Home Advertisement
Home ಸುದ್ದಿ ವಿದೇಶ ಶ್ವೇತಭವನದ ವರದಿಗಾರರ ಭೋಜನಕೂಟಕ್ಕೂ ಮುನ್ನ ವಿವಾದದ ಕಿಡಿ: ಹೋಟೆಲ್ ಗೋಡೆಯ ಮೇಲೆ ಟ್ರಂಪ್-ಎಪ್ಸ್ಟೀನ್ ವಿಡಿಯೋ ಪ್ರದರ್ಶನ!

ಶ್ವೇತಭವನದ ವರದಿಗಾರರ ಭೋಜನಕೂಟಕ್ಕೂ ಮುನ್ನ ವಿವಾದದ ಕಿಡಿ: ಹೋಟೆಲ್ ಗೋಡೆಯ ಮೇಲೆ ಟ್ರಂಪ್-ಎಪ್ಸ್ಟೀನ್ ವಿಡಿಯೋ ಪ್ರದರ್ಶನ!

0
38

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಭೀತಿ ಹಾಗೂ ಜಾಗತಿಕ ಉದ್ವಿಗ್ನತೆಗಳ ನಡುವೆಯೇ, ಅಮೆರಿಕದ ರಾಜಧಾನಿಯಲ್ಲಿ ಹಳೆಯ ವಿವಾದವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಪ್ರತಿಷ್ಠಿತ ‘ಶ್ವೇತಭವನದ ವರದಿಗಾರರ ಸಂಘದ ಭೋಜನಕೂಟ’ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು, ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನ ಹೊರಭಾಗದ ಗೋಡೆಯ ಮೇಲೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ವಿಡಿಯೋವನ್ನು ಪ್ರಕ್ಷೇಪಿಸುವ ಮೂಲಕ ಪ್ರತಿಭಟನೆ ನಡೆಸಲಾಗಿದೆ.

ಇದು ಪ್ರತಿ ವರ್ಷ ನಡೆಯುವ ಶ್ವೇತಭವನದ ವರದಿಗಾರರ ಭೋಜನಕೂಟವು ಅಮೆರಿಕದ ಪ್ರಮುಖ ಪತ್ರಕರ್ತರು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳನ್ನು ಒಂದುಗೂಡಿಸುವ ಹೈ-ಪ್ರೊಫೈಲ್ ಕಾರ್ಯಕ್ರಮವಾಗಿದೆ. ಈ ಬಾರಿ ಕಾರ್ಯಕ್ರಮ ಆರಂಭವಾಗುವ ಮುನ್ನವೇ ಪ್ರತಿಭಟನಾಕಾರರ ಗುಂಪೊಂದು ವಿನೂತನ ತಂತ್ರದ ಮೂಲಕ ಜನರ ಗಮನ ಸೆಳೆಯಿತು. ಹೋಟೆಲ್ ಕಟ್ಟಡದ ಬೃಹತ್ ಗೋಡೆಯ ಮೇಲೆ ಟ್ರಂಪ್ ಮತ್ತು ಎಪ್ಸ್ಟೀನ್ ಒಟ್ಟಿಗೆ ಇರುವ ಹಳೆಯ ಫೋಟೋಗಳು ಹಾಗೂ ‘ಎಪ್ಸ್ಟೀನ್ ಫೈಲ್ಸ್’ ಎಂದು ಕರೆಯಲ್ಪಡುವ ವಿವಾದಾತ್ಮಕ ದಾಖಲೆಗಳ ತುಣುಕುಗಳನ್ನು ಪ್ರದರ್ಶಿಸಲಾಯಿತು.

ವಿಡಿಯೋದಲ್ಲಿ ಏನಿದೆ?: ಈ ಪ್ರಕ್ಷೇಪಣದಲ್ಲಿ ಕೇವಲ ದೃಶ್ಯಗಳಲ್ಲದೆ, ಕೆಲವು ಪ್ರಮುಖ ಆಡಿಯೋ ಅಂಶಗಳನ್ನು ಬಳಸಲಾಗಿತ್ತು. ವಿಶೇಷವಾಗಿ, ಟ್ರಂಪ್ ಮತ್ತು ಎಪ್ಸ್ಟೀನ್ ನಡುವಿನ ಹಳೆಯ ಒಡನಾಟದ ಚಿತ್ರಗಳು ಸಹ ಇದರಲ್ಲಿ ಕಂಡು ಬಂದವು. ಹಾಗೇ ಎಪ್ಸ್ಟೀನ್‌ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಇಮೇಲ್‌ಗಳ ಉಲ್ಲೇಖಗಳು ಇದ್ದವು.
ಅಷ್ಟೇ ಅಲ್ಲದೇ.. ಎಪ್ಸ್ಟೀನ್ ಪ್ರಕರಣದ ತನಿಖಾ ದಾಖಲೆಗಳ ಪ್ರಮುಖ ಸಾಲುಗಳನ್ನು ಸಹ ಈ ವಿಡಿಯೋದಲ್ಲಿ ಸ್ಪಷ್ಟವಾಗಿದ್ದವು.

ಇದಾದ ನಂತರ, ಸಾರ್ವಜನಿಕ ಚರ್ಚೆಯನ್ನು ಮತ್ತೆ ಹುಟ್ಟುಹಾಕುವ ಉದ್ದೇಶದಿಂದ ಈ ಸಾಮಗ್ರಿಗಳನ್ನು ಪ್ರದರ್ಶಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಅತಿಥಿಗಳ ಗಮನವನ್ನು ಇದು ಸೆಳೆಯುವಲ್ಲಿ ಯಶಸ್ವಿಯಾಯಿತು.

ಟ್ರಂಪ್ ತೀಕ್ಷ್ಣ ಪ್ರತಿಕ್ರಿಯೆ: ತಮ್ಮ ಮೇಲಿನ ಈ ಆರೋಪಗಳನ್ನು ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಬಲವಾಗಿ ತಳ್ಳಿಹಾಕಿದ್ದಾರೆ. “ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ನಾನು ಸಂಪೂರ್ಣ ದೋಷಮುಕ್ತ” ಎಂದು ಹೇಳಿದ್ದಾರೆ. ತಮ್ಮ ಮತ್ತು ಎಪ್ಸ್ಟೀನ್ ನಡುವಿನ ಸಂಬಂಧದ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಸಹ “ಡೆಮಾಕ್ರಟಿಕ್ ವಂಚನೆ” ಎಂದು ಕರೆದಿದ್ದಾರೆ. ಅಧಿಕೃತ ದಾಖಲೆಗಳಲ್ಲಿ ತಮ್ಮನ್ನು ಯಾವುದೇ ಅಪರಾಧ ಚಟುವಟಿಕೆಗೆ ಸಂಪರ್ಕಿಸುವ ಪುರಾವೆಗಳಿಲ್ಲ ಎಂದು ಪರ ವಕೀಲರು ವಾದಿಸುತ್ತಿದ್ದಾರೆ.

ರಾಜಕೀಯ ಪರಿಣಾಮ: ಈ ಘಟನೆಯು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹೊತ್ತಿನಲ್ಲಿ ಮತ್ತೆ ವಿವಾದದ ಕಿಚ್ಚು ಹಚ್ಚಿದೆ. ಕೆಲವರು ಇದನ್ನು ಸಾರ್ವಜನಿಕ ಹೊಣೆಗಾರಿಕೆಯ ಭಾಗವೆಂದು ಬಣ್ಣಿಸಿದರೆ, ಇನ್ನು ಕೆಲವರು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದಾರೆ. ಒಟ್ಟಿನಲ್ಲಿ.. ಶ್ವೇತಭವನದ ಈ ಮಾಧ್ಯಮ ಭೋಜನಕೂಟವು ಕೇವಲ ಹಾಸ್ಯ ಮತ್ತು ಭಾಷಣಗಳಿಗೆ ಸೀಮಿತವಾಗದೆ, ವಿವಾದಾತ್ಮಕ ಪ್ರಕ್ಷೇಪಣದ ಮೂಲಕ ಜಾಗತಿಕ ಸುದ್ದಿಯಾಗಿದೆ.