ದಕ್ಷಿಣ ಕನ್ನಡ(ಬೆಳ್ತಂಗಡಿ): ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಕಾಮುಕ ಚಂದ್ರಶೇಖರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ವರ್ಗಾವಣೆ ಮಾಡಿಕೊಳ್ಳದೆ ಕಳೆದ 25 ವರ್ಷಗಳಿಂದ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಬೀಡುಬಿಟ್ಟಿದ್ದ ಔಷಧಿ ವಿಭಾಗದ ಮುಖ್ಯಸ್ಥನಾಗಿರುವ ಮೂಲತಃ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಕೆದ್ದು ನಿವಾಸಿಯಾಗಿರುವ ಚಂದ್ರಶೇಖರ್ ತನ್ನ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಔಷಧಾಲಯದ ಉಗ್ರಾಣದಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದು. ಈ ಬಗ್ಗೆ ಯಾರಲ್ಲಾದರೂ ಹೇಳಿದ್ರೆ ಕೆಲಸದಿಂದ ತೆಗೆಯುವುದಾಗಿ ಪದೇ ಪದೆ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜೂ. 11ರಂದು ಪ್ರಕರಣ ದಾಖಲಾಗಿದೆ.
ಚಂದ್ರಶೇಖರ್ ವಿರುದ್ಧ ಆಸ್ಪತ್ರೆಯಲ್ಲಿ ಮೇಡಿಕಲ್ ಸಾಮಾಗ್ರಿಗಳನ್ನು ಖಾಸಗಿ ಮೆಡಿಕಲ್‌ಗಳಿಗೆ ಸಾಗಿಸುತ್ತಿರುವ ಆರೋಪಗಳು ಈ ಹಿಂದಿನಿಂದ ಕೇಳಿಬರುತ್ತಿತ್ತು. ಈ ಬಗ್ಗೆ ಹಲವಾರು ಭಾರಿ ದೂರು ನೀಡಿದ್ರೂ ಇಲಾಖೆಯಿಂದ ಯಾವುದೇ ಕ್ರಮ ಗೊಂಡಿಲ್ಲ, ಇದಕ್ಕೆಲ್ಲ ಕಾರಣ ಚಂದ್ರಶೇಖರ್‌ಗೆ ಇಲಾಖೆಯ ಮೇಲಧಿಕಾರಿಗಳ ಬೆಂಬಲವಿದೆ ಎನ್ನಲಾಗಿದೆ.
ಅದಲ್ಲದೆ ಹಲವರು ಯುವತಿಯರಿಗೆ ಮತ್ತು ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪಗಳು ಕೂಡ ಕೇಳಿ ಬಂದಿದೆ. ಆದರೆ, ಭಯದಿಂದ ಮಾರ್ಯಾದೆಗೆ ಅಂಜಿ ಯಾರು ದೂರು ಕೊಡಲು ಮುಂದೆ ಬಂದಿರಲಿಲ್ಲ. ಇದೀಗ ಆಸ್ಪತ್ರೆಯ ಸಿಬ್ಬಂದಿ ಧೈರ್ಯದಿಂದ ಲೈಂಗಿಕ ಕಿರುಕುಳವನ್ನು ಮನೆಯವರಿಗೆ ತಿಳಿಸಿ ದೂರು ಕೊಟ್ಟಿದ್ದಾರೆ.






















