SK Home Ad
Home ಕ್ರೀಡೆ IPL 2026: ಆರಂಭಿಕ ಆಘಾತದ ನಡುವೆ ರಾಜಸ್ಥಾನ್‌ ಸವಾಲಿನ ಮೊತ್ತ

IPL 2026: ಆರಂಭಿಕ ಆಘಾತದ ನಡುವೆ ರಾಜಸ್ಥಾನ್‌ ಸವಾಲಿನ ಮೊತ್ತ

0
327

ಲಖನೌ: ಲಖನೌ ಸೂಪರ್‌ ಜೈಂಟ್ಸ್‌ ತಂಡದ ಉತ್ತಮ ಬೌಲಿಂಗ್‌ ದಾಳಿಯ ಹೊರತಾಗಿಯೂ ರಾಜಸ್ಥಾನ ರಾಯಲ್ಸ್‌ ತಂಡ ಸವಾಲಿನ ಮೊತ್ತವನ್ನು ಕಲೆ ಹಾಕಿದೆ.

ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ 32ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 159 ರನ್‌ ಗಳಿಸಿತು.

ಆತಿಥೇಯ ಲಖನೌ ಸೂಪರ್ ಜೈಂಟ್ಸ್ ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ದುಕೊಂಡು ಲೆಕ್ಕಾಚಾರದಂತೆ ಆರಂಭದಲ್ಲಿಯೇ ರಾಜಸ್ಥಾನ್‌ನ ಪ್ರಮುಖ ಮೂರು ವಿಕೆಟ್‌ ಉರುಳಿಸಿತು.

ನಾಲ್ಕು ಓವರ್‌ಗಳು ಆಗುವಷ್ಟರಲ್ಲಿಯೇ ಯಶಸ್ವಿ ಜೈಸ್ವಾಲ್‌ (22), ವೈಭವ್‌ ಸೂರ್ಯವಂಶಿ (8) ಮತ್ತು ಧ್ರುವ್ ಜುರೆಲ್ (0) ಪ್ರಮುಖರನ್ನು ಕಳೆದುಕೊಂಡು ರಾಜಸ್ಥಾನ್‌ ಸಂಕಷ್ಟಕ್ಕೆ ಸಿಲುಕಿತು.

ಬಳಿಕ ಬಂದ ರಿಯಾನ್‌ ಪರಾಗ್‌ (20), ಶಿಮ್ರಾನ್‌ ಹೆಟ್ಮಾಯರ್‌ (22) ಹಾಗೂ ಡೊನೊವನ್ ಫೆರೀರಾ (20) ಕೂಡ ಅಲ್ಪ ಮೊತ್ತದ ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ಕೊನೆಯಲ್ಲಿ ರವೀಂದ್ರ ಜಡೇಜಾ ಅಜೇಯ 43 ಮತ್ತು ಶುಭಮ್‌ ದುಬೆ ಅಜೇಯ 19 ರನ್‌ ಗಳಿಸಿದರು. ಈ ಜೋಡಿ 49 ರನ್‌ಗಳ ಜತೆಯಾಟ ನಡೆಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿತು.