Home Advertisement
Home ಸುದ್ದಿ ದೇಶ ಭಾರತದ ಮೊದಲ ತಡೆರಹಿತ Toll- ಏನಿದು ಹೊಸ MLFF ತಂತ್ರಜ್ಞಾನ?

ಭಾರತದ ಮೊದಲ ತಡೆರಹಿತ Toll- ಏನಿದು ಹೊಸ MLFF ತಂತ್ರಜ್ಞಾನ?

0
88

ಗುಜರಾತ್‌ನ ಸೂರತ್ ಬಳಿಯ ರಾಷ್ಟ್ರೀಯ ಹೆದ್ದಾರಿ–48ರಲ್ಲಿ (NH-48) ಭಾರತದ ಮೊದಲ ತಡೆರಹಿತ, ಬಹು-ಪಥ ಮುಕ್ತ ಹರಿವು (MLFF) ಟೋಲಿಂಗ್ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ. NHAI ಈ ಹೊಸ ತಂತ್ರಜ್ಞಾನವನ್ನು ಚೋರಿಯಾಸಿ ಟೋಲ್ ಪ್ಲಾಜಾದಲ್ಲಿ ಅಧಿಕೃತವಾಗಿ ಜಾರಿಗೆ ತರಲಾಗಿದೆ.

ಏನು ಈ MLFF ಟೋಲಿಂಗ್ ವ್ಯವಸ್ಥೆ? : MLFF (Multi-Lane Free Flow) ವ್ಯವಸ್ಥೆಯು ವಾಹನಗಳನ್ನು ಟೋಲ್ ಪ್ಲಾಜಾದಲ್ಲಿ ನಿಲ್ಲಿಸದೇ ನೇರವಾಗಿ ಸಾಗಲು ಅವಕಾಶ ನೀಡುತ್ತದೆ. ವಾಹನಗಳು ಗ್ಯಾಂಟ್ರಿ (sensor-based overhead system) ಅಡಿಯಲ್ಲಿ ಹಾದುಹೋಗುವಾಗ, ತಂತ್ರಜ್ಞಾನವು ಸ್ವಯಂಚಾಲಿತವಾಗಿ ವಾಹನವನ್ನು ಗುರುತಿಸಿ, ಟೋಲ್ ಶುಲ್ಕವನ್ನು ಕಡಿತಗೊಳಿಸುತ್ತದೆ.

NHAI ಸ್ಪಷ್ಟನೆ : NHAI ಮುಖ್ಯ ಕಾರ್ಯಾಚರಣಾ ಅಧಿಕಾರಿ ಅಮಿತ್ ರಂಜನ್ ಚಿತ್ರಾಂಶಿ ಅವರು ಈ ಕುರಿತಂತೆ, “ಈ ವ್ಯವಸ್ಥೆಯಲ್ಲಿ ಯಾವುದೇ ಅಡೆತಡೆ ಇಲ್ಲ. ವಾಹನಗಳು ನಿಲ್ಲಿಸಬೇಕಾಗಿಲ್ಲ. ಟೋಲ್ ಸಂಗ್ರಹದ ವಿಧಾನ ಮಾತ್ರ ಬದಲಾಗಿದೆ; ನಿಯಮಗಳು ಬದಲಾಗಿಲ್ಲ” ಎಂದು ತಿಳಿಸಿದ್ದಾರೆ.

ಹಳೆಯ ನಿಯಮಗಳೇ ಮುಂದುವರಿಕೆ : ಟೋಲ್ ಶುಲ್ಕದ ನಿಯಂತ್ರಣವು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 2008 ಅನ್ವಯವೇ ಮುಂದುವರಿಯುತ್ತದೆ. ವಿಶೇಷವಾಗಿ ನಿಯಮ 11 ರಿಯಾಯಿತಿಗಳನ್ನು ಒಳಗೊಂಡಿದ್ದು, ಇವುಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ತಂತ್ರಜ್ಞಾನದಲ್ಲಿ ಮುಂದುವರಿದ ಹಂತ : ಈ MLFF ವ್ಯವಸ್ಥೆ ಇಂದಿನ FASTag ವ್ಯವಸ್ಥೆಯ ಮುಂದುವರಿದ ರೂಪವಾಗಿದೆ. ಹೆಚ್ಚು ವೇಗ, ಕಡಿಮೆ ಟ್ರಾಫಿಕ್ ಜಾಮ್ ಮತ್ತು ಸುಗಮ ಪ್ರಯಾಣಕ್ಕೆ ಇದು ಸಹಕಾರಿಯಾಗಲಿದೆ.

ದೇಶಾದ್ಯಂತ ವಿಸ್ತರಣೆ ಯೋಜನೆ : ಸೂರತ್‌ನಲ್ಲಿ ಯಶಸ್ವಿಯಾಗಿ ಜಾರಿಗೆ ತಂದ ನಂತರ, ದೇಶದ ಇತರ ಭಾಗಗಳಲ್ಲಿಯೂ ಈ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರಲು ಯೋಜಿಸಲಾಗಿದೆ. ನಾಲ್ಕು ಪಥ ಹಾಗೂ ಅದಕ್ಕಿಂತ ಹೆಚ್ಚಿನ ಹೆದ್ದಾರಿಗಳನ್ನು ತಡೆರಹಿತ ಟೋಲ್ ಮಾರ್ಗಗಳಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ.

ಪ್ರಯಾಣಿಕರಿಗೆ ಲಾಭ : ಈ ಸೌಲಭ್ಯದಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನವನ್ನು ನಿಲ್ಲಿಸುವ ಅಗತ್ಯವಿಲ್ಲದೆಯೇ, ನಿಮ್ಮ FASTag ಖಾತೆಯಿಂದ ನೇರವಾಗಿ ಹಣ ಕಡಿತವಾಗುತ್ತದೆ. ಕಾಯುವ ಸಮಯ ಉಳಿಯುತ್ತದೆ ಮತ್ತು ಇಂಧನ ವ್ಯರ್ಥವಾಗುವುದು ತಪ್ಪುತ್ತದೆ.