ಚಿತ್ರದುರ್ಗ: ಹಿರಿಯೂರು ಕಾಂಗ್ರೆಸ್ ಸಭೆಯಲ್ಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಸುಹಾಸ್ ಸುಧಾಕರ್ ಅವರನ್ನು ಗೆಲ್ಲಿಸಿ ಎಂದು ಹೇಳಿಕೆ ನೀಡಿ, ಪರೋಕ್ಷವಾಗಿ ಅಭ್ಯರ್ಥಿ ಹೆಸರು ಘೋಷಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಹಿರಿಯೂರು ಪಟ್ಟಣದಲ್ಲಿ ಮಾತನಾಡಿದ ಅವರು, “ಎನ್.ವೈ. ಗೋಪಾಲಕೃಷ್ಣ ಏನು ಅಧ್ಯಕ್ಷರಾ ಅಥವಾ ಏನು? ಕಾಂಗ್ರೆಸ್ ಪಕ್ಷದಲ್ಲಿ ಸೆಂಟ್ರಲ್ ಎಲೆಕ್ಷನ್ ಕಮಿಟಿ ಇದೆ, ಒಂದು ವ್ಯವಸ್ಥೆ ಎಂಬುದಿದೆ. ರಾಜ್ಯ, ಕೇಂದ್ರದ ಚುನಾವಣಾ ಸಮಿತಿ ಇದೆ” ಎಂದು ಗರಂ ಆದರು.
“ಯಾರ ಹೆಸರು ಬರುತ್ತದೆ ಎಂದು ಕೇಂದ್ರಕ್ಕೆ ನಾವು ಕಳುಹಿಸಬೇಕು. ಕೇಂದ್ರದ ನಾಯಕರು ಹೇಳಿದ ಮೇಲೆ ಅಂತಿಮ ತೀರ್ಮಾನವಾಗುತ್ತದೆ. ಎನ್.ವೈ. ಗೋಪಾಲಕೃಷ್ಣ ಅವರು ತಮ್ಮ ಅನಿಸಿಕೆ ಹೇಳಿದ್ದಾರೆ, ಅನಿಸಿಕೆ ಹೇಳುವುದರಲ್ಲಿ ತಪ್ಪಿಲ್ಲ, ಆದರೆ ಅಂತಿಮ ತೀರ್ಮಾನ ಹೈಕಮಾಂಡ್ನದ್ದು” ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು.




















