SK Home Ad
Home ನಮ್ಮ ಜಿಲ್ಲೆ ಬೆಂಗಳೂರು ರುಕ್ಮಿಣಿ ವಸಂತ್‌ರಿಂದ ಅವಂತ್ರದ ‘ದಿ ಗುಲಿಸ್ತಾನ್ ಎಡಿಟ್’ ಅನಾವರಣ

ರುಕ್ಮಿಣಿ ವಸಂತ್‌ರಿಂದ ಅವಂತ್ರದ ‘ದಿ ಗುಲಿಸ್ತಾನ್ ಎಡಿಟ್’ ಅನಾವರಣ

0
80

ಬೆಂಗಳೂರು: ಸಾಂಪ್ರದಾಯಿಕ ಉಡುಪುಗಳು ಹಾಗೂ ಸೀರೆಗಳ ವೈವಿಧ್ಯಕ್ಕೆ ಭಾರತದಲ್ಲಿ ಮನೆಮಾತಾಗಿರುವ ‘ಅವಂತ್ರ’ (Avantra), ಈ ವರ್ಷದ ಬಹುನಿರೀಕ್ಷಿತ “ದಿ ಗುಲಿಸ್ತಾನ್ ಎಡಿಟ್” (The Gulistan Edit) ಸಂಗ್ರಹವನ್ನು ಅನಾವರಣಗೊಳಿಸಿದೆ. ಕವಿತೆಯನ್ನೇ ಉಸಿರಾಗಿಸಿಕೊಂಡ ಬಟ್ಟೆಗಳ ಸಂಗ್ರಹದಂತೆ ಭಾಸವಾಗುವ ಈ ಕಲೆಕ್ಷನ್, ತನ್ನ ಪ್ರತಿ ನೆರಿಗೆಯಲ್ಲೂ ರಾಜಮನೆತನದ ಉದ್ಯಾನಗಳ ವೈಭವವನ್ನು ನೆನಪಿಸುತ್ತದೆ.

ಬೆಂಗಳೂರಿನ ಫಿನಿಕ್ಸ್ ಮಾರ್ಕೆಟ್‌ಸಿಟಿಯಲ್ಲಿ ಇರುವ ಅವಂತ್ರ ಮಳಿಗೆಯಲ್ಲಿ ಶನಿವಾರ ಆಯೋಜಿಸಿದ ಈ ಅಪೂರ್ವ ಕಾರ್ಯಕ್ರಮದಲ್ಲಿ ಫ್ಯಾಷನ್, ಪರಂಪರೆ ಹಾಗೂ ಕಲೆಯ ಮಹಾಸಂಗಮಕ್ಕೆ ಸಾಕ್ಷಿಯಾಯಿತು. ಅವಂತ್ರ ಬ್ರ್ಯಾಂಡ್ ರಾಯಭಾರಿ ಹಾಗೂ ಜನಪ್ರಿಯ ನಟಿ ರುಕ್ಮಿಣಿ ವಸಂತ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಈ ನೂತನ ಶ್ರೇಣಿಯನ್ನು ಅನಾವರಣಗೊಳಿಸಿದರು.

ಅರಮನೆಯ ಗೋಡೆಗಳ ಮೇಲಿನ ಸೂಕ್ಷ್ಮ ಚಿತ್ತಾರ ಹಾಗೂ ಅಚ್ಚಳಿಯದ ನೆನಪುಗಳನ್ನು ನೀಡುವ ಅರಮನೆ ಉದ್ಯಾನಗಳಿಂದ ಪ್ರೇರಿತರಾಗಿ ಈ ‘ಗುಲಿಸ್ತಾನ್ ಎಡಿಟ್’ ಅನ್ನು ರೂಪಿಸಲಾಗಿದೆ. ಇವು ಕೇವಲ ಚಂದ ಕಾಣುವ ಅಲಂಕಾರಿಕ ಉಡುಪುಗಳಷ್ಟೇ ಅಲ್ಲ, ಬದಲಿಗೆ ಸೌಹಾರ್ದ, ಬಾಂಧವ್ಯ ಹಾಗೂ ಕಲೆಯ ಅದ್ಭುತ ಮಿಶ್ರಣವಾಗಿವೆ. ಸುಂದರವಾಗಿ ಅರಳಿ ನಿಂತ ಹೂವುಗಳು, ತಂಪಾದ ಗಾಳಿ ಮತ್ತು ಸುಂದರವಾದ ಕಿಟಕಿ ಆಕಾರದ ಜಾಲಿ ವಿನ್ಯಾಸಗಳಿಂದ ಸ್ಫೂರ್ತಿ ಪಡೆದು ಇದನ್ನು ಸಿದ್ಧಪಡಿಸಲಾಗಿದೆ. ಕವಿಗಳು ತಮ್ಮ ಕವಿತೆಗಳಲ್ಲಿ, ರಾಜ-ಮಹಾರಾಜರು ತಮ್ಮ ವೈಭವದಲ್ಲಿ ಹಾಗೂ ಕಲಾವಿದರು ಶಿಲೆ-ಮಾರ್ಬಲ್‌ಗಳ ಕುಸುರಿ ಕಡತಗಳಲ್ಲಿ ಶಾಶ್ವತಗೊಳಿಸಿದ ಇತಿಹಾಸವೇ ಈ ಉಡುಪುಗಳಲ್ಲಿ ಮತ್ತೆ ಜೀವ ಪಡೆದಿದೆ.

ಭವ್ಯ ಇತಿಹಾಸದ ಭಾಗವಾಗಿ ಇರುವ ಈ ಸೀರೆಗಳ ನೆರಿಗೆಗಳನ್ನು ಆನಂದಿಸಲು ಅವಂತ್ರ ಎಲ್ಲರನ್ನೂ ಆಹ್ವಾನಿಸುತ್ತದೆ. ರೇಷ್ಮೆ, ಕೈಮಗ್ಗದ ನೇಯ್ಗೆ ಸೇರಿದಂತೆ ಎಲ್ಲ ರೀತಿಯ ವೈವಿಧ್ಯ ಒಳಗೊಂಡಿರುವ ‘ಗುಲಿಸ್ತಾನ್ ಎಡಿಟ್’, ಸಾಂಪ್ರದಾಯಿಕ ದಿರಿಸುಗಳ ಬೃಹತ್ ಶ್ರೇಣಿಯನ್ನೇ ಗ್ರಾಹಕರ ಮುಂದೆ ತೆರೆದಿಡುತ್ತದೆ. ಇದು ಸಾಂಪ್ರದಾಯಿಕತೆಯ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಬಯಸುವ ಮಹಿಳೆಯರಲ್ಲಿ ತಾವೂ ಇತಿಹಾಸದ ಒಂದು ಭಾಗ ಎಂಬ ಹೆಮ್ಮೆಯ ಭಾವನೆಯನ್ನು ಮೂಡಿಸುತ್ತದೆ.

ಅವಂತ್ರ ಬ್ರ್ಯಾಂಡ್ ಅಂಬಾಸಡರ್ ರುಕ್ಮಿಣಿ ವಸಂತ್ ಮಾತನಾಡಿ, “ಭಾರತೀಯ ಸಾಂಪ್ರದಾಯಿಕ ಉಡುಪುಗಳು ಯಾವಾಗಲೂ ನನಗೆ ಅತ್ಯಂತ ವೈಯಕ್ತಿಕ ಮತ್ತು ಆಪ್ತವಾದ ಭಾವನೆಯನ್ನು ನೀಡುತ್ತವೆ — ಅವು ನಮ್ಮ ಗುರುತು, ಸಂಸ್ಕೃತಿ ಮತ್ತು ಒಂದು ರೀತಿಯ ಆತ್ಮವಿಶ್ವಾಸವನ್ನು ಹೊಂದಿರುತ್ತವೆ. ಅವಂತ್ರ ಬ್ರ್ಯಾಂಡ್ ಸಂಪ್ರದಾಯವನ್ನು ವೈಯಕ್ತಿಕತೆಗೆ ತಕ್ಕಂತೆ ಎಷ್ಟು ಸುಂದರವಾಗಿ ಸಮ್ಮಿಶ್ರಣಗೊಳಿಸುತ್ತದೆ ಎಂಬುದು ನನಗೆ ತುಂಬಾ ಇಷ್ಟ. ‘ದಿ ಗುಲಿಸ್ತಾನ್ ಎಡಿಟ್’ ಸಂಗ್ರಹದಲ್ಲಿನ ಸೂಕ್ಷ್ಮವಾದ ಹೂವಿನ ವಿನ್ಯಾಸಗಳು, ಜಾಲರಿಯಂತಹ ಸಂಕೀರ್ಣ ಕೆತ್ತನೆಯಿಂದ ಪ್ರೇರಿತವಾದ ವಿವರಗಳು ಮತ್ತು ಪ್ರತಿ ಉಡುಪಿನಲ್ಲೂ ಅಡಕವಾದ ಆಲೋಚನಾ ಲಹರಿ ನನ್ನನ್ನು ತಕ್ಷಣವೇ ಆಕರ್ಷಿಸಿದವು. ಇದು ಸಾರ್ವಕಾಲಿಕವಾಗಿಯೂ, ಅದೇ ಸಮಯಕ್ಕೆ ಅತ್ಯುತ್ತಮ ಅಭಿವ್ಯಕ್ತಿಯಾಗಿಯೂ ಭಾಸವಾಗುತ್ತದೆ. ನನ್ನ ಪಾಲಿಗೆ ಫ್ಯಾಷನ್ ಎಂದರೆ ಯಾವಾಗಲೂ ನಿಮ್ಮ ಅತ್ಯಂತ ನೈಜವಾಗಿ ನೀವು ಕಾಣುವುದಾಗಿದೆ, ಮತ್ತು ಅವಂತ್ರ ಬ್ರ್ಯಾಂಡ್ ಆ ಮನೋಭಾವವನ್ನು ನಿಜವಾಗಿಯೂ ಆನಂದಿಸುತ್ತದೆ. ಪ್ರತಿ ಮಹಿಳೆಯೂ ತನ್ನದೇ ಆದ ಕಥೆಯನ್ನು ಆತ್ಮವಿಶ್ವಾಸ ಮತ್ತು ಘನತೆಯಿಂದ ಸ್ವೀಕರಿಸಲು ಪ್ರೋತ್ಸಾಹಿಸುವ ಇಂತಹ ಬ್ರ್ಯಾಂಡ್‌ನೊಂದಿಗೆ ಗುರುತಿಸಿಕೊಳ್ಳಲು ನನಗೆ ತುಂಬ ಸಂತೋಷವಿದೆ.”

ಅವಂತ್ರ ಸಂಸ್ಥೆಯ ವಕ್ತಾರರು ಮಾತನಾಡಿ, “ಭಾರತದಲ್ಲಿ ಇಂದಿಗೂ ಜೀವಂತವಾಗಿರುವ ಅದ್ಭುತ ನೇಯ್ಗೆ ಕಲೆಗೆ ಈ ‘ಗುಲಿಸ್ತಾನ್ ಎಡಿಟ್’ ನಮ್ಮ ಕೃತಜ್ಞತಾ ಪ್ರೇಮಪತ್ರದಂತಿದೆ. ನಮ್ಮ ಉಡುಪುಗಳು ಕೇವಲ ಒಂದು ವಿಶೇಷ ಸಂದರ್ಭಕ್ಕೆ ಧರಿಸುವ ಬಟ್ಟೆಯಾಗಷ್ಟೇ ಉಳಿಯಬಾರದು, ಬದಲಿಗೆ ಹೆಣ್ಣುಮಕ್ಕಳಲ್ಲಿ ಒಳಗಿನಿಂದಲೇ ಒಂದು ಪಾಸಿಟಿವ್ ಬದಲಾವಣೆಯ ಭಾವನೆಯನ್ನು ತರಬೇಕು. ಅತ್ಯಂತ ಪುರಾತನ ಎನಿಸುವ ಕಲೆಯು ಆಧುನಿಕ ಶೈಲಿಯಲ್ಲಿ ತನ್ನದೇ ಎನಿಸುವ ರೀತಿ ಮೂಡಿಬರಬೇಕು. ಇದನ್ನೇ ಅವಂತ್ರ ತನ್ನ ‘ಮೈ ವೇ’ (My Way) ಪರಿಕಲ್ಪನೆಯಲ್ಲಿ ನಂಬುತ್ತದೆ,” ಎಂದರು.

ಭಾರತದ ಅತ್ಯುತ್ತಮ ಸೀರೆಗಳು ಮತ್ತು ಸಾಂಪ್ರದಾಯಿಕ ಉಡುಪುಗಳ ಮಳಿಗೆ. ಅವಂತ್ರ ಎಂಬುದು ಭಾರತದ ಸಾಂಪ್ರದಾಯಿಕ ಸೌಂದರ್ಯದ ಸಂಭ್ರಮಾಚರಣೆಯಾಗಿದೆ — ಇದು ದೇಶದ ಅತ್ಯುನ್ನತ ಸೀರೆಗಳು ಮತ್ತು ಸಾಂಪ್ರದಾಯಿಕ ಉಡುಪುಗಳನ್ನು ಒಂದೇ ಸೂರಿನಡಿ ತರುವ ಒಂದು ಹೆಮ್ಮೆಯ ತಾಣ. ದೇಶದ ಮೂಲೆ ಮೂಲೆಗಳ ಸಂಪ್ರದಾಯ, ಕುಶಲತೆ ಮತ್ತು ಫ್ಯಾಷನ್‌ನ ಸಮ್ಮಿಲನವಾಗಿರುವ ಅವಂತ್ರ, 50ಕ್ಕೂ ಹೆಚ್ಚು ವೈವಿಧ್ಯಮಯ ಜವಳಿ ಕಲೆಗಳು ಮತ್ತು ಸಾಂಪ್ರದಾಯಿಕ ಉಡುಪುಗಳ ಬ್ರ್ಯಾಂಡ್‌ಗಳ ವರ್ಣರಂಜಿತ ಸಂಗ್ರಹವನ್ನು ಹೊಂದಿದೆ. ಅತ್ಯುತ್ತಮ ಗುಣಮಟ್ಟ, ಟ್ರೆಂಡ್‌ಗೆ ತಕ್ಕಂತೆ ಆಯ್ದ ವಿನ್ಯಾಸಗಳು ಮತ್ತು ನ್ಯಾಯಯುತ ಬೆಲೆಗೆ ಇದು ಬದ್ಧವಾಗಿದೆ.

ಅವಂತ್ರ ಬ್ರ್ಯಾಂಡ್ ಮತ್ತಷ್ಟು ವಿಶೇಷ ಎನಿಸುವುದು ಇಲ್ಲಿನ ‘ಹೈಬ್ರಿಡ್ ಶಾಪಿಂಗ್ ಅನುಭವ’ದಿಂದ. ಇದು ಆಧುನಿಕ ರೀಟೇಲ್ ವೈಖರಿ ಮತ್ತು ವೈಯಕ್ತಿಕಗೊಳಿಸಿದ ಸಹಾಯಕ ಖರೀದಿ ಪ್ರಕ್ರಿಯೆಯ ಒಂದು ಅಪೂರ್ವ ಸಮ್ಮಿಶ್ರಣವಾಗಿದ್ದು, ಸಾಂಪ್ರದಾಯಿಕ ಮಳಿಗೆಗಳಿಗಿಂತ ಇದು ಸಂಪೂರ್ಣ ವಿಭಿನ್ನವಾಗಿದೆ. ಅವಂತ್ರ ಮಳಿಗೆಗೆ ನೀಡುವ ಪ್ರತಿ ಭೇಟಿಯೂ ಭಾರತದ ನೇಯ್ಗೆ ಸಂಪ್ರದಾಯಗಳ ಮೂಲಕ ಸಾಗುವ ಒಂದು ಸುಂದರ ಪ್ರಯಾಣದಂತಿದೆ. ಇಲ್ಲಿನ ಪರಿಣತ ಸೀರೆ ಉಡಿಸುವವರು ಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಪ್ರತಿ ತಿಂಗಳು ಬರುವ ಹೊಸ ವಿನ್ಯಾಸಗಳು ಆಯ್ಕೆ- ಸ್ಟೈಲ್ ಅನ್ನು ಹೆಚ್ಚಿಸುತ್ತವೆ. ಸೀರೆಗಳು ಮತ್ತು ಕುರ್ತಾಗಳಿಂದ ಹಿಡಿದು ಆಕ್ಸೆಸರಿಗಳು ಹಾಗೂ ಬ್ಲೌಸ್ ಕಸ್ಟಮೈಸೇಷನ್‌ವರೆಗೆ, ಅವಂತ್ರ ಸಂಪೂರ್ಣ ವಾರ್ಡ್‌ರೋಬ್ ಅನುಭವವನ್ನು ನೀಡುತ್ತದೆ. ಇದರೊಂದಿಗೆ ಸೀರೆ-ಫಿನಿಷಿಂಗ್ ಮತ್ತು ಇನ್-ಸ್ಟೋರ್ ಸ್ಟೈಲಿಂಗ್ ನೆರವಿನಂತಹ ಅತ್ಯುತ್ತಮ ಸೇವೆಗಳ ಸಂಪೂರ್ಣ ಬೆಂಬಲವೂ ಇಲ್ಲಿ ಸಿಗುತ್ತದೆ.