Home Advertisement
Home ಕ್ರೀಡೆ IPL 2026: ಸಂಜು ಸ್ಯಾಮ್ಸನ್‌ ಶತಕ, ಮುಂಬೈಗೆ 208 ರನ್‌ ಗುರಿ

IPL 2026: ಸಂಜು ಸ್ಯಾಮ್ಸನ್‌ ಶತಕ, ಮುಂಬೈಗೆ 208 ರನ್‌ ಗುರಿ

0
51

ಮುಂಬೈ: ಸಂಜು ಸ್ಯಾಮ್ಸನ್‌ ಏಕಾಂಗಿ ಹೋರಾಟದ ಫಲವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಸವಾಲಿನ ಮೊತ್ತವನ್ನು ಕಲೆ ಹಾಕಿದೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿದ್ದ ಮುಂಬೈ ಇಂಡಿಯನ್ಸ್‌ ತನ್ನ ಲೆಕ್ಕಾಚಾರದಂತೆ ಉತ್ತಮ ಬೌಲಿಂಗ್‌ ದಾಳಿಯನ್ನು ನಡೆಸಿತಾದರೂ, ಸಂಜು ಸ್ಯಾಮ್ಸ್‌ನ್‌ ಅವರನ್ನು ಕಟ್ಟಿ ಹಾಕುವಲ್ಲಿ ವಿಫಲವಾಯಿತು.

ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್‌ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಶತಕ ಪೂರೈಸುವ ಮೂಲಕ ಅಜೇಯ 101 ರನ್‌ ಗಳಿಸಿದರು. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 207 ರನ್‌ ಪೇರಿಸಿತು.

ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ (22) ಔಟಾದರು. ಅವರ ಹಿಂದೆಯೇ ಸರ್ಫರಾಜ್ ಖಾನ್ (14), ಶಿವಂ ದುಬೆ (05) ಅಲ್ಪ ರನ್‌ಗಳಿಸಿ ಹೊರನಡೆದರು.

ಡೆವಾಲ್ಡ್ ಬ್ರೆವಿಸ್ (21), ಕಾರ್ತಿಕ್ ಶರ್ಮಾ (18) ಮತ್ತು ಜೇಮೀ ಓವರ್ಟನ್ (15) ಕೂಡ ಅತ್ಯಲ್ಪ ರನ್‌ ಕಾಣಿಕೆ ನೀಡಿ ಪೆವಿಲಿಯನ್‌ ಸೇರಿದರು.

ಎಎಮ್ ಗಜನ್ಫರ್, ಅಶ್ವನಿ ಕುಮಾರ್ ತಲಾ ಎರಡು ವಿಕೆಟ್‌ ಪಡೆದರೆ, ಜಸ್ಪ್ರಿತ್ ಬುಮ್ರಾ‌, ಮಿಚೆಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್‌ ಪಡೆದರು.