Home Advertisement
Home ಸಿನಿ ಮಿಲ್ಸ್ ಕಲರ್ಸ್‌ ಕನ್ನಡದಲ್ಲಿ ಮದುವೆ ಹಂಗಾಮಾ: ಭಾಗ್ಯ-ಪವಿತ್ರ ಬದುಕಿನಲ್ಲಿ ಎದುರಾಯ್ತು ಮಹಾಬಿರುಗಾಳಿ!

ಕಲರ್ಸ್‌ ಕನ್ನಡದಲ್ಲಿ ಮದುವೆ ಹಂಗಾಮಾ: ಭಾಗ್ಯ-ಪವಿತ್ರ ಬದುಕಿನಲ್ಲಿ ಎದುರಾಯ್ತು ಮಹಾಬಿರುಗಾಳಿ!

0
106

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಕಲರ್ಸ್‌ ಕನ್ನಡ’ದ ಎರಡು ಪ್ರಮುಖ ಧಾರಾವಾಹಿಗಳಾದ ‘ಭಾಗ್ಯಲಕ್ಷ್ಮೀ’ ಮತ್ತು ‘ಪವಿತ್ರ ಬಂಧನ’ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿವೆ. ಈ ವಾರ ಬಿಡುಗಡೆಯಾಗಿರುವ ಹೊಸ ಪ್ರೋಮೋಗಳು ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಇಬ್ಬರು ನಾಯಕಿಯರ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗಿವೆ.

ಕಲರ್ಸ್‌ ಕನ್ನಡದ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಕಥೆ ಈಗ ಸುನಾಮಿಯಂತೆ ಬದಲಾಗಿದೆ. ವಿಲನ್‌ ಪಾತ್ರದಾರಿ ಮನೋಜ್, ಪವಿತ್ರಾ ಕುಟುಂಬವನ್ನೇ ಒತ್ತೆ ಇಟ್ಟುಕೊಂಡು ಅವಳನ್ನು ಬಲವಂತವಾಗಿ ಮದುವೆಯಾಗಲು ಸಂಚು ಮಾಡಿದ್ದಾನೆ. ಆದ್ರೆ ಸರಿಯಾದ ಸಮಯಕ್ಕೆ ಎಂಟ್ರಿ ಕೊಟ್ಟ ನಾಯಕ ದೇವ್, ಮನೋಜ್‌ನ ಕೆಟ್ಟ ಆಟಕ್ಕೆ ತಕ್ಕ ಪಾಠ ಕಲಿಸಿದ್ದಾನೆ.

ತನ್ನ ತಮ್ಮ ತಿಲಕ್‌ಗೆ ಕೊಟ್ಟ ಮಾತಿನಂತೆ ಪವಿತ್ರಾಳ ಬದುಕನ್ನು ರಕ್ಷಿಸಲು ದೇವ್ ಆಕೇಯ ಕೊರಳಿಗೆ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದಾನೆ. ತಮ್ಮನನ್ನು ಕಳೆದುಕೊಂಡ ನೋವು ಮತ್ತು ಪವಿತ್ರಾ ಮೇಲಿರುವ ದ್ವೇಷದ ನಡುವೆಯೂ ದೇವ್ ಈ ನಿರ್ಧಾರ ತಗೆದುಕೊಂಡಿದ್ದಾನೆ. ದಿಗ್ಭ್ರಾಂತಳಾಗಿರುವ ಪವಿತ್ರಾ ಈ ಮದುವೆನ್ನು ಒಪ್ಪುತ್ತಾಳೆಯೇ? ದೇವ್‌ನ ತಾಯಿ ಈ ಹಠಾತ್ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ಹಾಗೇ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಒಂದು ದೂಡ್ಡ ತಿರುವು ನೀಡಲಿದೆ. ಅಲ್ಲದೇ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಘಟನೆಯೊಂದು ಸಂಭವಿಸಲಿದೆ ಎನ್ನುವುದು ಸದ್ಯದ ಪ್ರೋಮೋದಲ್ಲಿದೆ. ಭಾಗ್ಯ ತನ್ನ ಮಾವನಿಗೆ ಕೊಟ್ಟ ಮಾತಿಗೆ ಕಟ್ಟುಬಿದ್ದು, ಮತ್ತೆ ತಾಂಡವ್ ಜೊತೆ ಮರುಮಾಂಗಲ್ಯ ಧಾರಣೆಗೆ ಸಜ್ಜಾಗಿದ್ದಾಳೆ.

ಇತ್ತ ಆದಿಶ್ವರ್ ಕೂಡ ಈ ಮದುವೆಗೆ ಸಮ್ಮತಿ ಸೂಚಿಸಿರುವುದು ವೀಕ್ಷಕರಲ್ಲಿ ಆಕ್ರೋಶ ಮೂಡಿಸಿದೆ. ತಾಂಡವ್ ಎಂದಿನಂತೆ ತನ್ನ ಸ್ವಾರ್ಥದ ಮುಖವಾಡ ಹಾಕಿಕೊಂಡು ಅಟ್ಟಹಾಸ ಮೆರೆಯುತ್ತಿದ್ದರೂ, ಭಾಗ್ಯ ಮಾತ್ರ ಮೌನಕ್ಕೆ ಶರಣಾಗಿದ್ದಾಳೆ. ಆದ್ರೆ ಈ ಮೌನದ ಹಿಂದೆ ದೊಡ್ಡ ಬಿರುಗಾಳಿಯೇ ಅಡಗಿರುವ ಸೂಚನೆ ಸಿಗುತ್ತಿದೆ. ಭಾಗ್ಯ ನಿಜವಾಗಿಯೂ ತಾಂಡವ್‌ನ ಮದುವೆಯಾಗುತ್ತಾಳಾ ಅಥವಾ ಮಂಟಪದಲ್ಲಿ ಏನಾದರೂ ಅಚ್ಚರಿಯ ತಿರುವು ಕಾದಿದೆಯೇ ಎಂಬ ಪ್ರಶ್ನೆ ಮೂಡಿದೆ.

ಇಂದಿನಿಂದ ಪ್ರಾರಂಭವಾಗಲಿರುವ ಈ ‘ಮದುವೆ ವಿಶೇಷ’ ಸಂಚಿಕೆಗಳು ಸ್ಯಾಂಡಲ್‌ವುಡ್ ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಮೂಡಿಸಲಿವೆ. ಪವಿತ್ರಾ ಮತ್ತು ಭಾಗ್ಯ ಈ ಇಬ್ಬರೂ ಹೆಣ್ಣುಮಕ್ಕಳು ತಮ್ಮ ಸಂಕಷ್ಟಗಳಿಂದ ಹೇಗೆ ಹೊರಬರುತ್ತಾರೆ? ವಿಧಿ ಆಟ ಇವರನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದು ಈ ವಾರದ ಪ್ರಮುಖ ಕುತೂಹಲಕಾರಿ ಸಂಚಿಕೆಯಾಗಿವೆ.