SK Home Ad
Home ತಾಜಾ ಸುದ್ದಿ ಕರ್ನಾಟಕ ವಿವಿ ಸಿಬ್ಬಂದಿ ಪಿಂಚಣಿಗೆ ೧೮ ಕೋಟಿ ರೂ ಹೆಚ್ಚುವರಿ ಅನುದಾನ: ಅಶ್ವತ್ಥ ನಾರಾಯಣ

ಕರ್ನಾಟಕ ವಿವಿ ಸಿಬ್ಬಂದಿ ಪಿಂಚಣಿಗೆ ೧೮ ಕೋಟಿ ರೂ ಹೆಚ್ಚುವರಿ ಅನುದಾನ: ಅಶ್ವತ್ಥ ನಾರಾಯಣ

0
216
KUD

ಬೆಂಗಳೂರು: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದ ೨೦೨೨-೨೩ನೇ ಸಾಲಿನ ಪಿಂಚಣಿಗಾಗಿ ೧೮.೧೨ ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯವು ಆಂತರಿಕ ಸಂಪನ್ಮೂಲಗಳಿಂದಲೇ ಸಾಕಷ್ಟು ಹಣವನ್ನು ಕ್ರೊಢೀಕರಿಸಿದೆ. ಎದುರಾಗಿದ್ದ ಅಲ್ಪ ಪ್ರಮಾಣದ ಕೊರತೆಯನ್ನು ಹೆಚ್ಚುವರಿ ಅನುದಾನದ ಮೂಲಕ ಬಗೆಹರಿಸಲಾಗಿದೆ ಎಂದಿದ್ದಾರೆ. ಈ ಹಣವನ್ನು ಪಿಂಚಣಿಗೆ ಅಲ್ಲದೆ ಬೇರೆ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಜತೆಗೆ, ಖರ್ಚುವೆಚ್ಚಗಳ ವಿವರಗಳನ್ನು ವಿ.ವಿ.ಯ ಜಾಲತಾಣದಲ್ಲಿ ನಮೂದಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.