Home Advertisement
Home ಸುದ್ದಿ ದೇಶ ಲಡಾಖ್‌: 10 ರೂಪಾಯಿ ಮೊಟ್ಟೆ ₹25,000ಕ್ಕೆ ಹರಾಜು

ಲಡಾಖ್‌: 10 ರೂಪಾಯಿ ಮೊಟ್ಟೆ ₹25,000ಕ್ಕೆ ಹರಾಜು

0
88

ಲೇಹ್: ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಬೆಂಬಲ ಸೂಚಿಸಲು ಲೇಹ್ ಜಿಲ್ಲೆಯಲ್ಲಿ ಮನಮುಟ್ಟುವ ಘಟನೆ ನಡೆದಿದೆ. ಸ್ಥಳೀಯ ದೇಣಿಗೆ ಸಂಗ್ರಹ ಅಭಿಯಾನದ ವೇಳೆ ಒಂದು ಸಾಮಾನ್ಯ ಮೊಟ್ಟೆಯನ್ನು ₹25,000ಕ್ಕೆ ಹರಾಜು ಮಾಡಲಾಗಿದ್ದು, ಇದು ಮಾನವೀಯತೆಯ ಅಪೂರ್ವ ಉದಾಹರಣೆಯಾಗಿ ಗಮನ ಸೆಳೆದಿದೆ.

ಮಾನವೀಯತೆ ಮೆರೆಯಿಸಿದ ಲಡಾಖ್ ಜನತೆ: ಇರಾನ್ ಸಂಘರ್ಷದ ಬಲಿಪಶುಗಳಿಗೆ ನೆರವಾಗಲು ಲಡಾಖ್‌ನಲ್ಲಿ ಜನರು ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡುತ್ತಿದ್ದಾರೆ. ಹಣ, ಚಿನ್ನ, ಬೆಳ್ಳಿ, ಆಭರಣಗಳು ಮಾತ್ರವಲ್ಲದೆ, ದಿನನಿತ್ಯದ ವಸ್ತುಗಳನ್ನೂ ದಾನ ಮಾಡಲಾಗುತ್ತಿದೆ. ಈ ಸಂದರ್ಭದಲ್ಲೇ ಸ್ಥಳೀಯ ನಿವಾಸಿ ಶಬೀರ್ ಹುಸೇನ್ ಒಂದು ಮೊಟ್ಟೆಯನ್ನು ₹25,000 ನೀಡಿ ಖರೀದಿಸಿ ಎಲ್ಲರ ಗಮನ ಸೆಳೆದಿದ್ದಾರೆ.

“ಇದು ಸಹಾನುಭೂತಿಯ ಸಂಕೇತ” – ಶಬೀರ್ ಹುಸೇನ್ : ಈ ಕುರಿತು ಮಾತನಾಡಿದ ಶಬೀರ್ ಹುಸೇನ್, “ಮೊಟ್ಟೆಯ ಬೆಲೆ ಕೇವಲ ₹10 ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಇರಾನ್‌ನ ಮಕ್ಕಳ ಪರಿಸ್ಥಿತಿ ತುಂಬಾ ದುಃಖಕರವಾಗಿದೆ. ಅವರಿಗಾಗಿ ಈ ಮೊತ್ತ ನೀಡಿದ್ದೇನೆ. ನಾವು ಈ ಸಮುದಾಯಕ್ಕಾಗಿ ಜೀವಿಸಲು ಸಿದ್ಧರಾಗಿದ್ದೇವೆ,” ಎಂದು ಹೇಳಿದರು.

ಮಕ್ಕಳಿಂದಲೂ ದೇಣಿಗೆ : ಈ ಅಭಿಯಾನದಲ್ಲಿ ಮಕ್ಕಳೂ ಪಾಲ್ಗೊಂಡಿದ್ದು, ತಮ್ಮ “ಗುಲ್ಲಕ್” (ಉಳಿತಾಯದ ಡಬ್ಬಿ) ಒಡೆದು ಹಣ ನೀಡಿದರು ಕೆಲವರು ತಮ್ಮ ಸೈಕಲ್‌ಗಳನ್ನೇ ದಾನ ಮಾಡಿದರು. ಇದು ಮಾನವೀಯತೆಯ ಇನ್ನೊಂದು ಮುಖವನ್ನು ತೋರಿಸಿದೆ.

ವ್ಯಾಪಕ ಬೆಂಬಲ: ಇದೇ ರೀತಿಯ ದೇಣಿಗೆ ಅಭಿಯಾನಗಳು ರಾಂಬನ್ ಜಿಲ್ಲೆಯ ಚಂದರ್‌ಕೋಟ್ ಪ್ರದೇಶದಲ್ಲಿಯೂ ನಡೆದಿವೆ. ಶಿಯಾ ಸಮುದಾಯದ ನೂರಾರು ಜನರು ಒಟ್ಟುಗೂಡಿ ಆರ್ಥಿಕ ಹಾಗೂ ವಸ್ತು ನೆರವು ನೀಡಿದ್ದಾರೆ.

ಕಳೆದ ಒಂದು ತಿಂಗಳಿಂದ ಲಡಾಖ್ ಮತ್ತು ಜಮ್ಮು-ಕಾಶ್ಮೀರ ಭಾಗಗಳಲ್ಲಿ ಈ ರೀತಿಯ ಮಾನವೀಯ ಅಭಿಯಾನಗಳು ನಿರಂತರವಾಗಿ ನಡೆಯುತ್ತಿದ್ದು, ಸಂಗ್ರಹವಾದ ಸಹಾಯವನ್ನು ಶೀಘ್ರದಲ್ಲೇ ಇರಾನ್‌ಗೆ ಕಳುಹಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.