ಭದ್ರಾ ನಾಲೆ ದುರಂತ: ದಂಪತಿ ಮೃತದೇಹ ಪತ್ತೆ, ಕಾರ್ಯಾಚರಣೆ ಅಂತ್ಯ

0
5

ಶಿವಮೊಗ್ಗ: ಭದ್ರಾ ಎಡದಂಡೆ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ದಂಪತಿಯ ಮೃತದೇಹ ಗುರುವಾರ ಪತ್ತೆಯಾಗಿದೆ.

ಅರೆಬಿಳಚಿ ಕ್ಯಾಂಪ್ ಬಳಿ ಭಾನುವಾರ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಒಂದೇ ಕುಟುಂಬದ ನಾಲ್ವರು ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದರು. ಇಬ್ಬರ ಮೃತದೇಹ ಪತ್ತೆ ಮಾಡಲಾಗಿತ್ತು. ಇದೀಗ ಶ್ವೇತಾ (28) ಹಾಗೂ ಪತಿ ಪರಶುರಾಮ್ (33) ಮೃತದೇಹ ಅರೆಬಿಳಚಿ ಕ್ಯಾಂಪ್ ಸಮೀಪದ ನಾಲೆಯಲ್ಲಿಯೇ ಪತ್ತೆಯಾಗಿವೆ.

ಈ ಮೊದಲು ನೀಲಾಬಾಯಿ ಹಾಗೂ ಅವರ ಪುತ್ರ ರವಿಕುಮಾರ್ ಅವರ ಮೃತ ದೇಹಗಳು ಸಿಕ್ಕಿದ್ದವು. ಈ ಮೂಲಕ ಸತತ 5 ದಿನಗಳಿಂದ ನಡೆದ ಕಾರ್ಯಾಚರಣೆ ಅಂತ್ಯವಾಗಿದೆ.

ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ನಿರಂತರ ಶೋಧ ಕಾರ್ಯ ನಡೆಸಿದ್ದರು. ನಾಲೆಯಲ್ಲಿ ನೀರಿನ ಮಟ್ಟವನ್ನು ಕಡಿಮೆ ಮಾಡಿ ಹುಡುಕಾಟ ನಡೆಸಿದ ಬಳಿಕ ದಂಪತಿಯ ಮೃತದೇಹ ಹೊರತೆಗೆಯಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Previous articleರೀಲ್ಸ್ ಹುಚ್ಚು: ಟ್ರ್ಯಾಕ್ಟರ್ ಚಕ್ರಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡ ಯುವಕ