Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಅಂಚೆ ಮತ ಎಣಿಕೆ ವಿವಾದ: ಜೀವರಾಜ್ ಸೇರಿ ಮೂವರ ವಿರುದ್ಧ FIR

ಅಂಚೆ ಮತ ಎಣಿಕೆ ವಿವಾದ: ಜೀವರಾಜ್ ಸೇರಿ ಮೂವರ ವಿರುದ್ಧ FIR

0
154
ಸಾಂದರ್ಭಿಕ ಚಿತ್ರ

ಸ್ಟ್ರಾಂಗ್ ರೂಂ ಸೀಲ್ ಉಲ್ಲಂಘನೆ, ಮತಪತ್ರ ಟ್ಯಾಂಪರಿಂಗ್ ಆರೋಪ; ಪೊಲೀಸರು ತನಿಖೆ ಆರಂಭ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರಿನ ಅನ್ವಯ, ಡಿ.ಎನ್. ಜೀವರಾಜ್ (ಬಿಜೆಪಿ ಅಭ್ಯರ್ಥಿ), ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ ಮತ್ತು ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರನ್ನು ಕ್ರಮವಾಗಿ A1, A2 ಮತ್ತು A3 ಆರೋಪಿಗಳಾಗಿ ಗುರುತಿಸಲಾಗಿದೆ.

ಅಂಚೆ ಮತ ಎಣಿಕೆ ಟೇಬಲ್ ಏಜೆಂಟ್ ಆಗಿದ್ದ ಸುಧೀರ್ ಕುಮಾರ್ ಮುರೋಳಿ ನೀಡಿದ ದೂರಿನಲ್ಲಿ, ಮತಪತ್ರಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಂ ಸರಿಯಾಗಿ ಸೀಲ್ ಮಾಡಲಾಗಿರಲಿಲ್ಲ ಹಾಗೂ ಟ್ರಂಕ್‌ಗಳ ಲಾಕ್ ಕತ್ತರಿಸಲಾಗಿತ್ತು ಎಂದು ಗಂಭೀರ ಆರೋಪ ಮಾಡಲಾಗಿದೆ. ಇದರಿಂದ ಮತಪತ್ರಗಳೊಂದಿಗೆ ಹಸ್ತಕ್ಷೇಪ (ಟ್ಯಾಂಪರಿಂಗ್) ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ವಂಚನೆ, ಕ್ರಿಮಿನಲ್ ಪಿತೂರಿ ಹಾಗೂ ಕೃತಕ ದಾಖಲೆ ಸೃಷ್ಟಿ (ಫೋರ್ಜರಿ) ಸೇರಿದಂತೆ ಹಲವು ಕಲಂಗಳನ್ನು ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣವು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದ್ದು, ಮುಂದಿನ ತನಿಖೆ ಪ್ರಮುಖವಾಗಲಿದೆ.

ಪೊಲೀಸರು ಸಂಬಂಧಿತ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಅಗತ್ಯವಿದ್ದಲ್ಲಿ ಆರೋಪಿಗಳನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಈ ಪ್ರಕರಣದ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿವೆ.