SK Home Ad
Home ಕ್ರೀಡೆ IND vs AFG: ಗಿಲ್‌-ಇಶಾನ್‌ ಭರ್ಜರಿ ಬ್ಯಾಟಿಂಗ್‌; ಭಾರತ ಬೃಹತ್‌ ಮೊತ್ತ

IND vs AFG: ಗಿಲ್‌-ಇಶಾನ್‌ ಭರ್ಜರಿ ಬ್ಯಾಟಿಂಗ್‌; ಭಾರತ ಬೃಹತ್‌ ಮೊತ್ತ

0
84

ಲಖನೌ: ನಾಯಕ ಶುಭಮನ್‌ ಗಿಲ್‌ ಮತ್ತು ಇಶಾನ್‌ ಕಿಶನ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಆತಿಥೇಯ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಬೃಹತ್‌ ರನ್‌ ಕಲೆಹಾಕಿದೆ.

ಲಖನೌನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಬೃಹತ್‌ ರನ್‌ ಪೇರಿಸಿತು.

ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ ನೇತೃತ್ವದ ಭಾರತ ತಂಡ 49.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 402 ರನ್‌ ಗಳಿಸಿತು.

ಭಾರತ ತಂಡದ ಯಶಸ್ವಿ ಜೈಸ್ವಾಲ್‌ (4) ಅವರನ್ನು ಎರಡನೇ ಓವರ್‌ನ ಕೊನೆಯ ಎಸೆತದಲ್ಲಿಯೇ ಔಟ್‌ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದ್ದ ಅಫ್ಘಾನ್‌ ತಂಡಕ್ಕೆ ಬಳಿಕ ರೋಹಿತ್‌-ಗಿಲ್‌ ಜೋಡಿ ಆಸರೆಯಾಯಿತು.

ರೋಹಿತ್‌ ಶರ್ಮಾ 48 ರನ್‌ ಗಳಿಸಿ ರಶೀದ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಶುಭಮನ್‌ ಗಿಲ್‌ ಮತ್ತು ಇಶಾನ್‌ ಕಿಶನ್‌ ಜೋಡಿ ಅಫ್ಘಾನ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

ದ್ವಿಶತಕದ ಜತೆಯಾಟ: 13.1 ಓವರ್‌ಗಳಲ್ಲಿ 96ಕ್ಕೆ 2 ವಿಕೆಟ್‌ ಕಲೆದುಕೊಂಡಿದ್ದ ಭಾರತಕ್ಕೆ ಶುಭಮನ್‌ ಗಿಲ್‌ ಮತ್ತು ಇಶಾನ್‌ ಕಿಶನ್‌ ಜೋಡಿ ಭರ್ಜರಿ ಜತೆಯಾಟ ನಡೆಸಿ ತಂಡದ ಮೊತ್ತವನ್ನು 400 ಗಡಿ ದಾಟುವಂತೆ ಮಾಡಿದರು.

ಶುಭಮನ್‌ ಗಿಲ್‌ 110 ಎಸೆತಗಳಲ್ಲಿ 22 ಬೌಂಡರಿ, 2 ಸಿಕ್ಸರ್‌ನಿಂದ 154 ರನ್‌ ಗಳಿಸಿ ಹೊರನಡೆದರೆ, ಇಶಾನ್‌ ಕೇವಲ 79 ಎಸೆತದಲ್ಲಿ 14 ಬೌಂಡರಿ, 7 ಸಿಕ್ಸರ್‌ನಿಂದ 125 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು.

ಈ ಜೋಡಿ ಹೊರನಡೆದ ಬಳಿಕ ಶ್ರೇಯಸ್‌ ಅಯ್ಯರ್‌ (26), ವಾಷಿಂಗ್ಟನ್‌ ಸುಂದರ (19) ಮಾತ್ರ ಎರಡಂಕಿ ಮೊತ್ತ ದಾಟಿದರು. ಮತ್ತೆ ಯಾವೊಬ್ಬ ಆಟಗಾರನ ಕ್ರಿಸ್‌ನಲ್ಲಿ ಸಮಯ ಕಳೆಯದೆ ಪೆವಿಲಿಯನ್‌ ಕಡೆಗೆ ಸಾಗಿದ ಪರಿಣಾಮವಾಗಿ ಇನ್ನೂ 1 ಎಸೆತ ಬಾಕಿ ಇರುವಂತೆಯೇ ಭಾರತ ಆಲೌಟ್‌ ಆಯಿತು.

ಅಫ್ಘಾನಿಸ್ತಾನ್ ಪರ ನಂಗೆಯಾಲಿಯಾ ಖರೋಟಿ‌ 76ಕ್ಕೆ 4, ರಶೀದ್‌ ಖಾನ್‌ 48ಕ್ಕೆ 3 ವಿಕೆಟ್‌ ಉರುಳಿಸಿದರೆ, ಎಎಂ ಗಜನ್ಫರ್, ಮೊಹಮ್ಮದ್ ಸಲೀಮ್ ಸಫಿ ತಲಾ ಒಂದು ವಿಕೆಟ್‌ ಪಡೆದರು.