Home Advertisement
Home ಕ್ರೀಡೆ IPL 2026: ವಾಂಖೆಡೆಯಲ್ಲಿ ಮುಂಬೈಗೆ ಕೋಲ್ಕತಾ ಸವಾಲು

IPL 2026: ವಾಂಖೆಡೆಯಲ್ಲಿ ಮುಂಬೈಗೆ ಕೋಲ್ಕತಾ ಸವಾಲು

0
68

ಮುಂಬೈ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ, ಈ ಕೋಲ್ಕತಾ ನೈಟ್ ರೈಡರ್ಸ್ ಸಾಗುತ್ತಿರುವ ಹಾದಿಯೇ ಸರಿಯಿಲ್ಲ.

ಶ್ರೇಯಸ್ ಅಯ್ಯರ್ ಅವರನ್ನು ಮರು ಆವೃತ್ತಿಯಲ್ಲೇ ಕೈ ಬಿಟ್ಟು ಕಳೆದ ವರ್ಷ ಕೈ ಸುಟ್ಟುಕೊಂಡ ಶಾರೂಕ್ ಪಡೆಗೆ, ಈ ವರ್ಷ ಆರಂಭದಲ್ಲೇ ಪೆಟ್ಟಿನ ಮೇಲೊಂದು ಪೆಟ್ಟು ಬೀಳುತ್ತಿದೆ.

ಗಾಯದ ಸಮಸ್ಯೆಗಳು ಒಂದರ ಮೇಲೊಂದು ಉದ್ಭವವಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿತ್ತು. ಆದರೆ 2025ರ ಕಠಿಣ ಅಭಿಯಾನವನ್ನು ಸಹಿಸಿಕೊಂಡು ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿತು.

ಡಿಸೆಂಬರ್ 2025ರ ಹರಾಜಿನಲ್ಲಿ, ಕ್ಯಾಮರೂನ್ ಗ್ರೀನ್‌ಗೆ ಬರೋಬ್ಬರಿ 25.20 ಕೋಟಿ ನೀಡಿ ಖರೀದಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ವಿದೇಶಿ ಆಟಗಾರನಿಗೆ ದಾಖಲೆಯ ಶುಲ್ಕವಾಗಿದೆ.

ನಾಯಕತ್ವಕ್ಕಾಗಿ ಕಿತ್ತಾಟ, ಮುನಿಸು, ರೋಹಿತ್ ಶರ್ಮಾರ ಕಳಪೆ ಫಾರ್ಮ್ ಸಮಸ್ಯೆಗಳಿಂದ ಕಳೆದ 5 ಆವೃತ್ತಿಗಳಿಂದ ಮುಂಬೈ ಇಂಡಿಯನ್ಸ್ ಟ್ರೋಫಿಯಿಂದ ದೂರ ಉಳಿದಿದೆ. ಆದ್ರೆ, ಈಗ ಮುಂಬೈ ಇಂಡಿಯನ್ಸ್ ಪಡೆ ಈ ಸಮಸ್ಯೆಗಳಿಂದ ಬಹು ದೂರ ಸಾಗಿ ಬಂದಿದೆ.

ರೋಹಿತ್ ಸೇರಿ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್‌ಪ್ರೀತ್ ಬುಮ್ರಾ ಕೂಡ ತಂಡದಲ್ಲಿರುವುದು ಭಾರತೀಯ ದಿಗ್ಗಜ ಆಟಗಾರರನ್ನು ಹೊಂದಿರುವ ತಂಡವಿದು. ದಾಖಲೆಯ ಆರನೇ ಪ್ರಶಸ್ತಿಯನ್ನು ಗೆಲ್ಲುವ ಗುರಿಯೊಂದಿಗೆ, ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಆವೃತ್ತಿ ಆರಂಭಿಸುತ್ತಿದೆ.

ಮುಂಬೈ ಸಂಭಾವ್ಯ ಆಟಗಾರರು: ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ರಿಯಾನ್ ರಿಕಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ, ವಿಲ್ ಜಾಕ್ಸ್, ದೀಪಕ್ ಚಾಹರ್, ಮಿಚೆಲ್ ಸ್ಯಾಂಟ್ನರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೋಲ್ಟ್.

ಕೆಕೆಆರ್ ಸಂಭಾವ್ಯ ಆಟಗಾರರು: ಅಜಿಂಕ್ಯ ರಹಾನೆ , ರಿಂಕು ಸಿಂಗ್, ಆಂಗ್‌ಕ್ರಿಶ್ ರಘುವಂಶಿ, ಮನೀಶ್ ಪಾಂಡೆ, ರೋವ್‌ಮನ್ ಪೊವೆಲ್, ರಾಹುಲ್ ತ್ರಿಪಾಠಿ, ಫಿನ್ ಅಲೆನ್, ಟಿಮ್ ಸೀಫರ್ಟ್, ಸುನಿಲ್ ನರೈನ್, ರಮಣದೀಪ್ ಸಿಂಗ್, ಕ್ಯಾಮೆರಾನ್ ಗ್ರೀನ್, ಉಮ್ರಾನ್ ಮಲಿಕ್, ಮಥೀಶ ಪತಿರಾನ, ಕಾರ್ತಿಕ್ ತ್ಯಾಗಿ, ಆಕಾಶ್ ದೀಪ್, ವರುಣ್ ಚಕ್ರವರ್ತಿ.

ಪಂದ್ಯದ ಸ್ಥಳ: ವಾಂಖೆಡೆ ಕ್ರೀಡಾಂಗಣ, ಸಮಯ: 7.30 ಸಂಜೆ