ತೆಹ್ರಾನ್/ವಾಷಿಂಗ್ಟನ್: ಪರ್ಷಿಯನ್ ಗಲ್ಫ್ ಮತ್ತು ಓಮನ್ ಗಲ್ಫ್ ನಡುವಿನ ಮಹತ್ವದ ಸಮುದ್ರ ಮಾರ್ಗವಾದ (Strait of Hormuz) ಹಾರ್ಮೂಜ್ ಜಲಮಾರ್ಗ ಇದೀಗ ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯ ಕೇಂದ್ರಬಿಂದುವಾಗಿದೆ. ವಿಶ್ವದ ಒಟ್ಟು ತೈಲ ಸಾಗಣೆಯ ಮೂರನೇ ಒಂದು ಭಾಗ (ಸುಮಾರು 21 ಮಿಲಿಯನ್ ಬ್ಯಾರೆಲ್ ಪ್ರತಿದಿನ) ಈ ಕಿರಿದಾದ ಜಲಸಂಧಿಯ ಮೂಲಕವೇ ಸಾಗುತ್ತದೆ.
ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಲಿ ಖಮೇನಿ ಸಾವಿಗೀಡಾದ ನಂತರ, ಇರಾನ್ ಹಾರ್ಮುಜ್ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದೆ. ಕಳೆದ ನಾಲ್ಕು ದಿನಗಳಿಂದ ಹಡಗು ಸಂಚಾರ ಸ್ಥಗಿತಗೊಂಡಿದ್ದು, ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ವರದಿಗಳು ಹೆಚ್ಚಾಗಿವೆ.
Trump ಪರಿಹಾರ : ಈ ಬಿಕ್ಕಟ್ಟಿನ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಕ್ರಮ ಘೋಷಿಸಿದ್ದಾರೆ. ಯುಎಸ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (DFC) ಮೂಲಕ ಗಲ್ಫ್ ಮೂಲಕ ಹಾದುಹೋಗುವ ಎಲ್ಲಾ ದೇಶಗಳ ಹಡಗುಗಳಿಗೆ ರಾಜಕೀಯ ಅಪಾಯ ವಿಮೆ ಮತ್ತು ಹಣಕಾಸು ಖಾತರಿ ಒದಗಿಸಲು ಸೂಚಿಸಿದ್ದಾರೆ.
ನೌಕಾಪಡೆಯ ರಕ್ಷಣೆ (Naval Escorts): ಅಗತ್ಯ ಬಿದ್ದಲ್ಲಿ ಪರ್ಷಿಯನ್ ಕೊಲ್ಲಿಯಲ್ಲಿ ಸಂಚರಿಸುವ ತೈಲ ಟ್ಯಾಂಕರ್‌ಗಳು ಮತ್ತು ವಾಣಿಜ್ಯ ಹಡಗುಗಳಿಗೆ ಅಮೆರಿಕ ನೌಕಾಪಡೆಯು ರಕ್ಷಣೆ ನೀಡಲಿದೆ ಎಂದು ಟ್ರಂಪ್ ಆದೇಶಿಸಿದ್ದಾರೆ.
ವಿಮಾ ಗ್ಯಾರಂಟಿ (Insurance Guarantees): ಈ ಭಾಗದಲ್ಲಿ ಯುದ್ಧದ ಭೀತಿಯಿಂದ ಹಡಗು ಸಾಗಣೆ ಸ್ಥಗಿತಗೊಳ್ಳದಂತೆ ತಡೆಯಲು, ಅಮೆರಿಕ ಸರ್ಕಾರವು ‘ಯುನೈಟೆಡ್ ಸ್ಟೇಟ್ಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್’ (DFC) ಮೂಲಕ ಕೈಗೆಟುಕುವ ದರದಲ್ಲಿ ರಾಜಕೀಯ ಅಪಾಯದ ವಿಮೆಯನ್ನು (Political Risk Insurance) ನೀಡಲು ನಿರ್ಧರಿಸಿದೆ.
ಅಗತ್ಯವಿದ್ದರೆ ನೇರ ಸೈನಿಕ ಕ್ರಮದ ಎಚ್ಚರಿಕೆ ನೀಡಿದ್ದು ಈ ಘೋಷಣೆಯಿಂದ ಕೆಲವು ಹಡಗು ಕಂಪನಿಗಳು ಪುನಃ ಸಂಚಾರ ಆರಂಭಿಸುವ ನಿರೀಕ್ಷೆಯಿದೆ.
ಈ ನೀತಿಯ ಹಿಂದಿನ ಪ್ರಮುಖ ಉದ್ದೇಶಗಳು: ತೈಲ ಬೆಲೆ ನಿಯಂತ್ರಣ ಉದ್ದೇಶ ಹೊಂದಿದ್ದು ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಗಗನಕ್ಕೇರುತ್ತಿರುವ ಜಾಗತಿಕ ಕಚ್ಚಾ ತೈಲ ಬೆಲೆಯನ್ನು ಸ್ಥಿರಗೊಳಿಸುವುದು ಟ್ರಂಪ್ ಅವರ ಮುಖ್ಯ ಗುರಿಯಾಗಿದೆ.
ಆರ್ಥಿಕ ಭದ್ರತೆ: ಜಲಸಂಧಿಯ ಮೂಲಕ ಹರಿಯುವ ವಿಶ್ವದ 20% ಕ್ಕೂ ಹೆಚ್ಚು ತೈಲ ಪೂರೈಕೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಅಮೆರಿಕದ ಆದ್ಯತೆಯಾಗಿದೆ
ಇರಾನ್‌ನ ಪ್ರತಿಕ್ರಿಯೆ ಏನು?: ಇರಾನ್ ಈಗಾಗಲೇ ಗಲ್ಫ್ ಪ್ರದೇಶದಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರೆಸುತ್ತಿದೆ. Saudi Arabiaದ ಪ್ರಮುಖ ತೈಲ ಸಂಸ್ಕರಣಾಗಾರ ‘ರಾಸ್ ತನುರಾ’ ಮೇಲೆ ದಾಳಿ ನಡೆದಿದ್ದು, ಉತ್ಪಾದನೆ ತಾತ್ಕಾಲಿಕವಾಗಿ ನಿಂತಿದೆ. Qatar ಅನಿಲ ರಫ್ತು ವ್ಯವಸ್ಥೆಯೂ ವ್ಯತ್ಯಯಕ್ಕೊಳಗಾಗಿದೆ.
ಅಮೆರಿಕದ ಯುದ್ಧನೌಕೆಗಳು ಮತ್ತು ತೈಲ ಟ್ಯಾಂಕರ್ಗಳು ಒಂದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಉಂಟಾಗಿದ್ದು, ಇದು ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗುವ ಆತಂಕ ಹೆಚ್ಚಿಸಿದೆ.
ತೈಲ ಮತ್ತು ಅನಿಲ ಬೆಲೆ ಏರಿಕೆ: ಬ್ರೆಂಟ್ ಕಚ್ಚಾ ತೈಲ: 7-8% ಏರಿಕೆ, $81 ದಾಟಿದೆ, $100 ಮೀರಬಹುದೆಂಬ ತಜ್ಞರ ಎಚ್ಚರಿಕೆ ನೀಡಿದ್ದಾರೆ, ಯುರೋಪ್‌ನಲ್ಲಿ ಅನಿಲ ಬೆಲೆ: 30-40% ಏರಿಕೆ ಹಾಗೂ ಅಮೆರಿಕದಲ್ಲಿ ಪೆಟ್ರೋಲ್: ಪ್ರತಿ ಗ್ಯಾಲನ್ $3.11 (11 ಸೆಂಟ್ ಏರಿಕೆ) ಪ್ಯಾರಿಸ್ ಸೇರಿದಂತೆ ಹಲವು ಯುರೋಪಿಯನ್ ನಗರಗಳಲ್ಲಿ ಜನರು ಪೆಟ್ರೋಲ್ ಪಂಪ್‌ಗಳ ಬಳಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ.
ಭಾರತಕ್ಕೆ ಪರಿಣಾಮ: ಭಾರತವು ತನ್ನ ತೈಲ ಅಗತ್ಯಗಳಲ್ಲಿ ಸುಮಾರು 88% ಅನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಅರ್ಧದಷ್ಟು ಹಾರ್ಮುಜ್ ಮೂಲಕ ಬರುತ್ತದೆ. 40-45 ದಿನಗಳ ಬ್ಯಾಕಪ್ ದಾಸ್ತಾನು (ಸುಮಾರು 100 ಮಿಲಿಯನ್ ಬ್ಯಾರೆಲ್) ಕಚ್ಚಾ ತೈಲ $10 ಏರಿದರೆ ಪೆಟ್ರೋಲ್/ಡೀಸೆಲ್ ₹2-3 ಹೆಚ್ಚಳ ಸಾಧ್ಯ, LPGಯಲ್ಲಿ 85% ಗಲ್ಫ್ ಅವಲಂಬನೆ ಇದ್ದು ದೀರ್ಘಕಾಲದ ನಿರ್ಬಂಧದಿಂದ ಆಮದು ಬಿಲ್ ಏರಿಕೆ, ಹಣದುಬ್ಬರ ಒತ್ತಡ ಕುರಿತಂತೆ ಭಾರತ ಪರ್ಯಾಯ ಮಾರ್ಗಗಳ ಮತ್ತು ಹೆಚ್ಚುವರಿ ದಾಸ್ತಾನು ಸಂಗ್ರಹದ ಕುರಿತು ಚಿಂತನೆ ಆರಂಭಿಸಿದೆ.
ಅಮೆರಿಕ ನೌಕಾಪಡೆಯ ಮೊದಲ ಕಾನ್ವಾಯ್ ಈಗಾಗಲೇ ಗಲ್ಫ್ ಪ್ರದೇಶ ಪ್ರವೇಶಿಸಿದ್ದು, ಕೆಲವು ತೈಲ ಟ್ಯಾಂಕರ್ಗಳು ಸುರಕ್ಷಿತವಾಗಿ ಹೊರಟಿರುವ ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ ಯುಎನ್ ಭದ್ರತಾ ಮಂಡಳಿ ತುರ್ತು ಸಭೆ ಕರೆದಿದ್ದು, ರಾಜತಾಂತ್ರಿಕ ಮಾತುಕತೆ ಆರಂಭಿಸುವ ಯತ್ನಗಳು ನಡೆಯುತ್ತಿವೆ. ಚೀನಾ ಮತ್ತು ಯುರೋಪಿಯನ್ ಒಕ್ಕೂಟ ಕೂಡ ಶಾಂತಿ ಮಾತುಕತೆಗೆ ಒತ್ತಾಯಿಸಿವೆ.






















