ಸಚಿವರಾಗಬೇಕೆಂದಿದ್ದರೆ ಖಾತೆ ಬಿಟ್ಟುಕೊಡಲು ಸಿದ್ಧನಿದ್ದೇನೆ

ಬೆಂಗಳೂರು: ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ವಿಚಾರ ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡುವೆ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಶಾಸಕರ ಹೇಳಿಕೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅರಣ್ಯದಲ್ಲಿ ಹುಟ್ಟಿ ಬೆಳೆದವರೇ ಅರಣ್ಯ ಸಚಿವರಾಗಬೇಕೆಂದಿದ್ದರೆ ಖಾತೆ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ತಿರುಗೇಟು ನೀಡಿದರು. ‘ನಾನು ಆನೇಕಲ್‌ನವನು. ಅಲ್ಲಿ ಬನ್ನೇರುಘಟ್ಟ ಅರಣ್ಯ ಪ್ರದೇಶವಿದೆ. ನಮ್ಮ ತೋಟಕ್ಕೂ ಕಾಡಾನೆಗಳು ಬರುತ್ತವೆ. ನನಗೂ ಅರಣ್ಯದ ಬಗ್ಗೆ ಅರಿವಿದೆ. ಅರಣ್ಯ ಖಾತೆಗೆ ಅಂಟಿಕೊಂಡಿಲ್ಲ. … Continue reading ಸಚಿವರಾಗಬೇಕೆಂದಿದ್ದರೆ ಖಾತೆ ಬಿಟ್ಟುಕೊಡಲು ಸಿದ್ಧನಿದ್ದೇನೆ