ದೆಹಲಿ: ಇನ್ನಿಂಗ್ಸ್ ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ಸೂರ್ಯಕುಮಾರ ಯಾದವ ಮತ್ತು ರೋಹಿತ್ ಶರ್ಮಾ ಆಸರೆಯಿಂದ ಮುಂಬೈ ತಂಡ ಡೆಲ್ಲಿ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿದೆ.
19ನೇ ಆವೃತ್ತಿಯ ಐಪಿಎಲ್‌ನ 8ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು.
ಇನ್ನಿಂಗ್ಸ್ ಆರಂಭದಲ್ಲಿಯೇ ಮುಂಬೈನ ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್ ಕೇವಲ 9 ರನ್ ಗಳಿಸಿ ಔಟಾದರೆ, ತಿಲಕ ವರ್ಮಾ ಖಾತೆ ತೆರೆಯದೇ ಪೆವಿಲಿಯನ್‌ಗೆ ವಾಪಾಸ್ಸಾದರು. ಆಗ ತಂಡದ ಮೊತ್ತ 2.5 ಓವರ್‌ಗಳಲ್ಲಿ 18 ರನ್ ಆಗಿತ್ತು.
ಮೂರನೇ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ ಯಾದವ ಜೋಡಿ 53 ರನ್‌ಗಳ ಜತೆಯಾಟ ನಡೆಸಿತು. ಈ ವೇಳೆ ರೋಹಿತ್ ಅಕ್ಷರ ಪಟೇಲ್ ಎಸೆತದಲ್ಲಿ ನಿತೀಶ್ ರಾಣಾಗೆ ಕ್ಯಾಚ್ ನೀಡಿ ಔಟಾದರು. ಇವರ ಹಿಂದೆಯೇ ರುದರ್‌ಫೋರ್ಡ್ (5) ಕೂಡ ವಾಪಾಸ್ಸಾದರು.
ನಮನ್ ಧೀರ್ 21 ಎಸೆತದಲ್ಲಿ 28 ರನ್‌ಗಳಿಸಿ ಉಪಯುಕ್ತ ರನ್ ಕಾಣಿಕೆ ನೀಡಿದರೆ, ಮಿಚೆಲ್ ಸ್ಯಾಂಟ್ನರ್ 13 ಎಸೆತಗಳಲ್ಲಿ ಅಜೇಯ 18 ಮತ್ತು ಕಾರ್ಬಿನ್ ಬಾಷ್ ಕೇವಲ 4 ಎಸೆತದಲ್ಲಿ ಅಜೇಯ 11 ರನ್‌ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ 26ಕ್ಕೆ 2 ವಿಕೆಟ್ ಪಡೆದರೆ, ಎನ್‌ಗಿಡಿ, ಅಕ್ಷರ ಪಟೇಲ್, ನಿಗಮ್ ಮತ್ತು ನಟರಾಜನ್ ತಲಾ ಒಂದು ವಿಕೆಟ್ ಪಡೆದರು.























