Home Advertisement
Home ನಮ್ಮ ಜಿಲ್ಲೆ ಕೃತಕ ಕಾಲು, ಸುಟ್ಟ ಮುಖ; ಮೊಜ್ತಬಾ ಖಮೇನಿಗೆ ನಿಜಕ್ಕೂ ಏನಾಗಿದೆ?

ಕೃತಕ ಕಾಲು, ಸುಟ್ಟ ಮುಖ; ಮೊಜ್ತಬಾ ಖಮೇನಿಗೆ ನಿಜಕ್ಕೂ ಏನಾಗಿದೆ?

0
158

ಇರಾನ್ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಆರೋಗ್ಯದ ಕುರಿತಂತೆ ಬಿಗ್‌ ಅಪ್ಡೇಟ್‌ ಸಿಕ್ಕಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ಹೇಳಿವೆ.

ಅಮೆರಿಕ ಮತ್ತು ಇಸ್ರೇಲ್ ದೇಶಗಳು ನಡೆಸಿದ ದಾಳಿಯಿಂದಾಗಿ ಸಂಪೂರ್ಣ ತತ್ತರಿಸಿ ಹೋಗಿದ್ದ ಇರಾನ್‌ ಬಹಳಷ್ಟು ನಷ್ಟವನ್ನು ಅನುಭವಿಸಿದೆ. ಅಲ್ಲದೇ ಫೆಬ್ರವರಿ 28ರಂದು ನಡೆದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಅಷ್ಟೇ ಅಲ್ಲದೇ ಈ ದಾಳಿಯಲ್ಲಿ ಖಮೇನಿ ಕುಟುಂಬದ ಸದಸ್ಯರೂ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಬಿದಿದ್ದು.

ಇದಾದ ಕೆಲ ದಿನಗಳ ಬಳಿಕ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಇರಾನ್‌ನ ಹೊಸ ಸರ್ವೋಚ್ಚ ನಾಯಕರನ್ನಾಗಿ ಘೋಷಿಸಲಾಯಿತು. ಅಧಿಕಾರ ವಹಿಸಿಕೊಂಡ ಬಳಿಕ ಮೊಜ್ತಬಾ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅಲ್ಲದೇ ಅವರ ಬಗ್ಗೆ ಅನೇಕ ಉಹಾಪೋಹಗಳು ಹರಿದಾಡಿದವು. ಆದರೆ, ಸದ್ಯ ಅವರ ಆರೋಗ್ಯದ ಕುರಿತಂತೆ ದೊಡ್ಡ ಅಪ್ಡೇಟ್‌ ಹೊರ ಬಂದಿದೆ.

ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಖಮೇನಿ ಅವರ ಮುಖಕ್ಕೆ, ಕಾಲಿಗೆ ಗಂಭೀರ ಗಾಯವಾಗಿದ್ದು, ಕೃತಕ ಕಾಲು ಜೋಡಿಸಲಾಗಿದೆ. ಆದರೆ ತುಟಿಗಳು ಸುಟ್ಟಿರುವುದರಿಂದ ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ಅವರ ಸುತ್ತಲು ನುರಿತ ವೈದ್ಯರ ತಂಡವಿದ್ದು, ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

ಆರೋಗ್ಯದ ದುಃಸ್ಥಿತಿಯಿಂದಾಗಿ ಸಾರ್ವಜನಿಕವಾಗಿ ಖಮೇನಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಮಾನಸಿಕ ಸ್ಥತಿ ಉತ್ತಮವಾಗಿದ್ದು, ಬರವಣಿಗೆಯ ಮೂಲಕ ತಮ್ಮ ಸಂದೇಶವನ್ನು ನೀಡುತ್ತಿದ್ದಾರೆ. ಆದರೆ, ಆಡಳಿತ ನಡೆಸಲು ಕೂಡ ಮಧ್ಯವರ್ತಿಗಳ ಪಾತ್ರ ಅವಶ್ಯವಾಗಿದೆ. ಹೀಗಾಗಿ ಖಮೇನಿ ಅವರು ತಮ್ಮ ಪ್ರಾಥಮಿಕ ಅಧಿಕಾರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ಗೆ ವಹಿಸಿದ್ದಾರೆಂದು ಹೇಳಲಾಗಿದೆ.