SK Home Ad
Home ಸುದ್ದಿ ದೇಶ ಪತಿ ಧರ್ಮೇಂದ್ರ ಪರವಾಗಿ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಹೇಮಾ ಮಾಲಿನಿ

ಪತಿ ಧರ್ಮೇಂದ್ರ ಪರವಾಗಿ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಹೇಮಾ ಮಾಲಿನಿ

0
107

ನವದೆಹಲಿ: ಬಾಲಿವುಡ್ ನಟ ದಿವಂಗತ ಧರ್ಮೇಂದ್ರ ಅವರಿಗೆ ದೇಶದ ಎರಡನೇ ಅತ್ಯುನ್ನತ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿ ಸ್ವೀಕರಿಸಿದರು.

ದೆಹಲಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಹೇಮಾ ಮಾಲಿನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸಿನಿಮಾ ಕ್ಷೇತ್ರಕ್ಕೆ ಧರ್ಮೇಂದ್ರ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರಕಾರ 2026ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ಘೋಷಿಸಿತ್ತು.

1935 ಡಿಸೆಂಬರ್‌ 8ರಂದು ಜನಿಸಿದ ಅವರು ಸುಮಾರು 65 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. 2025ರ ನವೆಂಬರ್ 24 ರಂದು ನಿಧನರಾದರು.