Home Advertisement
Home ಕ್ರೀಡೆ ದಳಪತಿ ವಿಜಯ್ ಕೈ ಸೇರಿದ ಕಿಂಗ್ ಕೊಹ್ಲಿ ಬ್ಯಾಟ್: ಸೋಶಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್!

ದಳಪತಿ ವಿಜಯ್ ಕೈ ಸೇರಿದ ಕಿಂಗ್ ಕೊಹ್ಲಿ ಬ್ಯಾಟ್: ಸೋಶಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್!

0
27

ಚೆನ್ನೈ: ಸಿನಿ ಜಗತ್ತಿನಿಂದ ಖ್ಯಾತಿ ಗಳಿಸಿ, ನಂತರ ರಾಜಕೀಯದಲ್ಲೂ ಮಿಂಚುತ್ತಿರುವ ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್, ಭಾರತದ ಮುಂಚೂಣಿಯ ಟೈರ್ ತಯಾರಿಕಾ ಸಂಸ್ಥೆಯಾದ ಎಂಆರ್‌ಎಫ್ (MRF) ನಿಯೋಗವು ಸೌಜನ್ಯಯುತವಾಗಿ ಭೇಟಿ ಮಾಡಿದೆ. ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯಲ್ಲಿ ನಡೆದ ಈ ವಿಶೇಷ ಭೇಟಿಯ ಸಂದರ್ಭದಲ್ಲಿ, ಸಂಸ್ಥೆಯ ಉನ್ನತ ಅಧಿಕಾರಿಗಳು ಸಿಎಂ ವಿಜಯ್‌ಗೆ ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸಹಿ ಮಾಡಿರುವ ಅಪರೂಪದ ಕ್ರಿಕೆಟ್ ಬ್ಯಾಟ್‌ನ್ನು ನೆನಪಿನ ಕಾಣಿಕೆಯಾಗಿ ನೀಡಿ ಗೌರವಿಸಿದ್ದಾರೆ.

ಈ ಮಹತ್ವದ ಸಭೆಯಲ್ಲಿ ತಮಿಳುನಾಡಿನಲ್ಲಿ ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸುವ ಹಾಗೂ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೈಜೋಡಿಸುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಹಾಗೂ ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುವ ಎಂಆರ್‌ಎಫ್ ಸಂಸ್ಥೆಗೆ ವಿರಾಟ್ ಕೊಹ್ಲಿ ದೀರ್ಘಕಾಲದಿಂದ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಹಸ್ತಾಕ್ಷರವಿರುವ ಬ್ಯಾಟ್‌ನ್ನು ಸಿಎಂಗೆ ಉಡುಗೊರೆಯಾಗಿ ನೀಡಲಾಗಿದೆ.

ಹಾಗೇ.. ಪ್ರಮುಖ ಕ್ರೀಡಾ ವಿಶ್ಲೇಷಕ ಮುಫದ್ದಲ್ ವೋಹ್ರಾ ಈ ಭೇಟಿಯ ಕುರಿತು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದಳಪತಿ ವಿಜಯ್ ಎಂಆರ್‌ಎಫ್ ತಂಡದಿಂದ ಬ್ಯಾಟ್ ಸ್ವೀಕರಿಸುತ್ತಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಅಷ್ಟೇ ಅಲ್ಲದೆ.. ಸಿನಿಮಾ, ರಾಜಕೀಯ ಹಾಗೂ ಕ್ರಿಕೆಟ್ ಲೋಕದ ಈ ಅಪರೂಪದ ಸಮ್ಮಿಲನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಜಯ್ ಮತ್ತು ವಿರಾಟ್ ಕೊಹ್ಲಿ ಇಬ್ಬರ ಅಭಿಮಾನಿಗಳು ಜಂಟಿಯಾಗಿ ಈ ಕ್ಷಣವನ್ನು ಸಂಭ್ರಮಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಹಾಗೂ ಕಮೆಂಟ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.