SK Home Ad
Home ಸುದ್ದಿ ದೇಶ E20 ಎಥನಾಲ್ ಮಿಶ್ರಿತ ಇಂಧನ ಸುರಕ್ಷಿತ: ವಾಹನ ತಜ್ಞರ ಸ್ಪಷ್ಟನೆ

E20 ಎಥನಾಲ್ ಮಿಶ್ರಿತ ಇಂಧನ ಸುರಕ್ಷಿತ: ವಾಹನ ತಜ್ಞರ ಸ್ಪಷ್ಟನೆ

0
52

ಪೆಟ್ರೋಲ್‌ನಲ್ಲಿ ಶೇ.20 ಎಥನಾಲ್ ಮಿಶ್ರಣ ಹೊಂದಿರುವ E20 ಇಂಧನವು 2023ಕ್ಕೂ ಮುಂಚೆ ತಯಾರಾದ ವಾಹನಗಳಿಗೂ ಸುರಕ್ಷಿತವಾಗಿದೆ ಎಂದು ವಾಹನ ತಯಾರಕ ಸಂಸ್ಥೆಗಳು ಹಾಗೂ ಇಂಧನ ತಜ್ಞರು ಸ್ಪಷ್ಟಪಡಿಸಿದ್ದಾರೆ. ಎಂಜಿನ್ ಹಾನಿ, ವಿಮೆ ನಿರಾಕರಣೆ ಸೇರಿದಂತೆ ಹರಿದಾಡುತ್ತಿರುವ ವದಂತಿಗಳಿಗೆ ತಜ್ಞರು ಉತ್ತರ ನೀಡಿದ್ದು, E20 ಭಾರತದ ಇಂಧನ ಸ್ವಾವಲಂಬನೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ನವದೆಹಲಿ: ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥನಾಲ್ ಮಿಶ್ರಣ ಹೊಂದಿರುವ E20 ಇಂಧನ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಆತಂಕಗಳಿಗೆ ಕೇಂದ್ರ ಸರ್ಕಾರ ಹಾಗೂ ವಾಹನ ಉದ್ಯಮದ ತಜ್ಞರು ಸ್ಪಷ್ಟನೆ ನೀಡಿದ್ದಾರೆ. E20 ಇಂಧನವು ವ್ಯಾಪಕ ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಟ್ಟಿದ್ದು, 2023ಕ್ಕೂ ಮುಂಚೆ ತಯಾರಾದ ವಾಹನಗಳಿಗೂ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.

ನವದೆಹಲಿದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಹನ ತಯಾರಕ ಸಂಸ್ಥೆಗಳು, ಇಂಧನ ತಜ್ಞರು ಹಾಗೂ ಕೈಗಾರಿಕಾ ಪ್ರತಿನಿಧಿಗಳು, E20 ಯೋಜನೆ ಯಾವುದೇ ತುರ್ತು ನಿರ್ಧಾರವಲ್ಲ. 2018ರಿಂದಲೇ ಹಲವು ಹಂತಗಳಲ್ಲಿ ಸಂಶೋಧನೆ, ಪರೀಕ್ಷೆ ಹಾಗೂ ಸಮಾಲೋಚನೆಗಳ ಬಳಿಕ ದೇಶಾದ್ಯಂತ ಹಂತಹಂತವಾಗಿ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಹಾವೇರಿ ಮೂಲದ ಯೋಧ ಯಶೋಧರ ಕರ್ತವ್ಯದ ವೇಳೆ ಹುತಾತ್ಮ

ARAI ಮತ್ತು SIAM ವ್ಯಾಪಕ ಪರೀಕ್ಷೆ : ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಹಾಗೂ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಸಂಸ್ಥೆಗಳು ವಿವಿಧ ಮಾದರಿಯ ವಾಹನಗಳ ಮೇಲೆ ಹಲವು ವರ್ಷಗಳ ಕಾಲ ಪರೀಕ್ಷೆ ನಡೆಸಿವೆ. ಈ ಪರೀಕ್ಷೆಗಳಲ್ಲಿ E20 ಇಂಧನವು ಎಂಜಿನ್ ಕಾರ್ಯಕ್ಷಮತೆ, ಸುರಕ್ಷತೆ ಹಾಗೂ ವಾಹನದ ಭಾಗಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂಬುದು ದೃಢಪಟ್ಟಿದೆ.

ಐದು ವರ್ಷ ಮುಂಚೆಯೇ ಗುರಿ ಸಾಧನೆ : 2013-14ರಲ್ಲಿ ದೇಶದಲ್ಲಿ ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಕೇವಲ 1.5 ಶೇಕಡಾ ಮಾತ್ರ ಇತ್ತು. ಸರ್ಕಾರದ ನಿರಂತರ ಪ್ರಯತ್ನದಿಂದ ಡಿಸೆಂಬರ್ 2025ರ ವೇಳೆಗೆ 20 ಶೇಕಡಾ (E20) ಮಿಶ್ರಣದ ಗುರಿಯನ್ನು ನಿಗದಿತ ಸಮಯಕ್ಕಿಂತ ಐದು ವರ್ಷ ಮುಂಚೆಯೇ ಸಾಧಿಸಲಾಗಿದೆ.

ಇದನ್ನೂ ಓದಿ: ಮೀಸಲಾತಿಗೆ ಜಾತಿಗಿಂತ ಆರ್ಥಿಕ ಸ್ಥಿತಿ ಮುಖ್ಯ: ಶ್ರೀಶೈಲ ಜಗದ್ಗುರುಗಳು

ಹಳೆಯ ವಾಹನಗಳಿಗೂ ಸುರಕ್ಷಿತ : ಮಾರುತಿ ಸುಜುಕಿ ಇಂಡಿಯಾ ಹಿರಿಯ ಅಧಿಕಾರಿಯಾದ ರಾಹುಲ್ ಭಾರ್ತಿ ಮಾತನಾಡಿ, 2023ಕ್ಕೂ ಮುಂಚೆ ತಯಾರಾದ E10 ವಾಹನಗಳ ಬಗ್ಗೆ ಗ್ರಾಹಕರಲ್ಲಿ ಆತಂಕ ಇರುವುದು ಸಹಜ. ಆದರೆ ಕಂಪನಿಯು ಇಂತಹ ವಾಹನಗಳನ್ನು E20 ಇಂಧನದೊಂದಿಗೆ ವಿವಿಧ ಪರಿಸ್ಥಿತಿಗಳಲ್ಲಿ ಪರೀಕ್ಷಿಸಿದ್ದು, ಯಾವುದೇ ಹಾನಿ ಅಥವಾ ಭಾಗಗಳ ಜೀವಿತಾವಧಿಗೆ ಧಕ್ಕೆಯಾಗುವ ಲಕ್ಷಣ ಕಂಡುಬಂದಿಲ್ಲ ಎಂದು ಹೇಳಿದರು.

ಹೀರೋ ಮೋಟೋಕಾರ್ಪ್ ಮುಖ್ಯ ವ್ಯಾಪಾರ ಅಧಿಕಾರಿ ಅಶುತೋಷ್ ವರ್ಮಾ ಕೂಡ ಮಾತನಾಡಿ, ಕೋಟ್ಯಂತರ ದ್ವಿಚಕ್ರ ವಾಹನಗಳ ಸೇವಾ ದಾಖಲೆಗಳನ್ನು ವಿಶ್ಲೇಷಿಸಿದಾಗ E20 ಬಳಕೆಯಿಂದ ಯಾವುದೇ ಹೆಚ್ಚುವರಿ ತಾಂತ್ರಿಕ ಸಮಸ್ಯೆ ಅಥವಾ ಎಂಜಿನ್ ಹಾನಿ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: KR ಸರ್ಕಲ್‌ನಲ್ಲಿ ಎರಡು BMTC ಬಸ್‌ಗಳ ನಡುವೆ ಸರಣಿ ಅಪಘಾತ

ಟೊಯೋಟಾದಿಂದಲೂ ಭರವಸೆ : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಪೊರೇಟ್ ಅಫೇರ್ಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಅವರು, ಭಾರತದಲ್ಲಿ ಗ್ರಾಹಕರಿಗೆ ವಾಹನ ತಲುಪುವ ಮೊದಲು ಕಠಿಣ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. E20 ಇಂಧನ ಉತ್ತಮ ಚಾಲನಾ ಅನುಭವ ನೀಡುವುದರ ಜೊತೆಗೆ ಪರಿಸರ ಸ್ನೇಹಿಯೂ ಆಗಿದೆ ಎಂದು ಹೇಳಿದರು.

ಶೂನ್ಯ-ಇಂಗಾಲದತ್ತ ಹೆಜ್ಜೆ : ಎಥನಾಲ್ ಸಸ್ಯಗಳಿಂದ ಉತ್ಪಾದನೆಯಾಗುವ ಜೈವಿಕ ಇಂಧನವಾಗಿದ್ದು, ಇದನ್ನು ‘ಶೂನ್ಯ-ಇಂಗಾಲ’ (Net Zero Carbon) ಇಂಧನವೆಂದು ಪರಿಗಣಿಸಲಾಗುತ್ತದೆ. ಹವಾಮಾನ ವೈಪರೀತ್ಯ ನಿಯಂತ್ರಣ, ಮಾಲಿನ್ಯ ತಗ್ಗಿಸುವುದು ಹಾಗೂ ಜಾಗತಿಕ ತೈಲ ಬೆಲೆ ಏರಿಳಿತದ ಪರಿಣಾಮವನ್ನು ಕಡಿಮೆ ಮಾಡುವಲ್ಲಿ E20 ಮಹತ್ವದ ಪಾತ್ರ ವಹಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲು

ವಿಮೆ ಕುರಿತು ಹರಿದಾಡುತ್ತಿರುವ ವದಂತಿಗೆ ತೆರೆ : E20 ಇಂಧನ ಬಳಸುವ ವಾಹನಗಳಿಗೆ ವಿಮೆ ಸಿಗುವುದಿಲ್ಲ ಎಂಬ ವದಂತಿಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿಹಾಕಿದ್ದಾರೆ. ವಿಮಾ ಕಂಪನಿಗಳು ಸಹ ಇಂತಹ ಯಾವುದೇ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಅವರು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲೂ ಬಳಕೆ : ಅಮೆರಿಕ, ಬ್ರೆಜಿಲ್, ಕೆನಡಾ ಹಾಗೂ ಜರ್ಮನಿ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಎಥನಾಲ್ ಮಿಶ್ರಿತ ಇಂಧನವನ್ನು ಹಲವು ವರ್ಷಗಳಿಂದ ಯಶಸ್ವಿಯಾಗಿ ಬಳಸಲಾಗುತ್ತಿದೆ. ಫಾರ್ಮುಲಾ-1 ರೇಸಿಂಗ್ ಸೇರಿದಂತೆ ಅತ್ಯಾಧುನಿಕ ವಾಹನ ಕ್ರೀಡೆಗಳಲ್ಲಿಯೂ ಎಥನಾಲ್ ಆಧಾರಿತ ಇಂಧನ ಬಳಕೆಯಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ತಪ್ಪಿದ ಮುಂಗಾರು ಅಬ್ಬರ: ಕೃಷಿ, ವಿದ್ಯುತ್ ಉತ್ಪಾದನೆಗೆ ಹೆಚ್ಚಿದ ಆತಂಕ

E20 ಇಂಧನದ ಬಳಕೆ ಭಾರತವನ್ನು ಇಂಧನ ಸ್ವಾವಲಂಬನೆಯತ್ತ ಕೊಂಡೊಯ್ಯುವುದರ ಜೊತೆಗೆ ಕಚ್ಚಾ ತೈಲ ಆಮದು ವೆಚ್ಚವನ್ನು ಕಡಿಮೆ ಮಾಡಿ, ರೈತರಿಗೂ ಎಥನಾಲ್ ಉತ್ಪಾದನೆಯ ಮೂಲಕ ಹೆಚ್ಚುವರಿ ಆದಾಯದ ಅವಕಾಶ ಕಲ್ಪಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ