SK Home Ad
Home ಸುದ್ದಿ ದೇಶ ವಾಣಿಜ್ಯ ಸಿಲಿಂಡರ್‌ ಪೂರೈಕೆ ಹೆಚ್ಚಳ: ಬಳಕೆದಾರರು ಮತ್ತಷ್ಟು ನಿರಾಳ

ವಾಣಿಜ್ಯ ಸಿಲಿಂಡರ್‌ ಪೂರೈಕೆ ಹೆಚ್ಚಳ: ಬಳಕೆದಾರರು ಮತ್ತಷ್ಟು ನಿರಾಳ

0
400

ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ರಾಜ್ಯವಾರು ಹಂಚಿಕೆ ಪ್ರಮಾಣವನ್ನು ಕೇಂದ್ರವು ಯುದ್ಧಕ್ಕೂ ಮೊದಲಿನ ಬೇಡಿಕೆಯ ಶೇ. 50ರಿಂದ ಶೇ. 70ಕ್ಕೆ ಏರಿಸಿದೆ.

ಹೊರ್ಮುಜ್ ಜಲಸಂಧಿ ದಾಟಲು ಇರಾನ್‌ನಿಂದ ದೊರೆತ ಅವಕಾಶ, ರಷ್ಯಾದಿಂದ ಸಿಗುತ್ತಿರುವ ತೈಲ ಯುದ್ಧ ಬಿಕ್ಕಟ್ಟಿನ ನಡುವೆ ಉಕ್ಕು, ವಾಹನೋದ್ಯಮ ಮತ್ತು ಕಾರ್ಮಿಕರನ್ನು ಆಧರಿಸಿದ ಕೈಗಾರಿಕೋದ್ಯಮಗಳ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಬೇಕಾಬಿಟ್ಟಿ ಮಾರಾಟ: ವಾಣಿಜ್ಯ ಸಿಲಿಂಡರ್‌ಗಳ ಹಂಚಿಕೆಯಲ್ಲಿ ವ್ಯತ್ಯಯ ಉಂಟಾಗಿರುವ ಸಂದರ್ಭವನ್ನು ಕೆಲವರು ದುರುಪಯೋಗ ಮಾಡಿಕೊಂಡು ಬೇಕಾಬಿಟ್ಟಿ ಬೆಲೆ ಸಿಲಿಂಡರ್‌ ವಿತರಣೆ ಮಾಡುತ್ತಿದ್ದಾರೆ.

ಈ ಕುರಿತಂತೆ ಕೆಲ ಹೋಟೆಲ್‌ಗಳ ಮಾಲೀಕರು ಕಡಿಮೆಯೆಂದರೂ ದುಪ್ಪಟ್ಟು ಹಣ ನೀಡಿ ಸಿಲಿಂಡರ್‌ ಪಡೆಯಬೇಕಾದ ಪರಿಸ್ಥಿತಿ ಬಂದಿದೆ. ಹೋಟೆಲ್‌ ನಡೆಸುವುದು ಕಷ್ಟವಾಗುತ್ತಿದೆ ಎಂದು ಹೋಟೆಲ್ ಮಾಲೀಕರೇ ಏಜೆನ್ಸಿಯವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.