SK Home Ad
Home ನಮ್ಮ ಜಿಲ್ಲೆ ವಿಜಯಪುರ ಕೃಷ್ಣಾ ನದಿಗೆ ಉರುಳಿ ಬಿದ್ದ ಟಿಪ್ಪರ್: ಚಾಲಕ ಸಾವು

ಕೃಷ್ಣಾ ನದಿಗೆ ಉರುಳಿ ಬಿದ್ದ ಟಿಪ್ಪರ್: ಚಾಲಕ ಸಾವು

0
118

ವಿಜಯಪುರ: ಸೇತುವೆ ಮೇಲಿಂದ ಟಿಪ್ಪರು ಉರುಳಿ ಬಿದ್ದು ಚಾಲಕ ಮೃತಪಟ್ಟಿರುವ ಘಟನೆ ಕೊರ್ತಿ ಕೊಲ್ಹಾರನಲ್ಲಿ ನಡೆದಿದೆ.

ಕೊಲ್ಹಾರದಿಂದ ಕಡಿ ತುಂಬಿಕೊಂಡು ಗದ್ದನಕೇರಿ ಕ್ರಾಸ್‌ನತ್ತ ಹೊರಟಿದ್ದ ಟಿಪ್ಪರ್ ಸೇತುವೆ ಮೇಲೆ ಹೊರಟಿದ್ದ ಕಾರವೊಂದಕ್ಕೆ ಡಿಕ್ಕಿ ಹೊಡೆವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ನದಿಗೆ ಉರುಳಿ ಬಿದ್ದಿರುವ ಭೀಕರ ಘಟನೆ ನಡೆದಿದೆ.

ಘಟನೆಯಲ್ಲಿ ಟಿಪ್ಪರ್ ಚಾಲಕ ಬಾಗಲಕೋಟೆ ಜಿಲ್ಲೆಯ ಬೆನ್ನೂರ ಗ್ರಾಮದ ಸಂತೋಷ ಕೋಟಿ ನೀರಿನಲ್ಲಿ ತೇಲಾಡುತ್ತಿರುವ ಟಿಪ್ಪರನಲ್ಲಿಯೇ ಸಿಲುಕಿಕೊಂಡು ಮೃತಪಟ್ಟಿದ್ದಾನೆ. ಆದರೆ ಅದೃಷ್ಟವಶಾತ್ ಟಿಪ್ಪರ ಕ್ಲಿನರ್ ಕಿಡಕಿಯಿಂದ ಹೊರ ಬಂದು ಸಹಾಯಕ್ಕಾಗಿ ಕೂಗಿದಾಗ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಈ ಕುರಿತು ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.