SK Home Ad
Home ಆಹಾರ ಬೇಸಿಗೆಯಲ್ಲಿ ಮಾವಿನ ಹಣ್ಣು, ಜ್ಯೂಸ್ ಸೇವನೆ: ಆರೋಗ್ಯಕ್ಕೆ ಲಾಭವೋ? ನಷ್ಟವೋ?

ಬೇಸಿಗೆಯಲ್ಲಿ ಮಾವಿನ ಹಣ್ಣು, ಜ್ಯೂಸ್ ಸೇವನೆ: ಆರೋಗ್ಯಕ್ಕೆ ಲಾಭವೋ? ನಷ್ಟವೋ?

0
39

ಬೆಂಗಳೂರು: ತೀವ್ರವಾದ ಬೇಸಿಗೆಯ ಬಿಸಿಲಿನಿಂದ ನಿಮಗೆ ಹಣ್ಣುಗಳ ರಾಜ ಮಾವು ಒಂದು ವರದಾನ. ಹಾಗೇ ಇದು ಮಾವು ಸೀಸನ್‌ ಆಗಿರುವದರಿಂದ ನಿಮ್ಮ ಹೆಚ್ಚು ಆಕರ್ಷೀಸುವ ಹಣ್ಣು ಇದಾಗಿದ್ದು, ಇದು ಬಿಸಿಲಿನ ಬೇಗೆಯನ್ನು ತಣಿಸಲು ಮತ್ತು ದೇಹಕ್ಕೆ ತತ್‌ಕ್ಷಣದ ಶಕ್ತಿ ನೀಡಲು ಮಾವಿನ ಹಣ್ಣು ಹಾಗೂ ಅದರ ರಸ (ಜ್ಯೂಸ್) ಅತ್ಯುತ್ತಮ ಆಯ್ಕೆಯಾಗಿದೆ. ಆದ್ರೆ ತಜ್ಞರ ಪ್ರಕಾರ ಇದನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕ್ಕೆ ಲಾಭದಾಯಕ, ಇಲ್ಲದಿದ್ದರೆ ಕೆಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಬಹುದು.

ಮಾವಿನ ಹಣ್ಣಿನ ಪ್ರಯೋಜನ: ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸೇವನೆಯಿಂದ ದೇಹಕ್ಕೆ ಅಗಾಧವಾದ ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್ ‘ಎ’ ಮತ್ತು ‘ಸಿ’ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಿಸಿಲಿನ ತಾಪಕ್ಕೆ ದೇಹದಲ್ಲಿ ಉಂಟಾಗುವ ನಿರ್ಜಲೀಕರಣ (Dehydration) ಸಮಸ್ಯೆಯನ್ನು ಮಾವಿನ ಜ್ಯೂಸ್ ತಡೆಯುತ್ತದೆ. ಮಾವಿನಲ್ಲಿರುವ ಹೆಚ್ಚಿನ ನಾರಿನಂಶ (Fiber) ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ… ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ತ್ವಚೆಯ ಆರೋಗ್ಯವನ್ನು ಕಾಪಾಡಿ, ಬಿಸಿಲಿನಿಂದ ಚರ್ಮ ಕಪ್ಪಾಗುವುದನ್ನು ತಪ್ಪಿಸುತ್ತವೆ. ಪ್ರಮುಖವಾಗಿ, ಸುಡುವ ಬಿಸಿಲಿನಲ್ಲಿ ಸುಸ್ತಾದಾಗ ಒಂದು ಲೋಟ ಮಾವಿನ ಜ್ಯೂಸ್ ಕುಡಿದರೆ ದೇಹಕ್ಕೆ ತಕ್ಷಣದ ಗ್ಲೂಕೋಸ್ ಮತ್ತು ಎನರ್ಜಿ ಸಿಗುತ್ತದೆ.

ಅತಿಯಾದ ಸೇವನೆಯಿಂದಾಗುವ ಪರಿಣಾಮಗಳು: ಯಾವುದೇ ವಸ್ತುವಾದರೂ ಅತಿಯಾದರೆ ತೊಂದರೆ ತಪ್ಪಿದ್ದಲ್ಲ. ಮಾವಿನ ಹಣ್ಣು ಸ್ವಭಾವತಃ ಉಷ್ಣ ಗುಣವನ್ನು ಹೊಂದಿದೆ. ಹಾಗಾಗಿ, ಬಿಸಿಲಿನಲ್ಲಿ ಅತಿಯಾಗಿ ಮಾವಿನ ಹಣ್ಣು ತಿಂದರೆ ದೇಹದ ಉಷ್ಣತೆ ಮತ್ತಷ್ಟು ಹೆಚ್ಚಿ, ಮುಖದ ಮೇಲೆ ಮೊಡವೆಗಳು ಅಥವಾ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್‌ಗಳಲ್ಲಿ ಹೆಚ್ಚಿನ ಸಕ್ಕರೆ ಬಳಸುವುದರಿಂದ ತೂಕ ಹೆಚ್ಚಾಗುವ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ (Diabetes) ಏರಿಕೆಯಾಗುವ ಅಪಾಯವಿರುತ್ತದೆ. ಕೆಲವು ಸಂದರ್ಭಗಳಲ್ಲಿ ಅತಿಯಾದ ಸೇವನೆ ಭೇದಿ (Loose motion) ಮತ್ತು ಹೊಟ್ಟೆ ನೋವಿಗೂ ಕಾರಣವಾಗಬಹುದು.

ಓದುಗರ ಗಮನಕ್ಕೆ: ಬೇಸಿಗೆಯಲ್ಲಿ ಮಾವಿನ ಹಣ್ಣಿನ ಪೂರ್ಣ ಲಾಭ ಪಡೆಯಲು, ಹಣ್ಣನ್ನು ತಿನ್ನುವ ಮುನ್ನ ಕನಿಷ್ಠ ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಇದರಿಂದ ಅದರ ಉಷ್ಣಾಂಶ ಕಡಿಮೆಯಾಗುತ್ತದೆ. ಮಾವಿನ ಜ್ಯೂಸ್ ಮಾಡುವಾಗ ಪ್ರತ್ಯೇಕವಾಗಿ ಸಕ್ಕರೆ ಸೇರಿಸುವುದನ್ನು ನಿಲ್ಲಿಸಿ, ನೈಸರ್ಗಿಕ ರೂಪದಲ್ಲಿ ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಹಿತಕರ.