SK Home Ad
Home ತಾಜಾ ಸುದ್ದಿ ಮದುಮಕ್ಕಳನ್ನು ಬಿಡದ ಚುನಾವಣೆ ಪ್ರಚಾರದವರು !

ಮದುಮಕ್ಕಳನ್ನು ಬಿಡದ ಚುನಾವಣೆ ಪ್ರಚಾರದವರು !

0
112

ಇಳಕಲ್ : ಮೇ ೭ ರಂದು ನಡೆಯಲಿರುವ ಲೋಕಸಭಾ ಚುನಾವಣೆ ಪ್ರಚಾರ ತಾರಕಕೇರಿದ್ದು ಅದು ವಿವಾಹವಾಗಿ ಮದುಮಕ್ಕಳನ್ನು ಸಹ ಬಿಡುತ್ತಿಲ್ಲ.
ಇಲ್ಲಿನ ಅಲಂಪೂರಪೇಟೆಯಲ್ಲಿ ಮದುವೆಯಾಗಿ ಕಲ್ಯಾಣ ಮಂಟಪದಿಂದ ಹೊರಬಂದ ಮದುಮಕ್ಕಳನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರ ಅವರಿಗೆ ಮತ ನೀಡಿ ಎಂದು ಕೇಳಿಕೊಂಡರು.
ಈ ಸಮಯದಲ್ಲಿ ನಗರಸಭೆಯ ಸದಸ್ಯ ಹನಮಂತ ತುಂಬದ ,ನಾಮ ನಿರ್ದೇಶಿತ ಮಾಜಿ ಸದಸ್ಯ ಬಸವರಾಜ ಪೋಚಗುಂಡಿ ಮತ್ತಿತರರು ಉಪಸ್ಥಿತರಿದ್ದರು.