SK Home Ad
Home ಸುದ್ದಿ ರಾಜ್ಯ ನೀವು ʻಗೃಹಲಕ್ಷ್ಮಿʼ ಫಲಾನುಭವಿಗಳಾ? ಹಾಗಿದ್ರೆ ಈ ಸುದ್ದಿ ಓದಿ

ನೀವು ʻಗೃಹಲಕ್ಷ್ಮಿʼ ಫಲಾನುಭವಿಗಳಾ? ಹಾಗಿದ್ರೆ ಈ ಸುದ್ದಿ ಓದಿ

0
164

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ʻಗೃಹಲಕ್ಷ್ಮಿʼ ಯೋಜನೆಯ ಅರ್ಹ ಫಲಾನುಭವಿಗಳ(ಮನೆ ಯಜಮಾನಿ) ಮರುಪರಿಶೀಲನೆಗೆ ಬಯೋಮೆಟ್ರಿಕ್ ಮತ್ತು ಫೇಶಿಯಲ್ ಅಥೆಂಟಿ ಕೇಷನ್ (ಮುಖ ದೃಢೀಕರಣ) ಕಡ್ಡಾಯವಾಗಿದೆ. ರಾಜ್ಯ ಸರ್ಕಾರ ಆಡಳಿತಾತ್ಮಕ ಆದೇಶ ಹೊರಡಿಸಿದ್ದು ಇಂದಿನಿಂದ (ಸೆ. 30) ಶುರುವಾಗಲಿದ್ದು, ಇನ್ನೊಂದು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಮಿತಿ ಹಾಕಲಾಗಿದೆ.

3 ವರ್ಷದಲ್ಲಿ 76 ಕೋಟಿ ವಿತರಣೆ: 2023 ಆಗಸ್ಟ್‌ನಿಂದ ಇಲ್ಲಿಯವರೆಗೆ 1.24 ಕೋಟಿ ಫಲಾನುಭವಿಗಳಿಗೆ ಒಟ್ಟು 32 ಕಂತುಗಳಲ್ಲಿ 76,951.13 ಕೋಟಿ ರೂ. ವೆಚ್ಚದ ಧನ ಸಹಾ ಯವನ್ನು ಪಾವತಿಸಲಾಗಿದೆ. ಈ ಅವಧಿಯಲ್ಲಿ ಕೆಲವು ಫಲಾನುಭವಿಗಳು ಮೃತಪಟ್ಟಿರುವುದು, ವಲಸೆ ಹೋದವರು ಅವರ ಪತಿ ಐಟಿ ಹಾಗೂ ಜಿಎಸ್‌ಟಿ ಪಾವತಿಸುತ್ತಿರುವ ನಿದರ್ಶನಗಳು ವರದಿಯಾಗಿವೆ. ಅಂತಹ ಅನರ್ಹರನ್ನು ಕೈಬಿಟ್ಟು ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ಮುಂದುವರಿಸಲು 20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಮರುಪರಿಶೀಲನಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಪರಿಶೀಲನೆ ಪ್ರಕ್ರಿಯೆ ಹೇಗಿರಲಿದೆ: ನೋಂದಾಯಿತ ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಫೇಶಿಯಲ್ ಅಥೆಂಟಿಕೇಷನ್ ಪಡೆಯುವುದು. ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ಸ್ ಸರ್ವಿಸಸ್ ನಿರ್ದೇಶನಾಲಯ ಅಭಿವೃದ್ಧಿಪಡಿಸಿದ ವೆಬ್‌ಸೈಟ್/ಮೊಬೈಲ್ ಆಪ್ ಮೂಲಕ ಮನೆಮನೆ ಸಮೀಕ್ಷೆ ಹಾಗೂ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಇದನ್ನು ಕಾರ್ಯಗತಗೊಳಿಸುವುದು.

ಪ್ರಕ್ರಿಯೆ ಹೇಗೆ?

  • ಸ್ಥಳೀಯ ಮಟ್ಟದಲ್ಲಿ ಜಿಲ್ಲಾ ಮತ್ತು ತಾಲೂಕು ಸಮಿತಿಗಳು ಪ್ರಕ್ರಿಯೆ ಪೂರ್ಣಗೊಳಿಸುವುದನ್ನು ಖಚಿತಪಡಿಸಬೇಕು
  • ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳಿಂದ ವಾರ್ಡ್ ಹಾಗೂ ಗ್ರಾಮವಾರು ನಿಯೋಜನೆಯೊಂದಿಗೆ ಗಣತಿದಾರರಿಗೆ ಆದೇಶ
  • ಗ್ಯಾರಂಟಿ ಸಮಿತಿ ಸದಸ್ಯರು ಕಡ್ಡಾಯವಾಗಿ ಮನೆಗಳಿಗೆ ಭೇಟಿ ನೀಡಿ ಗಣತಿ ನಮೂನೆಗಳ ವಿತರಣೆ
  • ಫಲಾನುಭವಿಗಳು ಅಥವಾ ಕುಟುಂಬದ ಸದಸ್ಯರು ನಮೂನೆಯನ್ನು ಭರ್ತಿ ಮಾಡಿ ಭೇಟಿ ಸಮಯದಲ್ಲಿ ಹಿಂತಿರುಗಿಸಬೇಕು
  • ಆ್ಯಪ್‌ನಲ್ಲಿ ಫಲಾನುಭವಿ ಫೋಟೋ ಜಿಪಿಎಸ್ ನಿರ್ದೇಶಾಂಕ ಸಂಗ್ರಹ