ಓಸ್ಟೋ: ಪ್ರಧಾನಿ ನರೇಂದ್ರ ಮೋದಿ ನಾರ್ವೆ ಪ್ರಮುಖಪತ್ರಿಕೆಯೊಂದು ಹಾವಾಡಿಗನ ರೀತಿ ಯಲ್ಲಿ ಅವಮಾನಕರವಾಗಿ ಚಿತ್ರಿಸಿರುವ ಘಟನೆ ನಡೆದಿದೆ. ಇಂಡೋ-ನಾರ್ಡಿಕ್ ಸಮ್ಮೇಳನಕ್ಕೆ ನಾರ್ವೆ ರಾಜಧಾನಿ ಓಸ್ತೋನಲ್ಲಿ ಇಳಿಯುವ ಮೊದಲು ಈ ವ್ಯಂಗ್ಯಚಿತ್ರ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮೋದಿ ಹಾವಾಡಿಗನನ್ನಾಗಿ ಮಾಡಿ, ಹಾವಿನ ಜಾಗದಲ್ಲಿ ಪೆಟ್ರೋಲ್ ಬಂಕ್ ನಾಜಲ್ ಇಡಲಾಗಿದೆ. ಇತ್ತೀಚೆಗೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ಉಲ್ಲೇಖ ಇದು. ‘ಜಾಣ ಆದರೆ ಕೊಂಚ ಕಿರಿಕಿರಿಯ ವ್ಯಕ್ತಿ’ ಎನ್ನುವ ಹೆಸರಲ್ಲಿ ಬರೆದ ಲೇಖನದಲ್ಲಿ ಈ ವ್ಯಂಗ್ಯಚಿತ್ರ ಪ್ರಕಟವಾಗಿದೆ. ಭಾರತವನ್ನು ಹಾವಾಡಿಗರ ದೇಶ ಎಂದು ಬ್ರಿಟಿಷರ ಕಾಲದಲ್ಲಿ ವ್ಯಂಗ್ಯ ಮಾಡಲಾಗುತ್ತಿತ್ತು. ಅದೇಬಂದಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ. ಪ್ರಧಾನಿ ಕಚೇರಿಯಾಗಲಿ, ಸರ್ಕಾರವಾಗಲಿ ಇದಕ್ಕೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಕ್ಟೋಬರ್ 2022ರಲ್ಲೂ ಸ್ಪ್ಯಾನಿಶ್ ಪತ್ರಿಕೆಯೊಂದು ಭಾರತದ ಆರ್ಥಿಕ ಉನ್ನತಿ ಕುರಿತು ಇದೇ ರೀತಿ ಹಾವಾಡಿಗನ ಚಿತ್ರವನ್ನು ಪ್ರಕಟಿಸಿತ್ತು.
ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ವ್ಯಾಪಕವಾಗಿ ಟ್ರೋಲ್ ಆಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಶ್ಚಿಮಾತ್ಯ ದೇಶ ಗಳು ಈಗಲೂ ಭಾರತವನ್ನು ಹಾವಾಡಿಗರ ದೇಶ ಎಂದು ಭಾವಿಸುತ್ತಿವೆ ಎಂದು ಒಬ್ಬರು ಹೇಳಿದ್ದರೆ, ವಾಕ್ ಸ್ವಾತಂತ್ರ್ಯವೆಂದರೆ ಇನ್ನೊಬ್ಬ ರನ್ನು ಹಳಿಯುವ ಸ್ವಾತಂತ್ರ್ಯವಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.ನಾರ್ವೆ ದೇಶದ ಪ್ರಮುಖ ಪತ್ರಿಕೆಯಾದ ಅಪ್ಪನ್ ಪೊಸ್ಟನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಸಂದರ್ಭದಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರ ಇದು. ಭಾರತವನ್ನು ಹಾವಾಡಿಗರ ದೇಶವೆಂದು ಬ್ರಿಟಿಷರು ಆಳುತ್ತಿದ್ದಾಗ ಹಂಗಿಸುತ್ತಿದ್ದರು. ಇನ್ನೂ ಅಲ್ಲಿನ ಜನ ಆ ಮನಸ್ಥಿತಿಯಿಂದ ಹೊರಬಂದೇ ಇಲ್ಲ ಎನ್ನುವುದು ಇದರಿಂದ ಪ್ರಕಟವಾಗಿದೆ.





















