Home Advertisement
Home ತಾಜಾ ಸುದ್ದಿ ಸುಧಾಕರ್ ರಾಜೀನಾಮೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

ಸುಧಾಕರ್ ರಾಜೀನಾಮೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

0
173

ಬೆಂಗಳೂರು: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾಜೀನಾಮೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ರೋಗಿಗಳ ಸಾವಿನ ಕುರಿತು ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು. ಕರೆಂಟ್ ಇಲ್ಲದೇ ಇರೋದ್ರಿಂದ ರೋಗಿಗಳು ಸಾವನ್ನಪ್ಪಿದ್ದಾರೆ, ಜನರೇಟರ್ ಕೊಡದೆ ಆರೋಗ್ಯ ಸಚಿವರು ಏನ್ಮಾಡ್ತಿದ್ದಾರೆ ? ತಕ್ಷಣವೇ ಹೆಲ್ತ್ ಮಿನಿಸ್ಟರ್ ರಾಜೀನಾಮೆ ಕೊಡ್ಬೇಕು, ವಿಮ್ಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸುಧಾಕರ್ ರಾಜೀನಾಮೆಗೆ ಸಿದ್ದರಾಮಯ್ಯ ಅವರು ಆಗ್ರಹಿಸಿದ ಹಿನ್ನೆಲೆಯಲ್ಲಿ ಕಲಾಪದಲ್ಲಿ ಭಾರೀ ಕೋಲಾಹಲವಾಯಿತು.

Previous articleಹ್ಯಾಂಡ್ಸಮ್ ರಾಜಕಾರಣಿ ಬಿಗ್​ಬಾಸ್​ ಸೀಸನ್ 9ಗೆ ಹೋಗಲಿದ್ದಾರೆ..
Next articleಬೆತ್ತಲೆ ಫೋಟೋ ವಿವಾದ- ನಟ ರಣವೀರ್ ಸಿಂಗ್ ವಿಚಾರಣೆ ವೇಳೆ ಶಾಕಿಂಗ್ ಹೇಳಿಕೆ