ಬಾಗಲಕೋಟೆ: ಮುಸ್ಲಿಂ ಲೀಗ್ ಕೇವಲ ಆ ಧರ್ಮೀಯರ ಪಕ್ಷವಲ್ಲ ಅದು ಹುಟ್ಟಿರುವುದೇ ದೇಶ ವಿಭಜನೆಗಾಗಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಸ್ಲಿಂ ಲೀಗ್‌ನ ಮುಖ್ಯಸ್ಥರಿದ್ದಂತೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.
ಬಾದಾಮಿ ತಾಲೂಕಿನ ಮಹಾಕೂಟದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪಂ. ದೀನದಯಾಳ ಉಪಾಧ್ಯಾಯ ಮಹಾಭಿಯಾನದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷವೆಂದರೆ ಮುಸ್ಲಿಂ ಲೀಗ್ ಇದ್ದಂತೆ. ಮುಸ್ಲಿಂ ಲೀಗ್ ಕೇವಲ ಮುಸ್ಲಿಂರ ಪಕ್ಷವಷ್ಟೇ ಅಲ್ಲದೇ ಅದು ಹುಟ್ಟಿಕೊಂಡಿದ್ದೇ ದೇಶವನ್ನು ಇಬ್ಭಾಗ ಮಾಡುವುದಕ್ಕಾಗಿ. ರಾಹುಲ್ ಗಾಂಧಿ ಎಂದರೆ ಮೊಹಮ್ಮದ್ ಅಲಿ ಜಿನ್ನಾಯಿದ್ದಂತೆ ಎಂದು ಟೀಕಿಸಿದರು.
ಕೇರಳದಲ್ಲಿ ಮುಸ್ಲಿಂ ಲೀಗ್‌ನ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸುತ್ತಿದೆ. ಆ ಪಕ್ಷದಿಂದ ಗೆದ್ದವರೆಲ್ಲ ಮುಸ್ಲಿಂರು ಅವರನ್ನೆಲ್ಲ ಸಚಿವರನ್ನಾಗಿಸಲು ಕಾಂಗ್ರೆಸ್ ಹೊರಟಿದೆ. ಅಸ್ಸಾಂನಲ್ಲಿ 19 ಜನರ ಪೈಕಿ 18 ಮುಸ್ಲಿಂರು ಗೆದ್ದಿದ್ದಾರೆ. ಅಬ್ದುಲ್ ಬದ್ರುದ್ಧಿನ್ ಅವರೇ ಕಾಂಗ್ರೆಸ್ ಪಕ್ಷ ಮತ್ತೊಂದು ಮುಸ್ಲಿಂ ಆಗಿದೆ ಎಂದಿದ್ದಾರೆ.
ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ 90 ಜನ ಗೆದ್ದಿದ್ದಾರೆ. ತಮಿಳುನಾಡಿನಲ್ಲಿ 5 ಜನರ ಪೈಕಿ 4 ಮುಸ್ಲಿಂರು ಗೆದ್ದಿದ್ದಾರೆ. ಮುಸ್ಲಿಂ ಲೀಗ್‌ನವರು ಪ್ರತ್ಯೇಕ ಬಜೆಟ್ ಕೇಳುತ್ತಿದ್ದಾರೆ. ಕಾಂಗ್ರೆಸ್ಸಿನವರು ಬಾಂಗ್ಲಾ ನುಸುಳುಕೋರರ ಬಗ್ಗೆ ಮಾತನಾಡುವುದಿಲ್ಲ, ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನೆಲ್ಲ ತಮ್ಮ ಬ್ರದರ್ ಎಂದು ಹೇಳಿಕೊಳ್ಳುತ್ತಾರೆ. ರಾಹುಲ್ ಗಾಂಧಿ ಅಪ್ರಬುದ್ಧ ಟೀಂನ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದರು.






















