SK Home Ad
Home ಸುದ್ದಿ ರಾಜ್ಯ KEA Recruitment: ಪಿಯು ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ: 814 ಹುದ್ದೆಗಳಿಗೆ ಅರ್ಜಿ ಆಹ್ವಾನ

KEA Recruitment: ಪಿಯು ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ: 814 ಹುದ್ದೆಗಳಿಗೆ ಅರ್ಜಿ ಆಹ್ವಾನ

0
53
ಪಿಜಿ ಜೊತೆ ಬಿ.ಇಡಿ ಮುಗಿಸಿದ್ದೀರಾ? ಸರ್ಕಾರಿ ಪಿಯು ಕಾಲೇಜುಗಳಲ್ಲಿವೆ 814 ಉಪನ್ಯಾಸಕ ಹುದ್ದೆಗಳು, ಈಗಲೇ ಅರ್ಜಿ ಸಲ್ಲಿಸಿ

KEA Recruitment: 814 ಪಿಯು ಉಪನ್ಯಾಸಕರ ನೇರ ನೇಮಕಾತಿಗೆ ಅರ್ಜಿ ಆಹ್ವಾನ; ಡಿಸೆಂಬರ್ 25 ಕೊನೆ ದಿನ

ಬೆಂಗಳೂರು : ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಹತ್ವದ ಅವಕಾಶ ಕಲ್ಪಿಸಿದೆ. ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವಿವಿಧ ವಿಷಯಗಳ ಒಟ್ಟು 814 ಗ್ರೂಪ್‌-ಬಿ ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಡಿಸೆಂಬರ್ 25 ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಡಿಸೆಂಬರ್ 26 ಕೊನೆ ದಿನ. ಒಟ್ಟು ಉಪನ್ಯಾಸಕರ ಹುದ್ದೆಗಳಲ್ಲಿ ‌ಉಳಿಕೆ‌ ಮೂಲ ವೃಂದದ (RPC) 778 ಹಾಗೂ ಕಲ್ಯಾಣ ಕರ್ನಾಟಕ ವೃಂದದ 36 ಹುದ್ದೆಗಳು ಸೇರಿವೆ. ಸ್ನಾತಕೋತ್ತರ ಪದವಿ ಜತೆಗೆ ಬಿ.ಇಡಿ ಮಾಡಿರುವ ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿಷಯವಾರು ಹುದ್ದೆಗಳ ವಿವರ

ವಿಷಯ ಹುದ್ದೆಗಳು
ಕನ್ನಡ89
ಇಂಗ್ಲಿಷ್145
ಇತಿಹಾಸ50
ಅರ್ಥಶಾಸ್ತ್ರ90
ರಾಜ್ಯಶಾಸ್ತ್ರ25
ಸಮಾಜಶಾಸ್ತ್ರ25
ಭೂಗೋಳಶಾಸ್ತ್ರ10
ವಾಣಿಜ್ಯಶಾಸ್ತ್ರ150
ಭೌತಶಾಸ್ತ್ರ30
ರಸಾಯನಶಾಸ್ತ್ರ30
ಗಣಿತಶಾಸ್ತ್ರ30
ಜೀವಶಾಸ್ತ್ರ30
ಕಂಪ್ಯೂಟರ್ ಸೈನ್ಸ್110

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ : ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ ದ್ವಿತೀಯ ದರ್ಜೆಯ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಅಥವಾ ತತ್ಸಮಾನ ಪದವಿ ಹೊಂದಿರಬೇಕು. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಯಲ್ಲಿ ಶೇ.50 ಅಂಕಗಳ ಅರ್ಹತೆ ಅನ್ವಯಿಸುತ್ತದೆ. ಕಂಪ್ಯೂಟರ್ ಸೈನ್ಸ್ ಹುದ್ದೆಗಳಿಗೆ ಅಧಿಸೂಚನೆಯಲ್ಲಿ ಸೂಚಿಸಿರುವ ವಿಶೇಷ ವಿದ್ಯಾರ್ಹತೆಗಳನ್ನು ಪರಿಶೀಲಿಸಬೇಕು.

ಸಾಮಾನ್ಯ ವರ್ಗಕ್ಕೆ ಗರಿಷ್ಠ 40 ವರ್ಷ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.