SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಗೃಹಲಕ್ಷ್ಮೀ ಹಣ ಕಸಿದು ತಾಯಿಗೆ ಥಳಿಸಿದ ಮಗ

ಗೃಹಲಕ್ಷ್ಮೀ ಹಣ ಕಸಿದು ತಾಯಿಗೆ ಥಳಿಸಿದ ಮಗ

0
61

ಚಿಕ್ಕೋಡಿ: ಹೆತ್ತ ತಾಯಿ ಒಂಬತ್ತು ತಿಂಗಳು ರಕ್ತವನ್ನು ಹಾಲನ್ನಾಗಿ ಉಣಿಸಿ ಸಾಕಿ ಸಲುಹುತ್ತಾಳೆ. ತನ್ನ ಮಡಿಲಲ್ಲಿ ಜನಿಸಿದ ಮಗ ವೃದಾಪ್ಯದಲ್ಲಿ ತನಗೆ ಆಸರೆಯಾಗುತ್ತಾನೆ ಅಂತಾ ಕನಸು ಕಟ್ಟಿಕೊಳ್ಳುತ್ತಾಳೆ. ಆದ್ರೆ ಇಲ್ಲೊಬ್ಬ ಪಾಪಿ ಮಗನಿಗೆ ಹೆತ್ತವ್ವನಿಗಿಂತ ಆಸ್ತಿ ದೊಡ್ಡಾಗಿದೆ.

78 ವರ್ಷದ ವೃದ್ಧ ತಾಯಿ ಮೇಲೆ ಮಗನೇ ಮನಸೋಇಚ್ಛೆ ಹೊಡೆದು ಮನೆಯಿಂದ ಆಚೆ ಹಾಕಿರುವ ಘಟನೆ ರಾಯಬಾಗ ತಾಲೂಕಿನ ಮಾಡಲಗಿ ಗ್ರಾಮದಲ್ಲಿ ನಡೆದಿದೆ.

ವೃದ್ಧ ತಾಯಿ ಸತ್ಯವ್ವಾ ಖಾಂಡೇಕರ ಎಂಬಾಕೆಗೆ ಬರುವ ಸರಕಾರದ ಗೃಹಲಕ್ಷ್ಮೀ, ವೃದ್ಯಾಪ ವೇತನ ಕಸಿದುಕೊಂಡ ಮಗ, ತಾಯಿಗೆ‌ ಮನಬಂದತೆ ಥಳಿಸಿದ್ದಾನೆ ಎಂದು ತಾಯಿ ಆರೋಪಿಸಿದ್ದಾಳೆ.

ಇದೀಗ ಗಾಯಗೊಂಡಿರುವ ತಾಯಿ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಒಡೆಯರ ತೋಟದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಮಗನ ಹೊಡೆತಕ್ಕೆ ಕಣ್ಣೀರು ಹಾಕುತ್ತಾ ಕರಳ ಕುಡಿಯ ಕ್ರೌರ್ಯಕ್ಕೆ ಹೆತ್ತಮ್ಮ ನಲುಗಿ ಹೋಗಿದ್ದಾಳೆ.