SK Home Ad
Home ತಾಜಾ ಸುದ್ದಿ ದಿಲೀಪ್ ಕುಮಾ‌ರ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ʻಯುವ ಪುರಸ್ಕಾರʼ

ದಿಲೀಪ್ ಕುಮಾ‌ರ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ʻಯುವ ಪುರಸ್ಕಾರʼ

0
254

ನವದೆಹಲಿ: ಆರ್. ದಿಲೀಪ್ ಕುಮಾ‌ರ್ ಅವರ ವಿಮರ್ಶಾ ಸಂಕಲನ ‘ಪಚ್ಚೆಯ ಜಗುಲಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ʻಯುವ ಪುರಸ್ಕಾರʼ ಲಭಿಸಿದೆ.
50 ಸಾವಿರ ನಗದು ಹಾಗೂ ಫಲಕಗಳನ್ನು ಒಳಗೊಂಡ ʼಯುವ ಪುರಸ್ಕಾರʼ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ. ಲೇಖಕರಾದ ಟಿ.ಪಿ ಅಶೋಕ, ವಿಕ್ರಂ ವಿಸಾಜಿ ಹಾಗೂ ಜಿ.ಎಂ. ಹೆಗಡೆ ತೀರ್ಪುಗಾರರಾಗಿದ್ದರು.