ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಉತ್ತರ ಮಧ್ಯೆ ರೈಲ್ವೆಯು `ಪ್ರಯಾಗ್‌ರಾಜ್ ಮತ್ತು ಹುಬ್ಬಳ್ಳಿ ನಡುವೆ ವಿಶೇಷ ರೈಲುಗಳನ್ನು 11 ಟ್ರಿಪ್ ಓಡಿಸಲು ನಿರ್ಧರಿಸಿದೆ.
ಪ್ರಯಾಗ್‌ರಾಜ್-ಹುಬ್ಬಳ್ಳಿ ವಿಶೇಷ ರೈಲು (ರೈಲು ಸಂಖ್ಯೆ 04113) ಜೂನ್ 13, 20, 27 ಹಾಗೂ ಜುಲೈ 4, 11ರಂದು ಶನಿವಾರ ಪ್ರಯಾಗ್‌ರಾಜ್‌ನಿಂದ ಬೆಳಗ್ಗೆ 05:05ಕ್ಕೆ ಹೊರಟು ಸೋಮವಾರ ಮಧ್ಯಾಹ್ನ 3.10ಕ್ಕೆ ಹುಬ್ಬಳ್ಳಿ ತಲುಪಲಿದೆ.
ಹುಬ್ಬಳ್ಳಿ-ಪ್ರಯಾಗ್‌ರಾಜ್ ವಿಶೇಷ ರೈಲು (ರೈಲು ಸಂಖ್ಯೆ 04114) ಜೂನ್ 9, 16, 23, 30 ಹಾಗೂ ಜುಲೈ 7, 14ರಂದು ಹುಬ್ಬಳ್ಳಿಯಿಂದ ಬೆಳಗ್ಗೆ 09:00ಕ್ಕೆ ಹೊರಟು ಗುರುವಾರ ರಾತ್ರಿ 10:40ಕ್ಕೆ ಪ್ರಯಾಗ್‌ರಾಜ್ ತಲುಪಲಿದೆ.
ಈ ರೈಲು ಗ್ವಾಲಿಯರ್, ಭೋಪಾಲ್, ನಾಗ್ಪುರ, ಕಾಚಿಗುಡ, ಕರ್ನೂಲ್ ಸಿಟಿ, ಧರ್ಮಾವರಂ, ಯಲಹಂಕ, ತುಮಕೂರು, ದಾವಣಗೆರೆ, ಹಾವೇರಿ ಸೇರಿ 82 ನಿಲ್ದಾಣಗಳಲ್ಲಿ ನಿಲ್ಲಲಿದೆ. 22 ಬೋಗಿಗಳ ಈ ವಿಶೇಷ ರೈಲಿನಲ್ಲಿ 3 ಎಸಿ 3-ಟೈರ್, 9 ಸ್ಲೀಪರ್, 8 ಜನರಲ್ ಹಾಗೂ 2 ದಿವ್ಯಾಂಗ ಸ್ನೇಹಿ ಬೋಗಿಗಳಿರಲಿವೆ.





















