SK Home Ad
Home ಸುದ್ದಿ ರಾಜ್ಯ ನಂದಿನಿ ಮೊಸರು ಇನ್ಮುಂದೆ ಅಗ್ಗ: ಲೀಟರ್‌ಗೆ ₹2 ದರ ಕಡಿತ

ನಂದಿನಿ ಮೊಸರು ಇನ್ಮುಂದೆ ಅಗ್ಗ: ಲೀಟರ್‌ಗೆ ₹2 ದರ ಕಡಿತ

0
50

ಬೆಂಗಳೂರು: ನಂದಿನಿ ಮೊಸರು ಖರೀದಿಸುವ ಗ್ರಾಹಕರಿಗೆ ಕೆಎಂಎಫ್ ಸಿಹಿಸುದ್ದಿ ನೀಡಿದೆ. ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಕಡಿತಗೊಳಿಸಿದ್ದು, ಪರಿಷ್ಕೃತ ದರ ನವೆಂಬರ್ 29ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.

ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರ ಇಳಿಕೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಎಂಎಫ್‌ಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕೆಎಂಎಫ್ ದರ ಪರಿಷ್ಕರಣೆ ನಿರ್ಧಾರ ಕೈಗೊಂಡಿದೆ.

ಕಳೆದ ನವೆಂಬರ್ 1ರಿಂದ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಲಾಗಿತ್ತು. ಇದೀಗ ಮೊಸರಿನ ದರದಲ್ಲಿ ಇಳಿಕೆ ಮಾಡಿರುವುದರಿಂದ ಗ್ರಾಹಕರಿಗೆ ಕೊಂಚ ಸಮಾಧಾನ ಸಿಕ್ಕಂತಾಗಿದೆ.

ಪರಿಷ್ಕೃತ ದರ ಹೀಗಿದೆ: ಅರ್ಧ ಲೀಟರ್ ಮೊಸರು34 ರೂ. ನಿಂದ 33 ರೂ.ಗೆ ಇಳಿಕೆಯಾಗಿದೆ. ಇನ್ನು ಒಂದು ಲೀಟರ್ ಮೊಸರು68 ರೂ. ಇದ್ದು ಅದನ್ನು 66 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಇದು ನವೆಂಬರ್ 29ರಿಂದ ಹೊಸ ದರದಲ್ಲಿ ನಂದಿನಿ ಮೊಸರು ಗ್ರಾಹಕರಿಗೆ ಲಭ್ಯವಾಗಲಿದೆ.