Home Advertisement
Home ನಮ್ಮ ಜಿಲ್ಲೆ ಹಾವೇರಿ ಹಾವೇರಿ: ಎಂಗೇಜ್‌ಮೆಂಟ್ ಮುನ್ನವೇ ರಾತ್ರೋರಾತ್ರಿ ಅನ್ಯಕೋಮಿನ ಯುವಕನೊಂದಿಗೆ ಯುವತಿ ಎಸ್ಕೇಪ್; ‌ʻಲವ್‌ ಜೀಹಾದ್‌ʼ ಶೆಂಕೆ

ಹಾವೇರಿ: ಎಂಗೇಜ್‌ಮೆಂಟ್ ಮುನ್ನವೇ ರಾತ್ರೋರಾತ್ರಿ ಅನ್ಯಕೋಮಿನ ಯುವಕನೊಂದಿಗೆ ಯುವತಿ ಎಸ್ಕೇಪ್; ‌ʻಲವ್‌ ಜೀಹಾದ್‌ʼ ಶೆಂಕೆ

0
38

ಹಾವೇರಿ: ಮನೆಯಲ್ಲಿ ಮಗಳ ನಿಶ್ಚಿತಾರ್ಥದ ಸಂಭ್ರಮ ಮನೆಮಾಡಿತ್ತು. ಇನ್ನೇನು ಕೆಲವೇ ಗಂಟೆಗಳಲ್ಲಿ ಅದ್ದೂರಿಯಾಗಿ ಎಂಗೇಜ್‌ಮೆಂಟ್ ನಡೆಯಬೇಕಿತ್ತು. ಆದ್ರೆ ರಾತ್ರೋರಾತ್ರಿ ಮನೆಯ ಹಿಂಬದಿ ಬಾಗಿಲಿನಿಂದ ಮಗಳು ನಾಪತ್ತೆಯಾಗುವ ಮೂಲಕ ಇಡೀ ಕುಟುಂಬಕ್ಕೆ ಬಹುದೊಡ್ಡ ಆಘಾತ ನೀಡಿದ್ದಾಳೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಡೆದಿರುವ ಈ ಘಟನೆ ಇದೀಗ ‘ಲವ್ ಜಿಹಾದ್’ ವಿವಾದಕ್ಕೆ ಕಾರಣವಾಗಿದೆ.

ಮದುವೆ ಫಿಕ್ಸ್ ಆದ ಬೆನ್ನಲ್ಲೇ ಕಳ್ಳಾಟ: ಶಂಕ್ರಿಕೊಪ್ಪದ 24 ವರ್ಷದ ಬಿ.ಕಾಂ ಪದವೀಧರೆ ಶಂಕ್ರಮ್ಮ ನಾಪತ್ತೆಯಾದ ಯುವತಿ. ಏಪ್ರಿಲ್ 26ರಂದು ಈಕೆಗೆ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ, ಮೇ 11ಕ್ಕೆ ಮದುವೆ ಮುಹೂರ್ತವೂ ನಿಗದಿಯಾಗಿತ್ತು. ವಿಶೇಷವೆಂದರೆ, ನಿಶ್ಚಿತಾರ್ಥದ ಹಿಂದಿನ ದಿನ ರಾತ್ರಿ ತನಗೆ ನಿಶ್ಚಯವಾಗಿದ್ದ ಭಾವಿ ಪತಿಯೊಂದಿಗೆ ಫೋನ್‌ನಲ್ಲಿ ಖುಷಿಖುಷಿಯಾಗಿ ಮಾತನಾಡಿದ್ದ ಶಂಕ್ರಮ್ಮ, ಮನೆಯವರು ನಿದ್ದೆಗೆ ಜಾರುತ್ತಿದ್ದಂತೆ ತಡರಾತ್ರಿ ಅನ್ಯಕೋಮಿನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.

ಪರಿಚಯ ಪ್ರೀತಿಗೆ ತಿರುಗಿದ್ದು ಹೇಗೆ?:ಶಂಕ್ರಮ್ಮ ಪ್ರತಿದಿನ ಅಕ್ಕಿಆಲೂರಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಈ ವೇಳೆ ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬ ಮುಸ್ಲಿಂ ಯುವಕನ ಪರಿಚಯವಾಗಿದೆ. ಅದೇ ಸ್ನೇಹ ಪ್ರೀತಿಗೆ ತಿರುಗಿದ್ದು, ಮದುವೆ ನಿಶ್ಚಯವಾದ ಬೆನ್ನಲ್ಲೇ ಆಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ಯುವತಿಯ ಪೋಷಕರು ಅಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ನನ್ನ ಮಗಳನ್ನು ಹೇಗಾದರೂ ಮಾಡಿ ವಾಪಸ್ ಕರೆತನ್ನಿ” ಎಂದು ಠಾಣೆ ಮುಂದೆ ಆಕೆಯ ತಾಯಿ ಕಣ್ಣೀರಿಡುತ್ತಿರುವ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಇತ್ತೀಚೆಗೆ ಸಮಾಜದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆತ್ತವರ ಮರ್ಯಾದೆ ಬೀದೀಪಾಲಾಗುತ್ತಿದೆ.

ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳು: ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡಿರುವ ಹಿಂದೂಪರ ಸಂಘಟನೆಗಳು, ಇದೊಂದು ವ್ಯವಸ್ಥಿತ ‘ಲವ್ ಜಿಹಾದ್’ ಜಾಲ ಎಂದು ಆರೋಪಿಸಿವೆ. ಉದ್ದೇಶಪೂರ್ವಕವಾಗಿಯೇ ಮದುವೆಗೆ ಮುನ್ನ ಯುವತಿಯನ್ನು ಬ್ರೈನ್ ವಾಶ್ ಮಾಡಿ ಕರೆದೊಯ್ಯಲಾಗಿದೆ. ಪರಿಸ್ಥಿತಿ ಕೈಮೀರುವ ಮುನ್ನ ಪೊಲೀಸರು ತಕ್ಷಣವೇ ಯುವತಿಯನ್ನು ಪತ್ತೆಹಚ್ಚಿ ಕುಟುಂಬಕ್ಕೆ ಒಪ್ಪಿಸಬೇಕು ಹಾಗೂ ಆರೋಪಿ ಇಬ್ರಾಹಿಂ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಜೋಡಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.