್ನು ನೆಲಕ್ಕೆ ಎಸೆದು ಹಲ್ಲೆ ಮಾಡಿದ ತಂದೆ

0
143

ಹರಿಯಾಣ: ನಾಲ್ಕು ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಹರಿಯಾಣದ ರೊಹ್ಟಕ್‌ನಲ್ಲಿ ನಡೆದಿದೆ.

ಸುರಭಿ (4) ಎಂಬ ಬಾಲಕಿ ಸ್ನೇಹಿತೆಯ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ತಾಯಿಯೊಂದಿಗೆ ತೆರಳಿದ್ದಳು. ನಂತರ ಮದ್ಯದ ಅಮಲಿನಲ್ಲಿ ಅಲ್ಲಿಗೆ ಬಂದಿದ್ದ ತಂದೆ ಜಿತೇಂದ್ರ, ಬಾಲಕಿಯನ್ನು ಎತ್ತಿಕೊಂಡು ಹಲವು ಬಾರಿ ನೆಲಕ್ಕೆ ಎಸೆದು ಹಲ್ಲೆ ನಡೆಸಿದ್ದಾನೆ.

ಈ ಘಟನೆ ಅಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಆಧರಿಸಿ ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಕ್ಷಮೆಯಾಚಿಸಿದ ಆರೋಪಿ: ಬಂಧನದ ಬಳಿಕ ಜಿತೇಂದ್ರ ತನ್ನ ಕೃತ್ಯಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾನೆ. ಇತ್ತ ಬಾಲಕಿಯ ತಾಯಿಯೂ ತನ್ನ ಪತಿಗೆ ಕಠಿಣ ಶಿಕ್ಷೆ ವಿಧಿಸಬಾರದು ಎಂದು ಪೊಲೀಸರ ಬಳಿ ಮನವಿ ಮಾಡಿರುವುದಾಗಿ ತಿಳಿದುಬಂದಿದೆ. ಸದ್ಯ ಗಾಯಗೊಂಡಿರುವ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.