ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿಯ ಅತ್ಯಂತ ಪ್ರತಿಷ್ಠಿತ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಗಿರುವ ದಾಂಡೇಲಿ ಪ್ರೀಮಿಯರ್ ಲೀಗ್ (DPL) 2026 ಈ ವರ್ಷ ತನ್ನ 5ನೇ ಸೀಸನ್ ಹಾಗೂ 5ನೇ ವರ್ಷದ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಕ್ರಿಕೆಟ್ ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಈ ಟೂರ್ನಮೆಂಟ್, ಫೆಬ್ರವರಿ 13, 14 ಮತ್ತು 15ರಂದು ದಾಂಡೇಲಿಯ ಡಿ.ಎಸ್.ಎಫ್.ಎ ಮೈದಾನದಲ್ಲಿ ದಿನ ಹಾಗೂ ರಾತ್ರಿ ಪಂದ್ಯಗಳೊಂದಿಗೆ ನಡೆಯಲಿದೆ.
ಈ ಕುರಿತು ಮಾತನಾಡಿದ ಟೂರ್ನಮೆಂಟ್ ಸಮಿತಿಯ ಅಧ್ಯಕ್ಷ ಅನಿಲ ಪಾಟ್ನೇಕರ, ದಾಂಡೇಲಿ ಪ್ರೀಮಿಯರ್ ಲೀಗ್ ಕೇವಲ ಕ್ರಿಕೆಟ್ ಟೂರ್ನಮೆಂಟ್ ಮಾತ್ರವಲ್ಲ, ದಾಂಡೇಲಿಯ ಕ್ರೀಡಾಭಿಮಾನಿಗಳಿಗೆ ಉತ್ಸವದ ವಾತಾವರಣ ಸೃಷ್ಟಿಸುವ ವೇದಿಕೆಯಾಗಿದೆ ಎಂದರು.
ಇದನ್ನೂ ಓದಿ: ಸರ್ಕಾರದ ಭಾಷಣ ಓದದೆ ವಾಪಸ್ ಆದ ರಾಜ್ಯಪಾಲರು
ಲೀಗ್ ಕಮ್ ನಾಕ್‌ಔಟ್ ಮಾದರಿ, 8 ಬಲಿಷ್ಠ ತಂಡಗಳು: ಮೂರು ದಿನಗಳ ಕಾಲ ನಡೆಯಲಿರುವ ಈ ಟೂರ್ನಮೆಂಟ್ ಅನ್ನು ಲೀಗ್ ಕಮ್ ನಾಕ್‌ಔಟ್ ಮಾದರಿಯಲ್ಲಿ ಆಯೋಜಿಸಲಾಗಿದ್ದು, 8 ಬಲಿಷ್ಠ ತಂಡಗಳು ಪಾಲ್ಗೊಳ್ಳಲಿವೆ. ಒಟ್ಟು 16 ರೋಚಕ ಪಂದ್ಯಗಳು ನಡೆಯಲಿದ್ದು, ಪ್ರತಿಯೊಂದು ಪಂದ್ಯವೂ ಕ್ರಿಕೆಟ್ ಪ್ರೇಮಿಗಳಿಗೆ ಉನ್ನತ ಮಟ್ಟದ ಮನರಂಜನೆ ನೀಡಲಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಭರ್ಜರಿ ನಗದು ಬಹುಮಾನಗಳು: ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ ರೂ. 50,000 ನಿಗದಿಪಡಿಸಲಾಗಿದೆ. ದಾಂಡೇಲಿ ಪ್ರೀಮಿಯರ್ ಲೀಗ್ 2026ರಲ್ಲಿ ವಿಜೇತ ಹಾಗೂ ರನ್ನರ್‌ಅಪ್ ತಂಡಗಳಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ.
ಇದನ್ನೂ ಓದಿ: ರಾಜ್ಯಪಾಲರು ಬಾರದೆ ಅಧಿವೇಶನ ನಡೆಸಲು ಬರಲ್ಲ
ವಿಜೇತ ತಂಡಕ್ಕೆ: ₹2,22,222 ನಗದು ಬಹುಮಾನ + ಟ್ರೋಫಿ. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ: ₹1,11,111 ನಗದು ಬಹುಮಾನ + ಟ್ರೋಫಿ. ಇದೇ ರೀತಿ, ಪ್ರತಿಯೊಂದು ಪಂದ್ಯಕ್ಕೂ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿ ನೀಡಲಾಗುತ್ತದೆ. ಜೊತೆಗೆ, ಅತ್ಯುತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ಫೀಲ್ಡರ್, ಮ್ಯಾನ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಗಳನ್ನೂ ಘೋಷಿಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ.
ಕ್ರಿಕೆಟ್ ಉತ್ತೇಜನೆಗೆ ಮಹತ್ವದ ವೇದಿಕೆ: ಕ್ರಿಕೆಟ್ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಹಾಗೂ ದಾಂಡೇಲಿಯ ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್ ಉತ್ಸವದ ಅನುಭವ ನೀಡುವ ನಿಟ್ಟಿನಲ್ಲಿ ಈ ಟೂರ್ನಮೆಂಟ್ ಅನ್ನು ಭವ್ಯವಾಗಿ ಆಯೋಜಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ದಾಂಡೇಲಿ ಪ್ರೀಮಿಯರ್ ಲೀಗ್ 2026ನ್ನು ಯಶಸ್ವಿಗೊಳಿಸಬೇಕು ಎಂದು ಅಧ್ಯಕ್ಷ ಅನಿಲ ಪಾಟ್ನೇಕರ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬಡವರ ಕನಸು ನನಸಾಗಿಸುವ ಗುರಿ: ಜಮೀರ್ ಅಹ್ಮದ್
ಪದಾಧಿಕಾರಿಗಳ ಉಪಸ್ಥಿತಿ: ಈ ಸಂದರ್ಭದಲ್ಲಿ ಟೂರ್ನಮೆಂಟ್ ಉಪಾಧ್ಯಕ್ಷ ಇಮಾಮ್ ಸರವರ್, ಕಾರ್ಯದರ್ಶಿ ಕುಲದೀಪ್ ರಾಜಪೂತ, ಸಹ ಕಾರ್ಯದರ್ಶಿ ವಿಷ್ಣುಮೂರ್ತಿರಾವ್, ಖಜಾಂಚಿ ನಿತಿನ್ ಕಾಮತ್, ರಮೇಶ್ ನಾಯ್ಕ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಟೂರ್ನಮೆಂಟ್ ವಿವರಗಳು: ಟೂರ್ನಮೆಂಟ್: ದಾಂಡೇಲಿ ಪ್ರೀಮಿಯರ್ ಲೀಗ್ 2026, ಸೀಸನ್: 5 (5ನೇ ವರ್ಷ), ಮಾದರಿ: ಲೀಗ್ ಕಮ್ ನಾಕ್‌ಔಟ್, ಅವಧಿ: 3 ದಿನ, ತಂಡಗಳು: 8, ಒಟ್ಟು ಪಂದ್ಯಗಳು: 16, ಬಾಲ್: ಹಾರ್ಡ್ ಟೆನಿಸ್ ಬಾಲ್, ಸ್ಥಳ: ಡಿ.ಎಸ್.ಎಫ್.ಎ ಮೈದಾನ, ದಾಂಡೇಲಿ, ದಿನಾಂಕ: ಫೆಬ್ರವರಿ 13, 14 ಮತ್ತು 15, 2026























