Home Advertisement
Home ನಮ್ಮ ಜಿಲ್ಲೆ ಉಡುಪಿ ಗಮಕಿ ಚಂದ್ರಶೇಖರ ಕೆದ್ಲಾಯ ನಿಧನ

ಗಮಕಿ ಚಂದ್ರಶೇಖರ ಕೆದ್ಲಾಯ ನಿಧನ

0
197

ಉಡುಪಿ: ಖ್ಯಾತ ಗಾಯಕ, ಗಮಕಿ, ಆಕಾಶವಾಣಿ ಕಲಾವಿದ, ನಿವೃತ್ತ ಶಿಕ್ಷಕ ಚಂದ್ರಶೇಖರ ಕೆದ್ಲಾಯ(72) ಹೃದಯಾಘಾತದಿಂದ ಮಂಗಳವಾರ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬ್ರಹ್ಮಾವರ ತಾಲೂಕಿನ ಹೆಸ್ಕತ್ತೂರು ಗ್ರಾಮದ ಹಾರ್ಯಾಡಿಯಲ್ಲಿ 1950ರ ಏಪ್ರಿಲ್ 23 ಜನಿಸಿರುವ ಅವರು, ಮಂಗಳೂರಿನ ಕೆನರಾ ಪ್ರೌಢ ಶಾಲೆಯಲ್ಲಿ ಮತ್ತು 35 ವರ್ಷಗಳ ಕಾಲ ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ(1992- 93), ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ(2008), ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ವಿವಿಧ ಸಂಘ-ಸಂಸ್ಥೆಗಳಿಂದ ಮನ್ನಣೆ ಪಡೆದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.