SK Home Ad
Home ಕ್ರೀಡೆ ವೈಭವ್‌ಗೆ ಸಿಗದ ಅವಕಾಶ: ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಕೋಚ್ ರವಿಶಾಸ್ತ್ರಿ ವಿಡಿಯೋ ವೈರಲ್!

ವೈಭವ್‌ಗೆ ಸಿಗದ ಅವಕಾಶ: ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಕೋಚ್ ರವಿಶಾಸ್ತ್ರಿ ವಿಡಿಯೋ ವೈರಲ್!

0
34

ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಇತ್ತೀಚಿನ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಪರ ಬ್ಯಾಟ್ ಬೀಸಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ, ಅದ್ಭುತ ಫಾರ್ಮ್‌ನಲ್ಲಿರುವ ವೈಭವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದಿರುವುದಕ್ಕೆ ಶಾಸ್ತ್ರಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಹಾಗೇ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 189 ರನ್ ಗಳಿಸಿದರೂ, ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (1 ರನ್) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಐರ್ಲೆಂಡ್ ಸರಣಿಯಲ್ಲೂ ಸಂಜು ಕಳಪೆ ಪ್ರದರ್ಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಸ್ಯಾಮ್ಸನ್ ಬದಲಿಗೆ ಐಪಿಎಲ್‌ನಲ್ಲಿ ಜಗತ್ತಿನ ಖ್ಯಾತ ಬೌಲರ್‌ಗಳನ್ನೇ ಮನಬಂದಂತೆ ಚಚ್ಚಿ ಅಬ್ಬರಿಸಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಜಾಗ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

“ವೈಭವ್‌ನನ್ನು ಐರ್ಲೆಂಡ್ ಸರಣಿಯಲ್ಲೇ ಕಣಕ್ಕಿಳಿಸಬೇಕಿತ್ತು. ಅಲ್ಲಿನ ಸಣ್ಣ ಮೈದಾನಗಳಲ್ಲಿ ಸಿಕ್ಸರ್‌ಗಳ ಮಳೆ ಹರಿಸುತ್ತಿದ್ದರು. ಒಂದು ವೇಳೆ ಅವಕಾಶ ಸಿಕ್ಕಿದ್ದರೆ ಐರ್ಲೆಂಡ್ ಬೌಲರ್‌ಗಳ ‘ಪ್ಯಾಂಟ್ ಬಿಚ್ಚಿಸುತ್ತಿದ್ದರುʼ” ಎಂದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವಿಶ್ಲೇಷಿಸಿದ್ದಾರೆ. ಐಪಿಎಲ್‌ನಲ್ಲಿ ಸ್ಟಾರ್ ಬೌಲರ್‌ಗಳ ವಿರುದ್ಧವೇ ಅಬ್ಬರಿಸಿದ ಇಂತಹ ಪ್ರತಿಭಾವಂತ ಆಟಗಾರನನ್ನು ತಂಡದ ಹೊರಗಿಡುವುದು ಸರಿಯಲ್ಲ ಎಂದು ರವಿಶಾಸ್ತ್ರಿ ಗರಂ ಆಗಿದ್ದಾರೆ. ವೈಭವ್ ಯಾವುದೇ ಮಾನಸಿಕ ಒತ್ತಡವಿಲ್ಲದೆ ಆಡುತ್ತಾರೆ. ಆರಂಭದ ಓವರ್‌ಗಳಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಅವರಿಗೆ ತಂಡದಲ್ಲಿ ಶಾಶ್ವತ ಸ್ಥಾನ ನೀಡಬೇಕು.

ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿ ಮುಂದುವರಿದಿದ್ದು, ಮುಂಬರುವ ಪಂದ್ಯಗಳಲ್ಲಾದರೂ ಈ ಯುವ ಆಟಗಾರನಿಗೆ ಮ್ಯಾನೇಜ್‌ಮೆಂಟ್ ಅವಕಾಶ ನೀಡಲಿದೆಯೇ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.