SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಟ್ವಿಸ್ಟ್: ಧನುಷ್ ಮಾಡಿದ ಸಣ್ಣ ತಪ್ಪಿಗೆ ತಾಂಡವ್ ರಾಮ್ ಔಟ್; ಗಗನ್ ಕಣ್ಣೀರು!

ಬಿಗ್ ಬಾಸ್ ಟ್ವಿಸ್ಟ್: ಧನುಷ್ ಮಾಡಿದ ಸಣ್ಣ ತಪ್ಪಿಗೆ ತಾಂಡವ್ ರಾಮ್ ಔಟ್; ಗಗನ್ ಕಣ್ಣೀರು!

0
14

‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಿದ್ದು, ಇತ್ತೀಚಿನ ನಾಮಿನೇಷನ್ ಪ್ರಕ್ರಿಯೆ ಬಿಗ್ ಬಾಸ್ ಮನೆಯ ಚಿತ್ರಣವನ್ನೇ ಬದಲಿಸಿದೆ. ಟಾಸ್ಕ್‌ನಲ್ಲಿ ಗೆದ್ದು ವಿಶೇಷ ಅಧಿಕಾರ ಪಡೆದಿದ್ದ ಧನುಷ್, ಆಸಿಯಾ, ಕಿರಣ್ ಶಾಸ್ತ್ರಿ ಮತ್ತು ಕಾವ್ಯ ಅವರಿಗೆ ನಾಮಿನೇಷನ್‌ನಿಂದ ಬಚಾವ್ ಆಗಲು ಮನೆಯ ಇತರ ಸದಸ್ಯರಿಂದ ತಲಾ 50% ವೋಟ್ ಪಡೆಯುವ ಬಂಪರ್ ಅವಕಾಶ ಸಿಕ್ಕಿತ್ತು. ಆದ್ರೆ ಧನುಷ್ ಮಾಡಿದ ಸಣ್ಣ ಲೆಕ್ಕಾಚಾರದ ತಪ್ಪು ಸಹಸ್ಪರ್ಧಿ ತಾಂಡವ್ ರಾಮ್ ಅವರ ನಿರ್ಗಮನಕ್ಕೆ ಕಾರಣವಾಗಿದೆ.

ತಾಂಡವ್ ರಾಮ್ ಅವರಿಗೆ ಹೆಚ್ಚು ಮತಗಳು ಬಂದಿರಬಹುದು ಎಂದು ಅಂದಾಜಿಸಿದ ಧನುಷ್, ತಮ್ಮನ್ನು ತಾವು ಸುರಕ್ಷಿತಗೊಳಿಸಲು ಅವರಿಂದ ಶೇ. 50 ರಷ್ಟು ಮತಗಳನ್ನು ಪಡೆದುಕೊಂಡರು. ಆದ್ರೆ ಧನುಷ್ ಅವರ ಈ ನಿರ್ಧಾರವೇ ಉಲ್ಟಾ ಹೊಡೆದು, ಅಂತಿಮವಾಗಿ ತಾಂಡವ್ ಎಲಿಮಿನೇಟ್ ಆಗುವಂತೆ ಮಾಡಿತು. ತಮ್ಮ ಒಂದೇ ಒಂದು ತಪ್ಪಿನಿಂದಾಗಿ ತಾಂಡವ್ ಆಟ ಮುಗಿಯಿತು ಎಂದು ತಿಳಿದ ಧನುಷ್, ಮನೆಯಲ್ಲಿ ಅತ್ತು ತಮ್ಮ ಪಶ್ಚಾತ್ತಾಪ ವ್ಯಕ್ತಪಡಿಸಿದರು. “ಇದು ನನ್ನ ಜೀವನದಲ್ಲೇ ಮರೆಯಲಾಗದ ದೊಡ್ಡ ರಿಗ್ರೆಟ್” ಎಂದು ಗಿಲ್ಟ್‌ನಿಂದ ಕೊರಗಿದ್ದಾರೆ.

ಅಷ್ಟೇ ಅಲ್ಲದೇ.. ತಾಂಡವ್‌ ರಾಮ್‌ ಅವರ ಗೆಳೆಯ ಗಗನ್‌ ಕೊಡ ಬಿಕ್ಕಿ ಬಿಕ್ಕಿ ಅಳುತ್ತಾ, ಬಿಗ್‌ ಬಾಸ್‌ ಇದು ತಪ್ಪು ಎಂದು ಕೊಗಿದ್ದಾರೆ. ಹಾಗೇ ಮನೆಯ ಸ್ಪರ್ಧಿಗಳೆಲ್ಲ ಒಂದು ಕ್ಷಣ ಭಾವುಕರಾಗಿ ಮೌನ ಮುಗ್ಧರಾಗಿ ನಿಂತಿದ್ದರು. ನಂತರ ತಾಂಡವ್‌ ಎಲ್ಲರಿಗೂ ʻನಿನ್ನ ಹೆಸರಲ್ಲಿ ಅದು ಇದ್ದರೇ ಸಿಕ್ಕೇ ಸಿಗುತ್ತೆ, ಇಲ್ಲದಿದ್ದರೆ ಆ ದೇವರು ಏನು ಮಾಡೋದಕ್ಕೆ ಆಗೋದಿಲ್ಲʼ ಎಂದು ಹೇಳಿ ಕೃತಜ್ಞತೆ ತಿಸಿದರು.

ಹಾಗೇ ನಿರ್ಗಮಿಸುವ ಕ್ಷಣದಲ್ಲೂ ತಾಂಡವ್ ರಾಮ್ ಅದ್ಭುತ ಕ್ರೀಡಾಸ್ಪೂರ್ತಿ ಮೆರೆದರು. ಧನುಷ್ ವಿರುದ್ಧ ಯಾವುದೇ ಕೋಪ ತೋರ್ಪಡಿಸದೆ, “ಏನೂ ಬೇಜಾರು ಮಾಡಿಕೊಳ್ಳಬೇಡ, ಖುಷಿಯಾಗಿ ಮುಂದಿನ ಆಟ ಆಡು” ಎಂದು ಧನುಷ್‌ಗೆ ಧೈರ್ಯ ತುಂಬಿ ಬೀಳ್ಕೊಟ್ಟರು. ಸದ್ಯ ಈ ಭಾವುಕ ಕ್ಷಣದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.