SK Home Ad
Home ತಾಜಾ ಸುದ್ದಿ ವಿಜಯೇಂದ್ರ ಜೊತೆ ಹೊಂದಾಣಿಕೆ ಇಲ್ಲ

ವಿಜಯೇಂದ್ರ ಜೊತೆ ಹೊಂದಾಣಿಕೆ ಇಲ್ಲ

0
171
ಯತ್ನಾಳ

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ. ನೀವು ವಿಧಾನಸೌಧ ಕಟ್ಟೆ ಹತ್ತಲು, ಕಾಂಗ್ರೆಸ್ ಕೊಟ್ಟ ಭಿಕ್ಷೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದು ಇವರಿಬ್ಬರದ್ದು ಹೊಂದಾಣಿಕೆ ಇದೆ ಎಂಬುದನ್ನು ಒಪ್ಪಿಕೊಂಡ ಂತಾಗಿದೆ. ಅಂತವರ ಜೊತೆ ಹೊಂದಾಣಿಕೆ ಆಗುವದಿಲ್ಲ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನನಗೆ ಒಬ್ಬ ಮೆಸೆಂಜರ್ ಕೊಟ್ಟು ಕಳಿಸಿದ್ದು ಸ್ವಲ್ಪ ದಿನ ಸಮಾಧಾನದಿಂದ ಇರಲು ಹೇಳಿದ್ದಾರೆ. ಎಲ್ಲವೂ ಸರಿ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕಾರಣ ಮುಕ್ತ ಮಾಡಿ, ಬಿಜೆಪಿಯಲ್ಲಿ ನಿಷ್ಠಾವಂತ ರಾಜಕಾರಣಿಗಳಿಗೆ ಗೌರವ ಕೊಡುವ ಭರವಸೆ ನೀಡಿದ್ದಾರೆ.
ನಾನು ಪಕ್ಷದ ಹಿರಿಯರು ಹಾಗೂ ಸಂಘದವರು ಹೇಳಿದಂತೆ ಕೇಳುವೆ. ನಮ್ಮ ಪಾದಯಾತ್ರೆ ಯಾರದೇ ನೇತೃತ್ವದಲ್ಲಿ ಅಲ್ಲ. ಬಿಜೆಪಿ ಸಾಮೂಹಿಕ ನಾಯಕತ್ವ, ಯಾರು ಬರುವವರು ಬರಬಹುದು, ಬಿಡುವವರು ಬಿಡಬಹುದು. ನಾವೆಲ್ಲರೂ ಕೂಡಿ ಮಾಡುತ್ತೇವೆ, ಸಾಮೂಹಿಕ ನಾಯಕತ್ವದಲ್ಲಿ. ನಾವು ಭಿನ್ನಮತೀಯರಲ್ಲ, ಬಂಡಾಯಗಾರರಲ್ಲ ಎಂದೂ ಸ್ಪಷ್ಟಪಡಿಸಿದರು.