Home Advertisement
Home ನಮ್ಮ ಜಿಲ್ಲೆ ಹಾವೇರಿ ರಸ್ತೆ ಅಪಘಾತ: ನವ ಜೋಡಿ ದುರ್ಮರಣ

ರಸ್ತೆ ಅಪಘಾತ: ನವ ಜೋಡಿ ದುರ್ಮರಣ

0
93

ಹಾವೇರಿ: ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ರವಿವಾರ ನಸುಕಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿ ಕೇವಲ 15 ದಿನಗಳ ಹಿಂದಷ್ಟೇ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿಗಳು ಮೃತಪಟ್ಟಿರುವ ಘಟನೆ ಶಿಗ್ಗಾವಿ ತಾಲೂಕು ಕಡಹಳ್ಳಿ ಬಳಿ ಸಂಭವಿಸಿದೆ.

ಹಾವೇರಿಯ ಕಾರ್ತಿಕ್ ಹೂಗಾರ್ (33), ಪತ್ನಿ ಐಶ್ವರ್ಯ ಹೂಗಾರ್ (26) ಸ್ಥಳದಲ್ಲೇ ಮೃತಪಟ್ಟಿರುವ ದುರ್ದೈವಿಗಳು.

ಹುಬ್ಬಳ್ಳಿ ಕಡೆಯಿಂದ ಶಿಗ್ಗಾವಿ ಕಡೆಗೆ ಬರುತ್ತಿದ್ದ ವ್ಯಾಗನ್ನಾರ್ ಕಾರು ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ.

ಫೆ. 13ರಂದು ಮದುವೆಯಾಗಿದ್ದ ಜೋಡಿ ನವಲಗುಂದ ಕಾಮಣ್ಣನಿಗೆ ಪೂಜೆ ಸಲ್ಲಿಸಿ ಮರಳಿ ಹಾವೇರಿಗೆ ಬರುವಾಗ ಘಟನೆ ನಡೆದಿದೆ.

.