Home Advertisement
Home ಸುದ್ದಿ ದೇಶ ತಮಿಳುನಾಡಲ್ಲಿ ಗೆದ್ದ ಕನ್ನಡಿಗ: ವಿಜಯ್ ಪಾರ್ಟಿಯಲ್ಲಿ ಶಾಸಕನಾದ ಸುನಿಲ್ ಆನಂದ್ ಯಾರು?

ತಮಿಳುನಾಡಲ್ಲಿ ಗೆದ್ದ ಕನ್ನಡಿಗ: ವಿಜಯ್ ಪಾರ್ಟಿಯಲ್ಲಿ ಶಾಸಕನಾದ ಸುನಿಲ್ ಆನಂದ್ ಯಾರು?

0
16

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಹೊಸ ರಾಜಕೀಯ ಕ್ರಾಂತಿಗೆ ನಾಂದಿ ಹಾಡಿದೆ. ಈ ಕ್ರಾಂತಿಯ ನಡುವೆ ಕರ್ನಾಟಕದ ಪಾಲಿಗೆ ಅತ್ಯಂತ ಹೆಮ್ಮೆಯ ಸಂಗತಿಯೆಂದರೆ, ವಿಜಯ್ ಪಡೆಯಲ್ಲಿ ಕನ್ನಡಿಗನೊಬ್ಬ ಜಯಭೇರಿ ಬಾರಿಸಿ ತಮಿಳುನಾಡು ವಿಧಾನಸಭೆಗೆ ಲಗ್ಗೆ ಇಟ್ಟಿದ್ದಾರೆ.

ಮೆಟ್ಟುಪಾಳಯಂ ವಿಧಾನಸಭಾ ಕ್ಷೇತ್ರದಿಂದ ಭರ್ಜರಿ ಜಯ ಸಾಧಿಸಿರುವ ಸುನಿಲ್ ಆನಂದ್ ಮೂಲತಃ ನಮ್ಮ ಕರ್ನಾಟಕದ ತುಮಕೂರು ಜಿಲ್ಲೆಯ ತುರುವೇಕೆರೆಯವರು. ಹಲವಾರು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನೆಲೆಸಿದ್ದ ಇವರು, ವಿಜಯ್ ಅವರ ಅಭಿಮಾನಿ ಸಂಘದ (ವಿಜಯ್ ಮಕ್ಕಳ್ ಇಯಕ್ಕಂ) ಸಕ್ರಿಯ ಸದಸ್ಯರಾಗಿ ತಳಮಟ್ಟದ ಕಾರ್ಯಕರ್ತನಾಗಿ ದುಡಿದಿದ್ದರು. ಇವರ ಶ್ರಮವನ್ನು ಗುರುತಿಸಿದ ದಳಪತಿ ವಿಜಯ್, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದರು. ಇದೀಗ ಪ್ರಭಾವಿಗಳನ್ನು ಮಣಿಸಿರುವ ಸುನಿಲ್ ಆನಂದ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯರಿಗೆ ಪಟ್ಟ ಕಟ್ಟಿದ ವಿಜಯ್: ವಂಶಪಾರಂಪರ್ಯ ರಾಜಕೀಯಕ್ಕೆ ಎಳ್ಳುನೀರು ಬಿಟ್ಟಿರುವ ವಿಜಯ್, ಕೇವಲ ಸುನಿಲ್ ಆನಂದ್ ಅವರನ್ನಷ್ಟೇ ಅಲ್ಲದೆ, ತಮ್ಮ ಮನೆಯಲ್ಲಿ 30 ವರ್ಷಗಳಿಂದ ಕಾರು ಚಾಲಕನಾಗಿದ್ದ ರಾಜೇಂದ್ರನ್ ಅವರ ಪುತ್ರ ಶಬರಿನಾಥನ್ ಅವರನ್ನು ಹಾಗೂ ರಾಯಪುರಂನಲ್ಲಿ ಒಬ್ಬ ಸಾಮಾನ್ಯ ಆಟೋ ಚಾಲಕ ವಿಜಯ್ ಧಮು ಅವರನ್ನು ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದಾರೆ.

ಹಣಬಲ ಮತ್ತು ವಂಶಪಾರಂಪರ್ಯಕ್ಕೆ ಮನ್ನಣೆ ನೀಡುವ ರಾಜಕೀಯ ವ್ಯವಸ್ಥೆಯ ನಡುವೆ ವಿಜಯ್ ಅವರ ಈ “ಸಾಮಾನ್ಯನಿಗೂ ಅಧಿಕಾರ” ಎನ್ನುವ ತತ್ವಕ್ಕೆ ಈಗ ಭರ್ಜರಿ ಜಯ ಸಿಕ್ಕಿದೆ.