Home Advertisement
Home ಕ್ರೀಡೆ ಸಚಿನ್‌ ಹುಟ್ಟುಹಬ್ಬಕ್ಕೆ ವಿಶ್ ಮಾಡಿ‌ ಕೇಕ್‌ ತಿನ್ನಲ್ಲ ಎಂದ ಅರ್ಜುನ್!

ಸಚಿನ್‌ ಹುಟ್ಟುಹಬ್ಬಕ್ಕೆ ವಿಶ್ ಮಾಡಿ‌ ಕೇಕ್‌ ತಿನ್ನಲ್ಲ ಎಂದ ಅರ್ಜುನ್!

0
98

‌ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರಿಗೆ ಇಂದು (ಏ. 24) 53ನೇ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿರುವ ಸಚಿನ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಸಚಿನ್‌ ಪುತ್ರ ಅರ್ಜುನ್‌ ಮಾತ್ರ ಪ್ರೀತಿಯ ತಂದೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ವಿಶ್‌ ಮಾಡಿದ್ದು, ವಿಡಿಯೋದಲ್ಲಿ ಅರ್ಜುನ್‌ ಹೇಳಿರುವ ಮಾತು ಎಲ್ಲರನ್ನೂ ಅಚ್ಚರಿ ಮೂಡಿಸಿದೆ.

ಐಪಿಎಲ್ 2026ರ ಪಂದ್ಯಗಳಿಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಜೊತೆಗಿರುವ ಅರ್ಜುನ್ “ಹ್ಯಾಪಿ ಬರ್ತ್‌ಡೇ ಅಪ್ಪಾ.. ಆದರೆ ನಾನು ಈ ಕೇಕ್ ತಿನ್ನುವುದಿಲ್ಲ, ಶೀಘ್ರದಲ್ಲೇ ಭೇಟಿಯಾಗೋಣ” ಎಂದು ಅರ್ಜುನ ವಿಡಿಯೋದಲ್ಲಿ ಹೇಳಿದ್ದಾರೆ.

ಡಯಟ್‌ನಲ್ಲಿರುವ ಅರ್ಜುನ್:‌ ಅರ್ಜುನ್ ತೆಂಡೂಲ್ಕರ್‌ ಸದ್ಯ ಡಯಟ್‌ ಮಾಡುತ್ತಿರುವ ಕಾರಣ ಸಕ್ಕರೆ ಪದಾರ್ಥಗಳನ್ನು ತಿನ್ನುವುದಿಲ್ಲ. ಹೀಗಾಗಿ ಕೇಕ್‌ ಕೂಡ ತಿನ್ನಲ್ಲ ಎಂದು ಹೇಳಿದ್ದಾರೆ. ಅಲ್ಲದೇ ನಗುಮುಖದಿಂದಲೇ ತಂದೆಯನ್ನು ಶೀಘ್ರ ಭೇಟಿಯಾಗೋಣ ಎಂದಿರುವ ಅರ್ಜುನ್‌ಗೆ ಅವರ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.