SK Home Ad
Home ಸುದ್ದಿ ದೇಶ ಮನೆಗೆಲಸದ ಕಲಿತಾ ಮಾಝಿ ಸೇರಿ 35 ಸಚಿವರ ಪ್ರಮಾಣವಚನ ಸ್ವೀಕಾರ

ಮನೆಗೆಲಸದ ಕಲಿತಾ ಮಾಝಿ ಸೇರಿ 35 ಸಚಿವರ ಪ್ರಮಾಣವಚನ ಸ್ವೀಕಾರ

0
157

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವಾರಗಳಲ್ಲೇ ಸಂಪುಟ ವಿಸ್ತರಿಸಲಾಗಿದೆ.

ಮನೆಗೆಲಸದವರಾಗಿದ್ದ ಕಲಿತಾ ಮಾಝಿ, ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಸೇರಿ ಬಿಜೆಪಿಯ 35 ಶಾಸಕರು ಈಗ ಸುವೇಂದು ಸಂಪುಟಕ್ಕೆ ಸೇರ್ಪಡೆಗೊಂಡಿರುವುದರಿಂದ ಸಚಿವರುಗಳ ಸಂಖ್ಯೆ 41ಕ್ಕೇರಿದೆ.

ಒಂದು ಕಾಲದಲ್ಲಿ ಕುಟುಂಬ ಪೋಷಣೆಗಾಗಿ ಮಾಸಿಕ 2,500 ರೂ.ನಂತೆ ಮನೆಗೆಲಸದವರಾಗಿ ದುಡಿದಿದ್ದ ಕಲಿತಾ ಮಾಝಿ ಈಗ ಸಚಿವೆಯಾಗಿದ್ದಾರೆ. ನೂತನ ಸಚಿವರಿಗೆ ರಾಜ್ಯಪಾಲ ಆರ್.ಎನ್. ರವಿ ಪ್ರಮಾಣ ವಚನ ಬೋಧಿಸಿದರು.

2026ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಲಿತಾ ಮಾಝಿ 1,07,692 ಮತಗಳನ್ನು ಪಡೆದಿದ್ದು, ತಮ್ಮ ಪ್ರತಿಸ್ಪರ್ಧಿ ಶ್ಯಾಮ ಪ್ರಸನ್ನ ಲೋಹರ್ ಅವರ ವಿರುದ್ಧ 12,535 ಮತಗಳ ಅಂತರದಿಂದ ಜಯ ಸಾಧಿಸಿದ್ದರು.