SK Home Ad
Home ನಮ್ಮ ಜಿಲ್ಲೆ ಹಾಸನ ಹಾಸನಾಂಬ ದರ್ಶನಕ್ಕೆ ಭಕ್ತಸಾಗರ: ₹23 ಕೋಟಿಗೂ ಅಧಿಕ ಆದಾಯ!

ಹಾಸನಾಂಬ ದರ್ಶನಕ್ಕೆ ಭಕ್ತಸಾಗರ: ₹23 ಕೋಟಿಗೂ ಅಧಿಕ ಆದಾಯ!

0
42

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನದ ಹನ್ನೊಂದನೇ ದಿನವಾದ ಸೋಮವಾರ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗಿನ ವೇಳೆಯಲ್ಲಿ ಭಕ್ತರ ಸಂಖ್ಯೆ ಕೊಂಚ ಕಡಿಮೆಯಾಗಿದ್ದರೂ, ಬಳಿಕ ದೇವಿಯ ದರ್ಶನ ಪಡೆಯಲು ಭಕ್ತರ ದಂಡೇ ಹರಿದುಬಂದಿತು. ದೇವಿಯ ದರ್ಶನ ಹಾಗೂ ಲಾಡು ಪ್ರಸಾದ ಮಾರಾಟದಿಂದ ದೇವಸ್ಥಾನಕ್ಕೆ ಈವರೆಗೆ ₹23 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ.

ಬೆಳಗಿನ ವೇಳೆಯಲ್ಲಿ ಧರ್ಮದರ್ಶನದ ಸಾಲಿನಲ್ಲಿ ಭಕ್ತರ ಸಂಖ್ಯೆ ಕಡಿಮೆಯಿತ್ತು. ಆದರೆ, 1,000 ರೂ. ಹಾಗೂ 300 ರೂ. ಶುಲ್ಕದ ವಿಶೇಷ ದರ್ಶನದ ಸಾಲುಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಕಂಡುಬಂದರು. ದಿನ ಕಳೆದಂತೆ ದೇವಸ್ಥಾನದತ್ತ ಭಕ್ತರ ಆಗಮನ ಹೆಚ್ಚಾಯಿತು.

ಇನ್ನೊಂದೆಡೆ, ಗಣ್ಯರ ಪ್ರೋಟೋಕಾಲ್ ವ್ಯವಸ್ಥೆ, ಗೋಲ್ಡನ್ ಪಾಸ್‌ಗಳ ಮಾರಾಟ, ಚಪ್ಪಲಿ ಕಳೆದುಕೊಂಡು ಭಕ್ತರು ಪರದಾಡಿದ ಘಟನೆಗಳು ಹಾಗೂ ಕಾಂಗ್ರೆಸ್ ಮುಖಂಡರೊಬ್ಬರು ಅಧಿಕಾರಿಗಳೊಂದಿಗೆ ನಡೆದುಕೊಂಡ ರೀತಿ ದರ್ಶನ ವ್ಯವಸ್ಥೆಯಲ್ಲಿನ ಹಲವು ಲೋಪಗಳನ್ನು ಮುನ್ನೆಲೆಗೆ ತಂದಿವೆ.

ಒಂದೆಡೆ ದೇವಿಯ ದರ್ಶನಕ್ಕೆ ಭಕ್ತರ ಉತ್ಸಾಹ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ವ್ಯವಸ್ಥಾಪನೆಯಲ್ಲಿನ ಗೊಂದಲಗಳು ಮತ್ತು ಅಧಿಕಾರಿಗಳ ಮೇಲಿನ ಒತ್ತಡದ ಆರೋಪಗಳು ಚರ್ಚೆಗೆ ಗ್ರಾಸವಾಗಿವೆ.