Home Advertisement
Home ನಮ್ಮ ಜಿಲ್ಲೆ ಹಾವೇರಿ SSLC ಪರೀಕ್ಷೆ ಆತಂಕ: ನಾಪತ್ತೆಯಾಗಿದ್ದ ವಸತಿ ಶಾಲೆಯ 6 ವಿದ್ಯಾರ್ಥಿಗಳು ಪತ್ತೆ

SSLC ಪರೀಕ್ಷೆ ಆತಂಕ: ನಾಪತ್ತೆಯಾಗಿದ್ದ ವಸತಿ ಶಾಲೆಯ 6 ವಿದ್ಯಾರ್ಥಿಗಳು ಪತ್ತೆ

0
63

ಹಾವೇರಿ: ರಾಜ್ಯದಲ್ಲಿ ಮಾರ್ಚ್ 18ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿರುವ ಸಮಯದಲ್ಲೇ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸುಣಕಲಬಿದರಿ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ನಾಪತ್ತೆಯಾಗಿದ್ದ ಘಟನೆ ನಡೆದಿದೆ. ವಸತಿ ಶಾಲೆಯ 6 ವಿದ್ಯಾರ್ಥಿಗಳು ಸಂಜೆ ವೇಳೆಗೆ ಪತ್ತೆಯಾಗಿದ್ದಾರೆ.

ಎಸ್ಸೆಲ್ಸಿಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಪೂರ್ವಭಾವಿ ಪರೀಕ್ಷೆಗಳು ನಡೆದಿವೆ. ಶುಕ್ರವಾರ ಶಾಲೆಯಲ್ಲಿ ವಿಜ್ಞಾನ ವಿಷಯದ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಶುಕ್ರವಾರ ಬೆಳಗಿನಜಾವ ತಡೆಗೋಡೆ ಹಾರಿ ಪರಾರಿಯಾಗಿದ್ದರು.

ಇದನ್ನೂ ಓದಿ: ಮಾರ್ಚ್ 3ಕ್ಕೆ ‘Blood Moon’: ಫಾಲ್ಗುಣ ಪೂರ್ಣಿಮೆಗೆ ಖಗೋಳ ಅದ್ಭುತ

ಇದರಿಂದ ಶಾಲೆಯಲ್ಲಿ ಹಾಗೂ ಮಕ್ಕಳ ಪಾಲಕರಲ್ಲಿ ಆತಂಕ ಎದುರಾಗಿತ್ತು. ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬಳಿಕ ಶಿಗ್ಗಾವಿ ತಾಲೂಕು ಶಿಶುನಾಳ ಗ್ರಾಮದ ಬಳಿ ಪತ್ತೆಯಾಗಿದ್ದಾರೆ. ಇದರಿಂದ ಪಾಲಕರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಪರೀಕ್ಷೆ ಭಯವೇ ಕಾರಣ?: ಶಾಲೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಆತಂಕಗೊಂಡಿದ್ದ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಪರಾರಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಮೂಲಗಳ ಪ್ರಕಾರ, ನಸುಕಿನ ಜಾವ ವಾಚ್‌ಮೆನ್ ಇಲ್ಲದಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ವಸತಿ ಶಾಲೆಯ ಕಾಂಪೌಂಡ್ ಹಾರಿ ಹೊರಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾರವಾರ:ಆಶಾ ಕಾರ್ಯಕರ್ತೆಯರ ಪ್ರತಿಭಟನೆ -ವೇತನ ಹೆಚ್ಚಳಕ್ಕೆ ಆಗ್ರಹ

ಇನ್ನು ಈ ಕುರಿತಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಾತನಾಡಿದ ಡಾ. ಅಬ್ದುಲ್‌ರಶೀದ್ ಮಿರ್ಜನ್ನವರ ಎಸ್ಸೆಸ್ಸೆಲ್ಸಿಯ ಪೂರ್ವಭಾವಿ ಪರೀಕ್ಷೆಗೆ ಹೆದರಿ ಸುಣಕಲಬಿದರಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 6 ವಿದ್ಯಾರ್ಥಿಗಳು ತಡೆಗೋಡೆ ಜಿಗಿದು ಹೋಗಿದ್ದರು. ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾಗಿ ವಿದ್ಯಾರ್ಥಿಗಳನ್ನು ಶಿಶುನಾಳ ಜಾತ್ರೆಯಲ್ಲಿ ಪತ್ತೆ ಮಾಡಿ ಶಿಕ್ಷಕರು ಶಾಲೆಗೆ ಕರೆತರಲಾಗಿದೆ ಎಂದಿದ್ದಾರೆ.

ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹಾಕಬಾರದು ಎಂದು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ.

ಪರೀಕ್ಷಾ ಒತ್ತಡ ಕುರಿತು ತಜ್ಞರ ಸಲಹೆ: ವಿದ್ಯಾರ್ಥಿಗಳಿಗೆ ಧೈರ್ಯ ತುಂಬಬೇಕು, ಪರೀಕ್ಷೆಯನ್ನು ಅಂತಿಮ ಪರೀಕ್ಷೆಯಂತೆ ಭಾವಿಸಬಾರದು, ಪಾಲಕರು ಮತ್ತು ಶಿಕ್ಷಕರು ಒತ್ತಡ ಹಾಕದೆ ಪ್ರೋತ್ಸಾಹ ನೀಡಬೇಕು. ಸಹಾಯವಾಣಿ: ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಸಹಾಯವಾಣಿ ಸಂಖ್ಯೆಗಳನ್ನು 080-23310075/76 ನೀಡಿದೆ, ವಿದ್ಯಾರ್ಥಿಗಳು ಮತ್ತು ಪೋಷಕರು ಇದರ  ಸಹಾಯ ಪಡೆಯಬಹುದು.

Previous articleಬಾಗಲಕೋಟೆ: ಹಿಂದೂ ಕಾರ್ಯಕರ್ತರ ಬಂಧನ ಯತ್ನಕ್ಕೆ ತೀವ್ರ ವಿರೋಧ – ಪೊಲೀಸರೊಂದಿಗೆ ಸ್ಥಳೀಯರ ವಾಗ್ವಾದ